filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 36; 
ಜಿಲ್ಲೆ

ಒಳಮೀಸಲಿಗೆ ಆಗ್ರಹಿಸಿ ವಕೀಲರ ಸಮಾವೇಶ 14ಕ್ಕೆ

ಚಿತ್ರದುರ್ಗ: ಒಳ ಮೀಸಲಾತಿ ಅನುಷ್ಠಾನಕ್ಕೆ ರಾಜ್ಯ ಸರ್ಕಾರದ ಮೇಲೆ ಒತ್ತಡ ಏರಲು ಕರ್ನಾಟಕ ಸಾಮಾಜಿಕ ನ್ಯಾಯಪರ ವಕೀಲರ ವೇದಿಕೆಯಿಂದ ತರಾಸು ರಂಗಮಂದಿರದಲ್ಲಿ ಡಿ. 14ರಂದು ಬೆಳಗ್ಗೆ 10.30ಕ್ಕೆ ರಾಜ್ಯಮಟ್ಟದ ಮಾದಿಗ ವಕೀಲರ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ವಕೀಲ ಅರುಣ್‌ಕುಮಾರ್ ತಿಳಿಸಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಚಿವ ಆರ್.ಬಿ.ತಿಮ್ಮಾಪುರ, ಸಂಸದ ಗೋವಿಂದ ಎಂ.ಕಾರಜೋಳ, ಮಾಜಿ ಸಚಿವರಾದ ಎ.ನಾರಾಯಣಸ್ವಾಮಿ, ಎಚ್.ಆಂಜನೇಯ ಸೇರಿ ಇನ್ನಿತರೆ ಮುಖಂಡರು, ರಾಜ್ಯದ ವಿವಿಧೆಡೆಯ ಸಮುದಾಯದ 700ಕ್ಕೂ ಹೆಚ್ಚು ವಕೀಲರು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ ಎಂದರು.

ಈ ವೇಳೆ ತೆಗೆದುಕೊಳ್ಳುವ ನಿರ್ಣಯಗಳನ್ನು ಸರ್ಕಾರದ ಗಮನಕ್ಕೆ ತರಲಾಗುವುದು. ಈಗಾಗಲೇ ಹಲವು ಭಾರಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಒಳಮೀಸಲು ಶೀಘ್ರ ಜಾರಿಗೆ ಒತ್ತಾಯಿಸಲಾಗಿದೆ ಎಂದು ಹೇಳಿದರು.

ಸಮಾವೇಶದ ಪೋಸ್ಟರ್ ಬಿಡುಗಡೆಗೊಳಿಸಿದರು. ವಕೀಲರಾದ ಬಿಸ್ನಹಳ್ಳಿ ಜಯಣ್ಣ, ರಾಜಣ್ಣ, ಸುರೇಶ್, ರಾಮಣ್ಣ, ಕುಮಾರ್, ಚಂದ್ರಪ್ಪ, ನರಹರಿ, ರಮೇಶ್, ರಾಮಬಾಬು, ಲೋಕೇಶ್, ದಾಸಪ್ಪ, ರಾಜಪ್ಪ ಇತರರಿದ್ದರು.