ಜಿಲ್ಲೆ

ಒಳಿತು ಮಾಡಿದರೆ ಜನ್ಮ ಸಾರ್ಥಕ

ನಾಗರಮುನ್ನೋಳಿ: ಸಮಾಜಕ್ಕೆ ಏನಾದರೂ ಕೊಡುಗೆ ನೀಡಿದರೆ ಮಾತ್ರ ಮಾನವ ಜನ್ಮ ಸಾರ್ಥಕ ಎಂದು ಹುಣಶ್ಯಾಳ ಪಿಜಿಯ ಸಿದ್ಧಲಿಂಗ ಕೈವಲ್ಯಾಶ್ರಮದ ನಿಜಗುಣದೇವ ಸ್ವಾಮೀಜಿ ಹೇಳಿದರು.

ಗ್ರಾಮದ ಬಸವೇಶ್ವರ ದೇವಸ್ಥಾನದಲ್ಲಿ ಶಿವ-ಬಸವ ಜಯಂತಿ ಅಂಗವಾಗಿ ಭಾನುವಾರ ಹಮ್ಮಿಕೊಂಡಿದ್ದ ಹತ್ತು ದಿನಗಳ ಜೀವನ ದರ್ಶನ ಪ್ರವಚನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಪ್ರವಚನ ಆಲಿಸುವುದನ್ನು ರೂಢಿಸಿಕೊಳ್ಳಬೇಕು. ಹುಟ್ಟಿದ ಮನುಷ್ಯ ಸಾಯಲೇಬೇಕು. ಆದರಿಂದ ಇರುವಷ್ಟು ದಿನ ಸಮಾಜಕ್ಕೆ ಒಳ್ಳೆಯದು ಮಾಡಬೇಕು. ಮಕ್ಕಳಿಗೆ ಒಳ್ಳೆಯ ಸಂಸ್ಕಾರ ನೀಡಬೇಕು ಎಂದರು.

ಕಬ್ಬೂರಿನ ಗೌರಿ ಶಂಕರ ಮಠದ ರೇವಣಸಿದ್ಧ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಯುವಪೀಳಿಗೆಯನ್ನು ದುಶ್ಚಟಗಳಿಂದ ದೂರವಿಟ್ಟು, ಸಮಾಜವನ್ನು ಸಂರಕ್ಷಿಸಲು ಇಂತಹ ಕಾರ್ಯಕ್ರಮಗಳು ಅವಶ್ಯ ಎಂದು ಹೇಳಿದರು.

ಸಂತೋಷ ಹಿರೇಮಠ, ಜಿಲ್ಲಾ ಕೆಎಂಎಫ್ ನಿರ್ದೇಶಕ ವಿ.ಬಿ. ಈಟಿ, ದೇವಸ್ಥಾನ ಸೇವಾ ಕಮಿಟಿಯ ಅಧ್ಯಕ್ಷ ಎಂ.ಬಿ. ಆಲೂರೆ, ಗ್ರಾಪಂ ಮಾಜಿ ಅಧ್ಯಕ್ಷ ಗುಲಾಬ ಜಮಾದಾರ, ಡಾ.ಎಂ.ಬಿ. ಕುಂಬಾರ, ಎಸ್.ಎಸ್. ರ‍್ಯಾಯಿ, ಬಾಬು ಕಾಳನ್ನವರ, ಬಸವಣ್ಣಿ ಕುಂಬಾರ, ಮಹಾದೇವ ಚೌಗಲಾ, ಡಿ.ಆರ್. ಕೋಟ್ಯಪ್ಪಗೋಳ, ರಮೇಶ ಕಾಳನ್ನವರ, ರಾಘವೇಂದ್ರ ಬಡಿಗೇರ ಇತರರಿದ್ದರು