ಕಲಬುರಗಿ: ಮುಗ್ದ ಮಕ್ಕಳ ಶಾಲಾರಂಭ, ಕಲಿಕೆಯೂ ಸದಾ ಖುಷಿಯಿಂದ ಕೂಡಿರಲಿ. ಅವರ ಮುಖದಲ್ಲಿನ ನಗು ಎಂದಿಗೂ ಮಾಸದಂತೆ ಬೋಧನೆ ಇರಲಿ ಎಂದು ಎಸ್ಬಿ ಪಾಟೀಲ್ ಗ್ರೂಪ್ ವ್ಯವಸ್ಥಾಪಕ ನರ‍್ದೇಶಕ, ಬಿಜೆಪಿ ಮಹಾನಗರ ಜಿಲ್ಲಾಧ್ಯಕ್ಷ ಚಂದು ಪಾಟೀಲ್ ಹೇಳಿದರು.
ನಗರದ ಚಂದ್ರಕಾಂತ ಪಾಟೀಲ್ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ ನೂತನ ಹವಾನಿಯಂತ್ರಿತ ಟಿನಿ ಟೋಟ್ಸ್ (ಎಲ್ಕೆಜಿ) ತರಗತಿ ಕೋಣೆಗಳನ್ನು ಉದ್ಘಾಟಿಸಿ ಮಾತನಾಡಿ, ಬೋಧನೆಯಷ್ಟೇ ಅಲ್ಲ ಮೌಲ್ಯಯುತ ಜೀವನ ಪಾಠವನ್ನು ಕಲಿಸುವ ಅಗತ್ಯವಿದೆ. ಹೊಸತನ್ನು ಅರಸುವ ಮಕ್ಕಳಿಗೆ ಗುಣಮಟ್ಟದ, ಉತ್ಕೃಷ್ಟ ಸೌಲಭ್ಯ ಒದಗಿಸುತ್ತಿದ್ದು, ಶಾಲೆಯ ಮೇಲೆ ವಿಶ್ವಾಸವಿಟ್ಟ ಎಲ್ಲ ಪೋಷಕರಿಗೆ ಧನ್ಯವಾದ ತಿಳಿಸಿದರು.
ಪ್ರಾಂಶುಪಾಲ ಕೆ.ರವಿಕುಮಾರ, ಉಪಪ್ರಾಂಶುಪಾಲ ಆಕಾಶ ಉಬಾಲೆ ಇತರರು ಇದ್ದರು.