ಜಿಲ್ಲೆ

ಒತ್ತಡಮುಕ್ತ ಜೀವನಕ್ಕಾಗಿ ರಾಜಯೋಗ ಧ್ಯಾನ

ವಿಜಯವಾಣಿ ಸುದ್ದಿಜಾಲ ಧಾರವಾಡ

ನಗರದ ಮರಾಠಾ ಕಾಲನಿಯ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯವು ಇಲ್ಲಿನ ಸತ್ತೂರಿನಲ್ಲಿರುವ ಡಾ. ಡಿ. ವೀರೇಂದ್ರ ಹೆಗ್ಗಡೆ ಕಲಾಕ್ಷೇತ್ರದಲ್ಲಿ ಮೇ 24ರಂದು ಬೆಳಗ್ಗೆ 9.30ರಿಂದ ಒತ್ತಡಮುಕ್ತ ಜೀವನಕ್ಕಾಗಿ ರಾಜಯೋಗ ಧ್ಯಾನ ಕಾರ್ಯಕ್ರಮ ಏರ್ಪಡಿಸಿದೆ. ರಾಜಯೋಗಿನ ಬಿ.ಕೆ. ದುದೇಶ ದೀದಿ ಹಾಗೂ ರಾಜಯೋಗಿನ ಬಿ.ಕೆ. ಚಕ್ರಧಾರಿ ದೀದಿ ಗೌರವ ಉಪಸ್ಥಿತರಿರುವರು ಎಂದು ಪ್ರಕಟಣೆ ತಿಳಿಸಿದೆ.