ಬಸವಕಲ್ಯಾಣ: ಕಾಲೇಜು ದಿನಗಳಲ್ಲಿ ವಿದ್ಯಾರ್ಥಿಗಳು ಅಧ್ಯಯನದ ಕಡೆಗೆ ಹೆಚ್ಚು ಕೇಂದ್ರೀಕರಿಸಿ ಹೊರತು ಪ್ರೀತಿ, ಪ್ರೇಮ ದುಷ್ಚಟಗಳ ಕಡೆಗೆ ವಾಲಬೇಡಿ ಎಂದು ಸಿಪಿಐ ಅಲಿಸಾಬ್ ಸಲಹೆ ನೀಡಿದರು.
ನಗರದ ಶ್ರೀ ಬಸವೇಶ್ವರ ಪದವಿ ಪೂರ್ವ ಹಾಗೂ ಪದವಿ ಕಾಲೇಜಿನಲ್ಲಿ ಪೊಲೀಸ್ ಇಲಾಖೆಯಿಂದ ಏರ್ಪಡಿಸಿದ್ದ ಅಪರಾಧ ತಡೆ ಜಾಗೃತಿ ಹಾಗೂ ರಸ್ತೆ ಸಂಚಾರ ಸುರಕ್ಷತೆ ಅಭಿಯಾನದಲ್ಲಿ ಮಾತನಾಡಿ, ವಿದ್ಯಾರ್ಥಿಗಳು ಭವಿಷ್ಯ ರೂಪಿಸಿಕೊಳ್ಳಲು ಓದು ಬರಹ ಅಧ್ಯಯನದ ಕಡೆಗೆ ಗಮನ ಕೊಡಬೇಕು ಎಂದರು.
ಅಪರಾಧದ ಆವರಣದಲ್ಲಿ ಗಂಡು ಹೆಣ್ಣು ಎಂಬ ಲಿಂಗ ಭೇದವಿಲ್ಲ. ಯಾರೇ ಅಪರಾಧ ಮಾಡಿದರೂ ಅವರು ಶಿಕ್ಷೆಗೆ ಅರ್ಹರು. ಕಾನೂನಿಗೆ ಗೌರವಿಸುವ, ಮಹತ್ವ ನೀಡವ, ಉತ್ತಮ ವರ್ತನೆ ರೂಢಿಸಿಕೊಳ್ಳಿ ಎಂದರು.
ಸAಚಾರಿ ಪಿಎಸ್‌ಐ ಸುವರ್ಣ ಮಲಶೆಟ್ಟಿ ಮಾತನಾಡಿ, ಎಲ್ಲರೂ ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ, ಸಂಚರಿಸಬೇಕು. ಜೀವಕ್ಕಿಂತ ದೊಡ್ಡದು ಬೇರಿಲ್ಲ ಎಂದರು.
ನಗರ ಪೊಲೀಸ್ ಠಾಣೆ ಅಪರಾಧ ವಿಭಾಗದ ಪಿಎಸ್‌ಐ ನಂದಕುಮಾರ ಮುಳೆ ಮಾತನಾಡಿ, ವಿದ್ಯಾರ್ಥಿಗಳು ಅವರ ಗುರಿ ಸಾಧನೆಗೆ ಮುಂದಾಗಬೇಕು. ಚಿಕ್ಕ ವಯಸ್ಸಿನಲ್ಲಿ ಅಪರಾಧದತ್ತ ಮನಸ್ಸು ವಾಲಿಸಬಾರದು. ಅನಾವಶ್ಯಕವಾಗಿ ದ್ವಿಚಕ್ರ ವಾಹನದ ಮೇಲೆ ತಿರುಗಬೇಡಿ ಎಂದರು.
ಪಿಎಸ್‌ಐ ಅಂಬರೀಶ ವಾಗ್ಮೊಡೆ ಮಾತನಾಡಿ, ಬೀದರ್ ಜಿಲ್ಲೆಯಲ್ಲಿ ಹೆಚ್ಚು ಜನರು ರಸ್ತೆ ಅಪಘಾತದಲ್ಲಿ ಮೃತಪಟ್ಟ ಘಟನೆ ನಡೆದಿವೆ. ರಸ್ತೆ ಸಂಚಾರದ ವೇಳೆ ನಿಯಮ ಪಾಲಿಸಬೇಕು ಎಂದರು.
ಬಿಡಿಪಿಸಿ ಅಧ್ಯಕ್ಷ ಬಸವರಾಜ ಕೋರಕೆ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಶ್ರೀಕಾಂತ ಬಡದಾಳೆ, ಆಡಳಿತಾಧಿಕಾರಿ ಡಾ.ಮಲ್ಲಿಕಾರ್ಜುನ ಲಕ್ಕಶೆಟ್ಟಿ ಇತರರಿದ್ದರು. ಡಾ.ಭೀಮಾಶಂಕರ ಬಿರಾದಾರ ಸ್ವಾಗತಿಸಿದರು. ಡಾ.ಬಸವರಾಜ ಖಂಡಾಳೆ ನಿರೂಪಣೆ ಮಾಡಿದರು. ಡಾ.ರುದ್ರಮಣಿ ಮಠಪತಿ ವಂದಿಸಿದರು.