ಬನ್ನೂರಿನಲ್ಲಿ ಹಿಂದುಳಿದ ವರ್ಗಗಳ ಕಾಂಗ್ರೆಸ್ ಸಮಿತಿ ವತಿಯಿಂದ ಶನಿವಾರ ಒಬಿಸಿ ಸದಸ್ಯರಿಗೆ ಗುರುತಿನ ಚೀಟಿ ವಿತರಿಸಲಾಯಿತು. ಎ.ಎನ್.ಸ್ವಾಮಿ, ಎನ್.ನಾಗರಾಜಾಚಾರ್, ಶಿವಣ್ಣ, ಚಲುವರಾಜು, ಕೆ.ಎಸ್.ಸಿದ್ದರಾಜು ಮತ್ತಿತರರಿದ್ದರು. 
ಜಿಲ್ಲೆ

ಒಬಿಸಿ ಸದಸ್ಯರಿಗೆ ಗುರುತಿನ ಚೀಟಿ ವಿತರಣೆ

ಬನ್ನೂರು: ಪಟ್ಟಣದಲ್ಲಿ ಬನ್ನೂರು ಬ್ಲಾಕ್ ಹಿಂದುಳಿದ ವರ್ಗಗಳ ಕಾಂಗ್ರೆಸ್ ಸಮಿತಿ ವತಿಯಿಂದ ಒಬಿಸಿ ಸದಸ್ಯರಿಗೆ ಗುರುತಿನ ಚೀಟಿ ವಿತರಿಸಲಾಯಿತು.

ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪ್ರಥಮ ದರ್ಜೆ ಗುತ್ತಿಗೆದಾರ ಎ.ಎನ್.ಸ್ವಾಮಿ, ಒಬಿಸಿ ಅಧ್ಯಕ್ಷ ಎನ್.ನಾಗರಾಜಾಚಾರ್ ಗುರುತಿನ ಚೀಟಿ ವಿತರಿಸಿದರು.

ಎನ್.ನಾಗರಾಜಾಚಾರ್ ಮಾತನಾಡಿ, ಗುರುತಿನ ಚೀಟಿ ನಿಮ್ಮ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ಎಲ್ಲರೂ ಉತ್ತಮ ರೀತಿಯಲ್ಲಿ ಕರ್ತವ್ಯ ನಿರ್ವಹಿಸುವಂತೆ ಸಲಹೆ ನೀಡಿದರು.

ಪುರಸಭೆ ಸದಸ್ಯ ಶಿವಣ್ಣ, ಉಪಾಧ್ಯಕ್ಷ ಚಲುವರಾಜು, ಮುಖಂಡರಾದ ಕೆ.ಎಸ್.ಸಿದ್ದರಾಜು, ಮಹದೇವು, ಜಯರಾಮು, ಕುಮಾರ್, ವಿಜೇಂದ್ರ, ಡಿ.ಬಿ.ಮಹೇಶ್, ಎಂ.ಸಿದ್ದರಾಜು, ಮಹೇಶ್, ದೇವರಾಜು, ಆನಂದ್, ಎಂ.ಪಿ.ಕುಮಾರ್, ಆಟೋ ಚಿಕ್ಕಣ್ಣ, ಸಿದ್ದಪ್ಪಾಜಿ, ಶಿವಣ್ಣ, ಪ್ರಕಾಶ್, ಹನುಮಂತು, ಪುಟ್ಟಸ್ವಾಮಾಚಾರ್ ಮತ್ತಿತರರು ಹಾಜರಿದ್ದರು.