ಕಕ್ಕೇರಿ: ಪಾಲಕರು ಮಕ್ಕಳಿಗೆ ಉತ್ತಮ ಸಂಸ್ಕಾರ ಮತ್ತು ಸಂಸ್ಕೃತಿ ನೀಡಿದಲ್ಲಿ ಉತ್ತಮ ನಾಗರಿಕರಾಗಲು ಸಾಧ್ಯ ಎಂದು ಪಿಕೆಪಿಎಸ್ ಅಧ್ಯಕ್ಷ ಯಲ್ಲಪ್ಪ ಗುಪಿತ ಹೇಳಿದರು.
ಗ್ರಾಮದ ಸರ್ಕಾರಿ ಪ್ರಾಥಮಿಕ ಹಿರಿಯ ಕನ್ನಡ ಶಾಲೆಯಲ್ಲಿ ಈಚೆಗೆ ಹಮ್ಮಿಕೊಂಡಿದ್ದ ವಾರ್ಷಿಕೋತ್ಸವ, ಸ್ನೇಹ ಸಮ್ಮೇಳನ ಕಾರ್ಯಕ್ರಮದಲ್ಲಿ ಮಾತನಾಡಿದರು.
ರೈತ ಮುಖಂಡ ಕಿಶೋರ ಮಿಠಾರಿ ಮಾತನಾಡಿ, ಮಕ್ಕಳು ಉತ್ತಮ ಶಿಕ್ಷಣ ಪಡೆದು ಉನ್ನತ ಅಧಿಕಾರಿಗಳಾಗಬೇಕು ಎಂದರು.
ಖಾನಾಪುರ ಭಾಗ್ಯಲಕ್ಷ್ಮೀ ಸಕ್ಕರೆ ಕಾರ್ಖಾನೆಯ ಮಾಜಿ ಅಧ್ಯಕ್ಷ ಆರ್.ಎ. ಪಾಟೀಲ ಮಾತನಾಡಿ, ಮಕ್ಕಳು ಮೊಬೈಲ್ ಬಳಕೆ ಕಡಿಮೆ ಮಾಡಬೇಕು ಎಂದರು.
ಶಾಲಾ ಮುಖ್ಯಶಿಕ್ಷಕ ಎಂ.ಎಂ. ಕೋಟೂರ, ಗ್ರಾಪಂ ಅಧ್ಯಕ್ಷೆ ಕವಿತಾ ಹಂಚಿನಮನಿ ಮಾತನಾಡಿದರು. ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಎಸ್‌ಡಿಎಂಸಿ ಅಧ್ಯಕ್ಷ ನಿಂಗೋಜಿ ಸಂಬರಗಿ ಅಧ್ಯಕ್ಷತೆ ವಹಿಸಿದ್ದರು. ಸಂತೋಷ ಕುಕಡೊಳ್ಳಿ, ಸುಲೇಮಾನ ಜಮಾದಾರ, ಅರ್ಜುನ ಮಂಜಲ್ಕರ, ಡಾ.ಪ್ರಸನ್ನ ದೊಡ್ಡೆಬೈಲಕರ, ಉದ್ಯಮಿ ಅಸ್ಲಾಂ ಪಟೇಲ, ನಿವೃತ್ತ ಶಿಕ್ಷಕರಾದ ಐ.ಜಿ. ಸಂಪಗಾವಿ, ಪಿ.ಕೆ. ಫಿರೋಜಿ, ನಾಗಪ್ಪ ಅಂಬೋಜಿ, ಬಿಪ್ಟಪ್ಪ ಗೌಡ್ರ, ಬಿಇಒ ಎ.ಆರ್.ಅಂಬಗಿ, ಈರಣ್ಣ ಅಂಕಲಗಿ ಇತರರಿದ್ದರು.