ಜಿಲ್ಲೆ

ಒತ್ತಡದ ಜೀವನದಿಂದ ರೋಗಭಾದೆ

reportermys


ಚನ್ನರಾಯಪಟ್ಟಣ: ಇನ್ನಿಲ್ಲದ ಒತ್ತಡದ ಜೀವನವು ಮಧುಮೇಹ, ರಕ್ತದೊತ್ತಡ ಹಾಗೂ ಇತರೆ ಕಾಯಿಲೆಗಳಿಗೆ ಮೂಲವಾಗಲಿದೆ ಎಂದು ಹಿರೀಸಾವೆ ಪ್ರಾಥಮಿಕ ಆರೋಗ್ಯ ಕೇಂದ್ರದ ಸ್ತ್ರೀ ರೋಗ ತಜ್ಞ ಡಾ.ಬಾಬು ಹೇಳಿದರು.

ತಾಲೂಕಿನ ಹಿರೀಸಾವೆ ಗ್ರಾಮದ ವಾರದ ಸಂತೆ ಮೈದಾನದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಏಡ್ಸ್ ನಿಯಂತ್ರಣ ಪ್ರತಿಬಂಧಕ ಘಟಕ, ಗ್ರಾಮ ಪಂಚಾಯಿತಿ ಹಾಗೂ ಸಮುದಾಯ ಆರೋಗ್ಯ ಕೇಂದ್ರದ ಸಹಯೋಗದಲ್ಲಿ ಭಾನುವಾರ ಏರ್ಪಡಿಸಿದ್ದ ಸಮುದಾಯ ಆಧಾರಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ಎಲ್ಲರೂ ಒತ್ತಡದ ಜೀವನದಲ್ಲಿರುವ ಹಿನ್ನೆಲೆಯಲ್ಲಿ ರಕ್ತದಲ್ಲಿನ ಸಕ್ಕರೆ ಅಂಶ ಮತ್ತು ರಕ್ತದ ಒತ್ತಡ ಸೇರಿದಂತೆ ಪ್ರಾಥಮಿಕ ಆರೋಗ್ಯ ಪರೀಕ್ಷೆಗಳನ್ನು ಆಗಾಗ್ಗೆ ಮಾಡಿಸಿಕೊಳ್ಳವುದು ಒಳಿತು. ಇಲ್ಲವಾದಲ್ಲಿ ಒಮ್ಮೆಲೆ ಅನಾರೋಗ್ಯಕ್ಕೆ ತುತ್ತಾಗಿ ಬಳಲಬೇಕಾಗುತ್ತದೆ ಎಂದರು.

ಶಿಬಿರದಲ್ಲಿ 100 ಕ್ಕೂ ಹೆಚ್ಚು ಜನರು ಮಧುಮೇಹ, ರಕ್ತದೊತ್ತಡ ಹಾಗೂ ಎಚ್‌ಐವಿ ಪರೀಕ್ಷೆಯನ್ನು ಮಾಡಿಸಿಕೊಂಡರು. 19 ಜನರು ಸ್ವಯಂಪೇರಿತವಾಗಿ ರಕ್ತ ದಾನ ಮಾಡಿದರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ದರ್ಶನ್, ಹಿರಿಯ ನೇತ್ರ ಪರಿವೀಕ್ಷಕ ಶೇಖರ್, ಆಪ್ತ ಸಾಮಾಲೋಚಕ ಮಹದೇವ್ ಮಾತನಾಡಿದರು.

ಶಿಬಿರದಲ್ಲಿ ಆರೋಗ್ಯ ಇಲಾಖೆಯ ಆಪ್ತ ಸಾಮಾಲೋಚಕಿ ಶೃತಿ, ಇಮ್ರಾನ್, ಅಭಿಲಾಷಾ, ಶೋಭ ಸುಚಿತ್ರ, ಶೃತಿ ಸೇರಿದಂತೆ ಸಿಬ್ಬಂದಿ ವರ್ಗ ಇದ್ದರು.