ಜಿಲ್ಲೆ

ಓಡನಹಳ್ಳಿ ಗ್ರಾಪಂಗೆ ಶ್ರುತಿ ಕುಮಾರ್ ಅಧ್ಯಕ್ಷೆ

ಹೊಳೆನರಸೀಪುರ: ತಾಲೂಕಿನ ಓಡನಹಳ್ಳಿ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷೆಯಾಗಿ ಶ್ರುತಿ ಕುಮಾರ್ ಹಾಗೂ ಉಪಾಧ್ಯಕ್ಷರಾಗಿ ಚಂದ್ರಶೇಖರ್ ಆಯ್ಕೆಯಾದರು.


ಓಡನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ 13 ಸದಸ್ಯರಿದ್ದು, ಅಧ್ಯಕ್ಷ ಸ್ಥಾನಕ್ಕೆ ಶ್ರುತಿ ಕುಮಾರ್ ಹಾಗೂ ಮೋಹನಾಕುಮಾರಿ ನಾಮಪತ್ರ ಸಲ್ಲಿಸಿದ್ದರು. ಉಪಾಧ್ಯಕ್ಷ ಸ್ಥಾನಕ್ಕೆ ಚಂದ್ರಶೇಖರ್ ಸ್ಪರ್ಧಿಸಿದ್ದರು. ಚುನಾವಣೆಯಲ್ಲಿ ಶ್ರುತಿ ಕುಮಾರ್ ಅವರು 8 ಮತ ಪಡೆದು ಗೆಲುವು ಸಾಧಿಸಿದರೆ, ಮೋಹನಾ ಕುಮಾರಿ 5 ಮತ ಪಡೆದು ಪಾರಾಜಿತರಾದರು. ಉಪಾಧ್ಯಕ್ಷ ಸ್ಥಾನಕ್ಕೆ ಬೇರ‌್ಯಾರು ನಾಮಪತ್ರ ಸಲ್ಲಿಸದ ಕಾರಣ ಚಂದ್ರಶೇಖರ್ ಅವಿರೋಧವಾಗಿ ಆಯ್ಕೆಯಾದರು.

ಬಿಸಿಎಂ ಇಲಾಖೆ ಕಲ್ಯಾಣಾಧಿಕಾರಿ ಮಂಜುನಾಥ್ ಚುನಾವಣಾ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು. ತಾಪಂ ಎಒ ಶಿವಕುಮಾರ್, ಪಿಡಿಒ ವಿಷಕಂಠಯ್ಯ ಇದ್ದರು.