ಬಾಗಲಕೋಟೆ: ಪರಿಶಿಷ್ಟ ಜಾತಿಯ ಒಳ ಮೀಸಲಾತಿ ವರ್ಗೀಕರಣ ವಿರೋಽಸಿ ಪರಿಶಿಷ್ಟ ಜಾತಿ ಮೀಸಲಾತಿ ಹೋರಾಟ ಸಮಿತಿ ನೇತೃತ್ವದಲ್ಲಿ ಜಿಲ್ಲಾಡಳಿತ ಭವನ ಎದುರು ಸೋಮವಾರ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನಾ ಮೆರವಣಿಗೆ ಮೂಲಕ ಜಿಲ್ಲಾಡಳಿತ ಭವನಕ್ಕೆ ಆಗಮಿಸಿದ ಹೋರಾಟ ಸಮಿತಿ ಮುಖಂಡರು ಸರ್ಕಾರ ವಿರುದ್ಧ ಘೋಷಣೆ ಕೂಗಿದರು. ಬಳಿಕ ಅಪರ ಜಿಲ್ಲಾಽಕಾರಿ ರಮೇಶ ಕಳಸದ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಸಮಗ್ರ ಅಧ್ಯಯನವಿಲ್ಲದೆ ಚುನಾವಣೆ ಉದ್ದೇಶವಿಟ್ಟುಕೊಂಡು ಆತುರದಲ್ಲಿ ಒಳ ಮೀಸಲಾತಿ ಜಾರಿ ಮಾಡಲಾಗಿದೆ. ಕೇಂದ್ರ ಸರ್ಕಾರಕ್ಕೆ ಈಗ ಮಾಡಿರುವ ಶಿ-Áರಸು ಹಿಂಪಡೆದುಕೊಳ್ಳಬೇಕು. ಆದಿ ಕರ್ನಾಟಕ ಹಾಗೂ ಆದಿ ದ್ರಾವಿಡ ವಿಂಗಡಣೆ ಅವೈಜ್ಞಾನಿಕವಾಗಿದೆ. ಹಳೆ ಮೈಸೂರು ಭಾಗದಲ್ಲಿ ಬಲಗೈ ಸಮುದಾಯಕ್ಕೆ ಆದಿ ಕರ್ನಾಟಕ ಎಂದೂ ಮಧ್ಯ ಕರ್ನಾಟಕದಲ್ಲಿ ಎಡಗೈ ಸಮುದಾಯಕ್ಕೆ ಆದಿ ಕರ್ನಾಟಕ ಎಂದು ಶಾಲಾ ದಾಖಲಾತಿಯಲ್ಲಿದೆ. ಹಾಗಾಗಿ ವರ್ಗೀಕರಣ ಅವೈಜ್ಞಾನಿಕವಾಗಿದೆ ಎಂದು ದೂರಿದರು.
ಆದಿ ಕರ್ನಾಟಕ, ಆದಿ ದ್ರಾವಿಡ ಮುಂದೆ ಉಪಜÁತಿಯನ್ನು ನಮೂದಿಸಬೇಕಾಗಿತ್ತು. ಅಲೆಮಾರಿ ಜಾತಿಯನ್ನು ೨ನೇ ಗ್ರೂಪ್‌ನಲ್ಲಿ ಸೇರ್ಪಡೆ ಮಾಡಿರುವುದೂ ಸರಿಯಲ್ಲ ಎಂದು ಟೀಕಿಸಿದರು.
ಮುಖಂಡರಾದ ಪರಶುರಾಮ ನೀಲನಾಯಕ, ಎಚ್.ಡಿ. ಹೂಗ್ಯೂರ, ದಯಾನಂದ ಚಲವಾದಿ, ಪಡೆಯಪ್ಪ ಕಳ್ಳಿಮನಿ, ಸುರೇಶ ಮತ್ತಿತರರು ಇದ್ದರು.