ಬಾಗಲಕೋಟೆ: ಕಳೆದ ಮೂರು ದಶಕಗಳಿಂದ ದಲಿತ ಸಮುದಾಯವು ಒಳ ಮೀಸಲಾತಿಗಾಗಿ ಹೋರಾಟ ಮಾಡಿದೆ. ಸುಪ್ರೀಂಕೋರ್ಟ ಆ.೧ ರಂದು ಒಳ ಮೀಸಲಾತಿ ನೀಡುವ ಅಽಕಾರ ರಾಜ್ಯ ಸರ್ಕಾರಕ್ಕೆ ಇದೆ ಅಂತ ಸ್ಪಷ್ಟವಾಗಿದೆ. ಆದರೇ ಸಿಎಂ ಸಿದ್ದರಾಮಯ್ಯ ಸಾಮಾಜಿಕ ನ್ಯಾಯದ ಪರ ನಿಲ್ಲುತ್ತಿಲ್ಲ. ಕೂಡಲೇ ಒಳ ಮೀಸಲಾತಿ ಜಾರಿಗೊಳಿಸಬೇಕು ಎಂದು ಸಂಸದ ಗೋವಿಂದ ಕಾರಜೋಳ ಹೇಳಿದರು.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶಕ್ಕೆ ಸ್ವಾತಂತ್ರ‍್ಯ ಬಂದ ಬಳಿಕ ಮಹಾತ್ಮ ಗಾಂಧೀಜಿ, ಬಾಬಾ ಸಾಹೇಬ ಅಂಬೇಡ್ಕರ, ನೆಹರು, ಸರ್ದಾರ ಪಟೇಲ ಅಸ್ಪÈಶ್ಯತೆ ಹೋಗಲಾಡಿಸುವ ನಿಟ್ಟಿನಲ್ಲಿ ಮೀಸಲಾತಿ ಜಾರಿಗೆ ತಂದರು. ಆದರೇ ಮೂಲ ದಲಿತರಿಗೆ ಸಾಮಾಜಿಕ ನ್ಯಾಯ ಮರೀಚಿಕೆಯಾಗಿತ್ತು. ಅದನ್ನು ಸಾಕಾರಿಗೊಳಿಸುವ ನಿಟ್ಟಿನಲ್ಲಿ ಸಾಕಷ್ಟು ಪ್ರಯತ್ನ ನಡೆದು ಅಂತಿಮ ಘಟ್ಟ ತಲುಪಿದೆ. ಇದೀಗ ವಿಳಂಭ ನೀತಿ ಅನುಸರಿಸಬಾರದು ಎಂದು ತಿಳಿಸಿದರು.
ರಾಜ್ಯದಲ್ಲಿ ಒಳ ಮೀಸಲಾತಿಗಾಗಿ ಎಸ್.ಎಂ.ಕೃಷ್ಣಾ ಸರ್ಕಾರ ನ್ಯಾ.ಎ.ಜೆ.ಸದಾಶಿವ ಆಯೋಗ ರಚನೆ ಮಾಡಿತು. ಆದರೇ ಬಿಡಿಗಾಸು ಹಣ ನೀಡಲಿಲ್ಲ. ಆಯೋಗದ ಅಧ್ಯಕ್ಷರಿಗೆ ಟೇಬಲ್, ಖುರ್ಚಿ ಸಹ ಇರಲಿಲ್ಲ. ನಂತರ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗ ೧೩.೫ ಕೋಟಿ ವರದಿ ಸಿದ್ದಪಡಿಸಲು ಅನುದಾನ ನೀಡಿತು. ವರದಿ ಸ್ವೀಕರಿಸುವ ಹೊತ್ತಿಗೆ ನಮ್ಮ ಸರ್ಕಾರದ ಅಧಿಕಾರ ಕಳೆದುಕೊಂಡಿತು.
೨೦೧೩ ರಲ್ಲಿ ಒಳ ಮೀಸಲಾತಿಗಾಗಿ ಆಗ್ರಹಿಸಿ ಹೋರಾಟ ನಡೆದಾಗ ಸಿಎಂ ಸಿದ್ದರಾಮಯ್ಯ ಜಾರಿಗೊಳಿಸುವ ಭರವಸೆ ನೀಡಿದರು. ಆಗಲು ಮಾಡಲಿಲ್ಲ. ವರದಿ ಕೂಡಾ ಸ್ವೀಕರಿಸಲಿಲ್ಲ. ಬಳಿಕ ಬಿಜೆಪಿಕ ಸರ್ಕಾರ ಸ್ವೀಕರಿಸಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿತು. ೨೦೨೩ ಚುನಾವಣೆ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ ಮೊದಲ ಸಂಪುಟ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳುವುದಾಗಿ ತಿಳಿಸಿದ್ದರು. ಅದು ಕೂಡಾ ಈಡೇರಲಿಲ್ಲ. ಕೇಂದ್ರ ಸರ್ಕಾರ ಅಫಿಡವಿಟ್ ಸಲ್ಲಿಸಿದ ಬಳಿಕ ಆ.೧ ರಂದು ಸುಪ್ರೀಂಕೋರ್ಟ ಒಳ ಮೀಸಲಾತಿ ಆದೇಶ ಮಾಡಿದೆ. ಹರಿಯಾಣದಲ್ಲಿ ಬಿಜೆಪಿ ಸರ್ಕಾರ ಜಾರಿಗೊಳಿಸಿದೆ. ಎಲ್ಲವು ಗೊತ್ತಿದ್ದರು ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ಸರ್ಕಾರ ಜಾರಿಗೊಳಿಸುತ್ತಿಲ್ಲ. ಮತ್ತೊಂದು ಆಯೋಗ ರಚನೆ ಮಾಡಿ ಕಾಲ ಹರಣ ಮಾಡುತ್ತಿದ್ದಾರೆ ಎಂದು ದೂರಿದರು.
ಶಾಂತಿಯುತ ಹೋರಾಟ ನಡೆಸಿ...
ಬೆಳಗಾವಿ ಅಧಿವೇಶನ ಸಂದರ್ಭದಲ್ಲಿ ಡಿ.೧೬ ರಂದು ಒಳ ಮೀಸಲಾತಿಗಾಗಿ ಹೋರಾಟ ಆರಂಭವಾಗಲಿದೆ. ಯಾವುದೇ ಕಾರಣಕ್ಕೂ ಆಶಾಂತಿ ಸೃಷ್ಟಿಸಬಾರದು. ಶಾಂತಿಯುತವಾಗಿ ಹೋರಾಟ ನಡೆಸಬೇಕು. ಸದನ ಒಳಗೆ-ಹೊರಗೆ ಸತ್ಯಾಂಶ ಹೊರ ಬರಬೇಕು. ಈ ಹಿಂದೆ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಅವಽಯಲ್ಲಿ ಎಸ್ಸಿ ೧೫ ರಿಂದ ೧೭ ವರೆಗೆ ಹಾಗೂ ಎಸ್ಟಿ ಮೀಸಲಾತಿ ೩ ರಿಂದ ೭ ವರೆಗೆ ಹೆಚ್ಚಿಸಿತು. ಒಳ ಮೀಸಲಾತಿ ವಿಷಯದಲ್ಲಿ ಕೇಂದ್ರಕ್ಕೆ ಶಿಫಾರಸ್ಸು ಮಾಡಿತು. ಯಾವುದೇ ಕಾರಣಕ್ಕೂ ಇದು ಇನ್ನೊಬ್ಬರಿಗೆ ಮಾಡುತ್ತಿರುವ ಅನ್ಯಾಯವಲ್ಲ. ಅಣ್ಣ ತಮ್ಮಂದಿರು ತಮ್ಮ ಜನ ಸಂಖ್ಯಾ ಅನುಗುಣವಾಗಿ ಪಾಲು ಹಂಚಿಕೆ ಮಾತ್ರ. ಇದರಲ್ಲಿ ಯಾರನ್ನು ಮೀಸಲಾತಿಯಿಂದ ಕೈ ಬಿಟ್ಟು ಹೋಗುವದಿಲ್ಲ ಎಂದು ಹೇಳಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಎಸ್.ಟಿ.ಪಾಟೀಲ, ಮುಖಂಡರಾದ ಮುತ್ತಣ್ಣ ಬೆಣ್ಣೂರ, ಶಿವಾನಂದ ಟವಳಿ, ಮಲ್ಲಯ್ಯ ಮುಗುನೂರಮಠ, ಸತ್ಯಾನಾರಾಯಣ ಹೇಮಾದ್ರಿ, ಕೆಎಂಎಫ ನಿರ್ದೇಶಕ ವಿವೇಕಾನಂದ ಪಾಟೀಲ(ರಾಜು ಗೌಡ) ಇತರರು ಇದ್ದರು.