ಚಿತ್ರದುರ್ಗ: ಬಸವಣ್ಣ ಅನುಭವ ಮಂಟಪದಲ್ಲಿ ಸಾಮಾಜಿಕ ನ್ಯಾಯ, ಸ್ವಾತಂತ್ರ್ಯವನ್ನು ಕೊಡದೆ ಇದ್ದರೆ ಲಿಂಗಾಯಿತ ಸಮಾಜ ಇರುತ್ತಿರಲಿಲ್ಲ ಎಂದು ದಾವಣಗೆರೆ ವಿರಕ್ತ ಮಠದ ಡಾ.ಶ್ರೀ ಬಸವಪ್ರಭು ಸ್ವಾಮೀಜಿ ಹೇಳಿದರು.
ಜಿಲ್ಲಾ ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘ ಮುರುಘಾಮಠದ ಅಲ್ಲಮಪ್ರಭು ಸಂಶೋಧನಾ ಕೇಂದ್ರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಂಘದ ಜಿಲ್ಲಾ ಘಟಕದ ಪದಾಧಿಕಾರಿಗಳ ಪದಗ್ರಹಣ ಹಾಗೂ ವೀರಶೈವ ಲಿಂಗಾಯಿತ ನೌಕರರ ಸಮಾವೇಶದ ಸಾನ್ನಿಧ್ಯವಹಿಸಿ ಮಾತನಾಡಿದರು.
ಸಮಾಜದಲ್ಲಿ ನೊಂದವರ ಪರವಾಗಿ ನಿಲ್ಲುವುದೇ ನಿಜವಾದ ಧರ್ಮ. ಲಿಂಗಾಯಿತ ಸಮಾಜ ಅತಿ ದೊಡ್ಡ ಸಮಾಜ. ಆದರೆ, ಒಳಪಂ ಗಡವೆಂದುಕೊಂಡು ಸಂಘಟನೆಯಲ್ಲಿ ಹಿಂದೆ ಬಿದ್ದಿದೆ. ಒಳ ಪಂಗಡ ಮರೆತು ಎಲ್ಲರೂ ಒಂದಾಗಬೇಕು ಎಂದರು.
ಮದುವೆ ಸಂದರ್ಭದಲ್ಲಿ ಲಿಂಗ ದೀಕ್ಷೆ ತೆಗೆದುಕೊಳ್ಳುವುದು ಸರಿಯಲ್ಲ. ಯಾವಾಗಲೂ ಕೊರಳಲ್ಲಿ ಲಿಂಗವಿರಬೇಕು. ಇಷ್ಟಲಿಂಗವನ್ನು ತದೇಕ ಚಿತ್ತದಿಂದ ಧ್ಯಾನಿಸಿ, ಪೂಜಿಸಿದರೆ ಒತ್ತಡ, ಕಷ್ಟ, ದುಃಖ ನಿವಾರಣೆಯಾಗುತ್ತದೆ. ಹಾಗಾಗಿ ಇಷ್ಟಲಿಂಗದ ಪೂಜೆ ನಿರಂತರವಾಗಿರಬೇಕು. ಧರ್ಮ, ಸಂಸ್ಕೃತಿಯನ್ನು ಎಂದಿಗೂ ಮರೆಯಬಾರದು ಎಂದರು.
ಅಧ್ಯಕ್ಷತೆ ವಹಿಸಿದ್ದ ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಬಿ. ವೀರೇಶ್ ಮಾತನಾಡಿ, ವೀರಶೈವ ಲಿಂಗಾಯತರಲ್ಲಿ ಎಂದಿಗೂ ಒಳಪಂಗಡಗಳ ಚರ್ಚೆಯಾಗಬಾರದು. ಲಿಂಗಾಯತ ನೌಕರರ ಕಷ್ಟಗಳಿಗೆ ಒಗ್ಗಟ್ಟಿನ ಕೊರತೆ ಕಾರಣ. ಎಲ್ಲ ಇಲಾಖೆಗಳಲ್ಲಿರುವ ಸಮುದಾಯದ ನೌಕರರನ್ನು ಸಂಘಕ್ಕೆ ಸೇರ್ಪಡೆ ಮಾಡಿಕೊಳ್ಳಬೇಕಿದೆ. ವಧು-ವರರ ಸಮಾವೇಶ, ಪ್ರತಿಭಾ ಪುರಸ್ಕಾರ, ನಿವೃತ್ತ ನೌಕರರು ಹಾಗೂ ಸಾಧಕರನ್ನು ಗೌರವಿಸೋಣ. ಇದಕ್ಕೆ ಎಲ್ಲರ ಸಹಕಾರ ಅಗತ್ಯವಿದೆ ಎಂದರು.
ಸಂಘದ ಮಾಜಿ ಜಿಲ್ಲಾಧ್ಯಕ್ಷ ನಾಗರಾಜ್ ಸಂಗಮ್ ಮಾತನಾಡಿ,ವೀರಶೈವ ಲಿಂಗಾಯಿತ ನೌಕರರ ಕ್ಷೇಮಾಭಿವೃದ್ದಿ ಸಂಘದ ಮಾಜಿ ಜಿ ಲ್ಲಾಧ್ಯಕ್ಷ ನಾಗರಾಜ್ ಸಂಗಮ್ ಮಾತನಾಡಿ,ಸಂಘಟನೆ ಇಲ್ಲದಿದ್ದರೆ ಏನನ್ನು ಪಡೆಯಲಾಗದು. 2005ರಲ್ಲಿ ಸಂಘ ಸ್ಥಾಪನೆಯಾಯಿತು. ಪ್ರಥಮ ಸಮಾವೇಶ ಬೆಂಗಳೂರಲ್ಲಿ ನಡೆಯಿತು. ಚಿತ್ರದುರ್ಗದಲ್ಲೂ ಯಶಸ್ವಿಯಾಗಿ ಒಮ್ಮೆ ಸಮ್ಮೇಳನ ನಡೆದಿದೆ ಎಂದರು.
ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ತಿಪ್ಪೇಸ್ವಾಮಿ,ಜಿಲ್ಲಾ ಕೆಡಿಪಿ ಸದಸ್ಯ ಕೆ.ಸಿ. ನಾಗರಾಜ್, ವೀರಶೈವ ಸಮಾಜದ ಅಧ್ಯಕ್ಷ ಎಸ್.ಎಂ.ಎಲ್. ತಿ ಪ್ಪೇಸ್ವಾಮಿ,ವೀರಶೈವ ಲಿಂಗಾಯತ ಮಹಾಸಭಾದ ಕಾರ್ಯದರ್ಶಿ ಎಂ. ಶಶಿಧರ್‌ಬಾಬು, ಕೆಇಬಿ ಷಣ್ಮುಖಪ್ಪ, ಚಿದಾನಂದಪ್ಪ ಇದ್ದರು.