ಪಾಂಡವಪುರ: ತಾಲೂಕಿನ ಚಿನಕುರಳಿಯ ಎಸ್‌ಟಿಜಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಸಾಯನಶಾಸ್ತ್ರ ವಿಭಾಗದ ಐಐಸಿ ಹಾಗೂ ಆಂತರಿಕ ಗುಣಮಟ್ಟ ಭರವಸೆ ಕೋಶ ಘಟಕದ ಸಹಯೋಗದೊಂದಿಗೆ ವಿಶ್ವ ಓಜೋನ್ ದಿನ ಕಾರ್ಯಕ್ರಮವನ್ನು ಮಂಗಳವಾರ ಆಯೋಜಿಸಲಾಗಿತ್ತು.
ಪ್ರಾಂಶುಪಾಲ ಡಾ.ನಿಶಾಂತ್ ಎ.ನಾಯ್ಡು ಮಾತನಾಡಿ, ಪ್ರತಿದಿನದ ಜೀವನದಲ್ಲಿ ಸಣ್ಣ ಸಣ್ಣ ಪ್ರಕ್ರಿಯೆಗಳಿಂದ ಓಜೋನ್ ಪದರವನ್ನು ಕಾಪಾಡುವತ್ತ ಹೆಜ್ಜೆ ಇಡಬೇಕೆ ಹೊರತು ಕೈಗಾರಿಕೆಗಳನ್ನೇ ನೇರ ಹೊಣೆ ಮಾಡುವುದನ್ನು ನಿಲ್ಲಿಸಬೇಕು. ಓಜೋನ್ ಪದರಗಳು ನಾಶವಾಗದಂತಹ ಪ್ರಕ್ರಿಯೆಗಳ ಬಗ್ಗೆ ನಾವು ಗಮನಹರಿಸಿದರೆ ಮುಂದಿನ ಪೀಳಿಗೆಗೆ ಪದರವನ್ನು ಉಳಿಸುವ ಹಾಗೂ ಕಾಪಾಡಿಕೊಳ್ಳಲು ನಾವೆಲ್ಲರೂ ಮಾದರಿಯಾಗುತ್ತೇವೆ ಎಂದರು.
ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಸಿ.ಎಸ್.ಪುಟ್ಟರಾಜು ಹಾಗೂ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿ.ಪಿ.ಶಿವರಾಜು ಸಹಕಾರಕ್ಕೆ ಕೃತಜ್ಞತೆ ಅರ್ಪಿಸಿದರು. ಅಂತಿಮ ವರ್ಷದ ವಿದ್ಯಾರ್ಥಿಗಳಾದ ಎಸ್.ಎಸ್.ಗಿರೀಶ್, ಸಿ.ಎಂ.ರಕ್ಷಿತ ಪ್ರಾತ್ಯಕ್ಷಿಕೆ ಮೂಲಕ ಮಾಹಿತಿ ನೀಡಿದರು.
ಆಂತರಿಕ ಗುಣಮಟ್ಟ ಭರವಸೆಯ ಘಟಕದ ಸಂಯೋಜಕ ಡಿ.ರಘುನಂದನ್, ನ್ಯಾಕ್ ಕಮಿಟಿಯ ಸಂಯೋಜಕ ಎಚ್.ಚರಣ್‌ರಾಜ್, ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥೆ ಕೆ.ಎಸ್.ಹರಿಣಿ, ಸಹಾಯಕ ಪ್ರಾಧ್ಯಾಪಕಿ ಕೆ.ಜೆ.ಶಿಲ್ಪಶ್ರೀ ಇತರರು ಇದ್ದರು.