ಚಿಕ್ಕಮಗಳೂರು: ಮನುಷ್ಯ ದೈನಂದಿನ ವೃತ್ತಿ ಬದುಕಿನಲ್ಲಿ ಹಲವಾರು ಒತ್ತಡದಿಂದ ಬಳಲುತ್ತಿದ್ದು, ದೇಗುಲದ ಸನ್ನಿಧಿಯಲ್ಲಿ ಸ್ವಇಚ್ಚೆಯಿಂದ ಪ್ರಾರ್ಥನೆ ಸಲ್ಲಿಸಿದರೆ ಮನಸ್ಸಿನ ದುಗುಡ ಮರೆಯಾಗಿ ಮಾನಸಿಕ ನೆಮ್ಮದಿ ಗಳಿಸಲು ಸಾಧ್ಯ ಎಂದು ಶಾಸಕ ಎಚ್.ಡಿ.ತಮ್ಮಯ್ಯ ತಿಳಿಸಿದರು.
ನಗರದ ದಂಟರಮಕ್ಕಿ ಬಡಾವಣೆಯಲ್ಲಿ ಶ್ರೀಪ್ರಸನ್ನ ನೀಲಾಂಜನ ಶನೇಶ್ವರ ಸ್ವಾಮಿಯವರ ೩೫ನೇ ವರ್ಷದ ವಾರ್ಷಿಕೋತ್ಸವ ಹಾಗೂ ಬ್ರಹ್ಮರಥೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
ಭಗವಂತನ ಆರಾಧನೆೆಯಿಂದ ಬದುಕಿನ ಸಮಸ್ಯೆಗಳು ಬಗೆಹರಿಯಲು ಸಾಧ್ಯ. ವಿಶೇಷವಾಗಿ ಶ್ರೀ ಶನೇಶ್ವರಸ್ವಾಮಿಗೆ ಹೆಚ್ಚು ಪೂಜೆ ಸಲ್ಲಿಸುವವರು ಸಂಕಷ್ಟದಿAದ ದೂರವಿರುತ್ತಾರೆ. ಜೊತೆಗೆ ಶಾಂತಿ, ನೆಮ್ಮದಿಯನ್ನು ಜೀವನದಲ್ಲಿ ಗಳಿಸಿಕೊಂಡು ಯಶಸ್ವಿಯಾಗಿ ಮುನ್ನೆಡೆಯಬಹುದು ಎಂದು ತಿಳಿಸಿದರು.
ಆಧುನಿಕ ಭರಾಟೆಯಲ್ಲಿ ಯುವಕರು ಪಾಶ್ಚಾತ್ಯ ಸಂಸ್ಕೃತಿಗೆ ಮೊರೆ ಹೋಗುತ್ತಿದ್ದಾರೆ. ಪೂರ್ವಿಕರ ಆಚಾರ-ವಿಚಾರಗಳ ಪದ್ಧತಿ ಉಳಿಸುವ ಕರ್ತವ್ಯವಾಗಬೇಕು. ಶ್ರೀ ಶನೇಶ್ವರ ದೇವಾಲಯ ಅಭಿವೃದ್ಧಿ ವಿಚಾರದಲ್ಲೂ ಸದಾ ಕೈಜೋಡಿಸುತ್ತೇನೆ ಎಂದು ಭರವಸೆ ನೀಡಿದರು.
ಜಿಪಂ ಮಾಜಿ ಅಧ್ಯಕ್ಷ ಎ.ಎನ್.ಮಹೇಶ್ ಮಾತನಾಡಿ, ಇತ್ತೀಚಿನ ದಿನದÀಲ್ಲಿ ಮನುಷ್ಯ ನೆಮ್ಮದಿ ಗಳಿಸಿಕೊಳ್ಳುವಲ್ಲಿ ವಿಫಲನಾಗಿz್ದÉÃನೆ. ಸದಾ ವೈಯಕ್ತಿಕ ಜೀವನ ಹಾಗೂ ಹೆಚ್ಚು ದುಡಿಮೆಯಲ್ಲಿ ತೊಡಗಿರುವ ಪರಿಣಾಮ ನೆಮ್ಮದಿ ಮರೆಯಾಗಿದೆ. ಹೀಗಾಗಿ ಮಾನಸಿಕ ಶಾಂತಿ ಗಳಿಸಲು ದೇವಾಲಯಕ್ಕೆ ತೆರಳುವುದು ಮುಖ್ಯ ಎಂದರು.
ಜಿಲ್ಲಾ ಗ್ಯಾರಂಟಿ ಪ್ರಾಧಿಕಾರ ಅಧ್ಯಕ್ಷ ಎಂ.ಸಿ.ಶಿವಾನAದಸ್ವಾಮಿ ಮಾತನಾಡಿ, ಶ್ರೀ ಶನೇಶ್ವರನ ಆರಾಧಕರು ದೇಶ-ವಿದೇಶಗಳಲ್ಲಿ ನೆಲೆಸಿದ್ದಾರೆ. ಶನಿದೇವನಿಗೆ ಪ್ರತಿಯೊಬ್ಬರು ಹೆಚ್ಚು ಭಕ್ತಿಪೂರಕರಾಗಿರುತ್ತಾರೆ. ಶನಿಯ ವಕ್ರದೃಷ್ಟಿ ಮನುಷ್ಯರ ಮೇಲೇ ಬೀಳದಂತೆ ಪೂಜಾವಿಧಾನಗಳನ್ನು ಕೈಗೊಳ್ಳುತ್ತಾರೆ ಎಂದು ಹೇಳಿದರು.
ದೇವಾಲಯ ಪ್ರಧಾನ ಅರ್ಚಕ ಮಲ್ಲೇಶಸ್ವಾಮಿ ಮಾತನಾಡಿ, ಭಕ್ತಾಧಿಗಳ ಸಹಕಾರದಿಂದ ಕಳೆದ ಮೂವತ್ತೆÊದು ವರ್ಷಗಳಿಂದ ನಿರಂತರವಾಗಿ ಶ್ರೀಶನೇಶ್ವರ ಸ್ವಾಮಿ ರಥೋತ್ಸವ ನಡೆಸಲಾಗುತ್ತಿದೆ. ವಿವಿಧ ಪೂಜೆ, ಹೋಮಹವನದಿ ಜೊತೆಗೆ ಬ್ರಹ್ಮರಥೋತ್ಸವ ಪೂರೈಸಲಾಯಿತು. ಬಳಿಕ ಸಾರ್ವಜನಿಕರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು ಎಂದರು.
ಕಾರ್ಯಕ್ರಮದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಾ. ಡಿ.ಎಲ್.ವಿಜಯ್‌ಕುಮಾರ್, ಬಿಜೆಪಿ ಮಹಿಳಾ ಘಟಕದ ಅಧ್ಯಕ್ಷೆ ಜಸಂತಾಅನಿಲ್‌ಕುಮಾರ್, ಮುಖಂಡರಾದ ಕೆ.ಆರ್.ಅನಿಲ್‌ಕುಮಾರ್, ಬಿ.ಎಚ್.ಹರೀಶ್, ಎ.ವಿ.ಗಾಯತ್ರಿ ಶಾಂತೇಗೌಡ, ನಗರಸಭಾ ಸದಸ್ಯ ವರಸಿದ್ಧಿ ವೇಣುಗೋಪಾಲ್ ಮತ್ತಿತರರಿದ್ದರು.