ಹುಣಸೂರು ನಗರದ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.  
ಜಿಲ್ಲೆ

ಓದಿನೊಂದಿಗೆ ಕೌಶಲ ಹೆಚ್ಚಿಸಿಕೊಳ್ಳಿ

Mysuru Rural


ಹುಣಸೂರು: ನೂತನ ಶಿಕ್ಷಣ ನೀತಿ ಕೌಶಲತೆಗೆ ಹೆಚ್ಚಿನ ಆದ್ಯತೆ ನೀಡಿದ್ದು, ವಿದ್ಯಾರ್ಥಿಗಳು ಓದಿನೊಂದಿಗೆ ಕೌಶಲ ಹೆಚ್ಚಿಸುವ ಪಠ್ಯೇತರ ಚಟುವಟಿಕೆಗಳಲ್ಲೂ ಭಾಗವಹಿಸಬೇಕೆಂದು ನಗರದ ಸರ್ಕಾರಿ ಮಹಿಳಾ ಕಾಲೇಜು ಅಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷ ಹನಗೋಡು ನಟರಾಜ್ ಸಲಹೆ ನೀಡಿದರು.

ಕಾಲೇಜಿನ ಸಭಾಂಗಣದಲ್ಲಿ ಶುಕ್ರವಾರ ಪ್ರಥಮ ವರ್ಷದ ವಿದ್ಯಾರ್ಥಿನಿಯರಿಗೆ ಆಯೋಜಿಸಿದ್ದ ಅಭಿವಿನ್ಯಾಸ ಮತ್ತು ಸ್ವಾಗತ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಅಂಕಗಳೊಂದಿಗೆ ಓಡುವ ಕಾಲ ಮುಗಿಯಿತು. ನಿಮ್ಮಲ್ಲಿ ಸಂಘಟನಾತ್ಮಕ, ವಿಷಯವೊಂದನ್ನು ಪ್ರಸ್ತುತಿಪಡಿಸುವ ಕೌಶಲ ಅಗತ್ಯ ಎಂದರು.

ಐಕ್ಯೂಎಸಿ ಸಂಚಾಲಕ ರಮಣಿ ನಾಯಕ್, ಪ್ರಾಂಶುಪಾಲ ಜ್ಞಾನಪ್ರಕಾಶ್, ಸಹಾಯಕ ಪ್ರಾಧ್ಯಾಪಕ ಬಿ.ಎಂ.ನಾಗರಾಜು, ದೈಹಿಕ ಶಿಕ್ಷಣ ನಿರ್ದೇಶಕ ಡಾ.ಕೆ.ಎಸ್.ಭಾಸ್ಕರ್, ಪ್ರಾಧ್ಯಾಪಕರಾದ ಡಾ.ಟಿ.ಕೆ.ಬೋಪಯ್ಯ, ರಜಿಯಾ ಸುಲ್ತಾನ, ಎಚ್.ಆರ್.ವಿಶ್ವನಾಥ್, ಡಾ.ನಂಜುಂಡಸ್ವಾಮಿ, ಡಾ.ದೀಪುಕುಮಾರ್, ಎನ್.ಕರುಣಾಕರ್ ಭಾಗವಹಿಸಿದ್ದರು.