ರಾಮದುರ್ಗ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾ ದಿನ ಮತ್ತು ಪರಿಸರ ಪ್ರಜ್ಞೆ ಉಪನ್ಯಾಸ ಕಾರ್ಯಕ್ರಮವನ್ನು ಉದ್ಯಮಿ ಪ್ರದಿಪ ಪಟ್ಟಣ ಉದ್ಘಾಟಿಸಿದರು. ಪ್ರೊ.ಎಸ್​.ಎಂ. ಸಕ್ರಿ, ಡಾ.ಬಿ.ಎಲ್​. ಸಂಕನಗೌಡ್ರ, ಪುಷ್ಪಾ ಬಿಜ್ಜರಗಿ, ಗೀತಾ ಗುರುಮಠ ಇತರರಿದ್ದರು. 
ಜಿಲ್ಲೆ

ಓದುವ ಹವ್ಯಾಸ ಬೆಳೆಸಿಕೊಳ್ಳಲಿ

ರಾಮದುರ್ಗ: ಪ್ರಜ್ಞಾವಂತಿಕೆ ಹೊಂದಿದ ಮಾನವ ಪ್ರಜಾಪ್ರಭುತ್ವದ ತಳಹದಿಯಲ್ಲಿ ಬದುಕಿದ್ದಾನೆ. ಪ್ರಜಾಪ್ರಭುತ್ವ ವ್ಯವಸ್ಥೆ ಕಾಪಾಡುವುದು ನಾಲ್ಕನೇ ಅಂಗವಾದ ಮಾಧ್ಯಮ ೇತ್ರದ ಜವಾಬ್ದಾರಿ ಎಂದು ಉದ್ಯಮಿ ಪ್ರದಿಪ ಪಟ್ಟಣ ಹೇಳಿದರು.

ಪಟ್ಟಣದ ಸಿಡಿ ಹಲ್ಯಾಳ ಪ್ರೌಢಶಾಲೆಯಲ್ಲಿ ಮೌಲ್ಯ ಸಂಪದ ಸ್ವಯಂಸೇವಾ ಸಂಸ್ಥೆ, ಪತ್ರಿಕಾ ಬಳಗ, ಚುಟುಕು ಸಾಹಿತ್ಯ ಪರಿಷತ್​ ತಾಲೂಕು ಟಕ, ಪ್ರೌಢಶಾಲೆಯ ಸಂಯುಕ್ತ ಆಶ್ರಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪತ್ರಿಕಾ ದಿನ ಮತ್ತು ಪರಿಸರ ಪ್ರಜ್ಞೆ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪ್ರತಿಕೆ ಓದುವುದರಿಂದ ಸಂತಸ ದೊರೆಯುತ್ತದೆ. ಪ್ರತಿಯೊಬ್ಬರೂ ಪತ್ರಿಕೆಗಳನ್ನು ಕೊಂಡು ಓದುವ ಹವ್ಯಾಸ ಬೆಳೆಸಿಕೊಂಡಾಗ ಮಾತ್ರ ಪತ್ರಿಕಾ ರಂಗದ ಬೆಳೆವಣಿಗೆ ಸಾಧ್ಯವಿದೆ. ಪರಿಸರದ ಬಗೆಗೂ ಪ್ರತಿಯೊಬ್ಬರೂ ಕಾಳಜಿ ವಹಿಸುವುದು ಅಗತ್ಯ ಎಂದರು.

ಅಧ್ಯತೆ ವಹಿಸಿ ಮಾತನಾಡಿದ ವಿಶ್ರಾಂತ ಪ್ರಾಚಾರ್ಯ ಪ್ರೊ.ಎಸ್​.ಎಂ. ಸಕ್ರಿ, ಸಾಮಾಜಿಕ ಮಾಧ್ಯಮಗಳ ಪ್ರಭಾವವು ವಿಚಾರ ವಿನಿಮಯಕ್ಕೆ ದಾರಿ ಮಾಡಿಕೊಟ್ಟಂತಾಗಿದೆ. ಪರಿಸರದ ಶಿಶುವಾದ ಮಾನವ ಅದರ ಮಾಲೀಕನಂತೆ ವರ್ತಿಸುವುದು ಸರಿಯಲ್ಲ. ಪರಿಸರ ಪ್ರಜ್ಞೆ ಇರಬೇಕು. ಎಲ್ಲರಿಂದ ಸಂರಸುವ ಕಾರ್ಯ ನಡೆಯಬೇಕಿದೆ ಎಂದರು.

ಪತಂಜಲಿ ಯೋಗ ಪ್ರತಿಷ್ಠಾನದ ಅಧ್ಯ ಡಾ.ಬಿ.ಎಲ್​. ಸಂಕನಗೌಡ್ರ, ಚುಟುಕು ಸಾಹಿತ್ಯ ಪರಿಷತ್​ ಗೌರವಾಧ್ಯೆ ಪುಷ್ಪಾ ಬಿಜ್ಜರಗಿ, ಮಹಿಳಾ ಅಧ್ಯೆ ಗೀತಾ ಗುರುಮಠ, ಅರಣ್ಯ ಇಲಾಖೆಯ ಅಧಿಕಾರಿ ವಿನಾಯಕ ಸೇರಿ ಇತರರು ಮಾತನಾಡಿದರು. ಪರಿಸರ ಸಂರಣೆ ಪ್ರತಿಜ್ಞಾವಿಧಿಯನ್ನು ವಿಶ್ರಾಂತ ಪ್ರಾಚಾರ್ಯ ಪ್ರೊ.ಎಸ್​.ಎಂ. ಸಕ್ರಿ ಬೋಧಿಸಿದರು. ಚುಟುಕು ಸಾಹಿತ್ಯ ಪರಿಷತ್​ ಅಧ್ಯ ಬಿ.ಬಿ. ಹಾಜಿ ಪ್ರಾಸ್ತಾವಿಕ ಮಾತನಾಡಿದರು. ಎಸ್​.ಎಸ್​.ಜೋಗಳೆ ಸ್ವಾಗತಿಸಿದರು. ಸೋಮಶೇಖರ ಸೊಗಲದ ನಿರೂಪಿಸಿ, ವಂದಿಸಿದರು.