ಹುಬ್ಬಳ್ಳಿ : ಪ್ರಯಾಣಿಕರ ದಟ್ಟಣೆ ನಿಯಂತ್ರಣಕ್ಕಾಗಿ ತಿರುಪತಿ -ಮಡಗಾಂವ ಒನ್ವೇ ಸ್ಪೇಷಲ್ ರೈಲು ಸಂಚಾರ ಪ್ರಾರಂಭಿಸಲಾಗಿದೆ.
ಫೆ. 10ರಂದು ಬೆಳಗ್ಗೆ 11 ಗಂಟೆಗೆ ತಿರುಪತಿಯಿಂದ ಹೊರಡುವ ರೈಲು, ಮಾರನೇ ದಿನ ಬೆಳಗಿನಜಾವ 5 ಗಂಟೆಗೆ ಮಡಗಾಂವ ತಲುಪಲಿದೆ. ರೇಣುಗುಂಟ, ಕಡಪಾ, ಗೂಟಿ, ಗುಂತಕಲ್, ಬಳ್ಳಾರಿ, ಹೊಸಪೇಟೆ, ಕೊಪ್ಪಳ, ಗದಗ, ಅಣ್ಣಿಗೇರಿ, ಎಸ್ಎಸ್ಎಸ್ ಹುಬ್ಬಳ್ಳಿ, ಧಾರವಾಡ, ಅಳ್ನಾವರ, ಲೋಂಡಾ, ಕ್ಯಾಸ್ಟಲ್ರಾಕ್, ಕುಲೇಮ್ ಸಂವೇರ್ಡಮ್ ಚರ್ಚ್ ಮಾರ್ಗದ ಮೂಲಕ ಈ ರೈಲು ಸಂಚರಿಸಲಿದೆ.