ಹೊಳೆನರಸೀಪುರ: ಹಾಸನ-ಮೈಸೂರು ರಸ್ತೆ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನ ಮುಂಭಾಗದಲ್ಲಿನ ಮರದಲ್ಲಿನ ಕೊಂಬೆಗಳು ಒಣಗಿ ನಿಂತಿದ್ದು ದಾರಿಹೋಕರ ಮೇಲೆ ಬೀಳಲಿದೆ ಎಂಬ ದೂರಿನ ಮೇಲೆ ವಿದ್ಯುತ್ ಇಲಾಖೆ, ಅರಣ್ಯ ಇಲಾಖೆ, ಪುರಸಭೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು.
ಬಹಳ ವರ್ಷಗಳಿಂದ ಈ ಮರಗಳ ಕೊಂಬೆಗೆಳು ಹೆದ್ದಾರಿ ರಸ್ತೆಗೆ ಚಾಚಿದ್ದು, ಇದರ ಒಣಗಿದ ಕೊಂಬೆಗಳು ದಾರಿ ಹೋಕರು, ಸಂಚರಿಸುವ ವಾಹನಗಳ ಮೇಲೆ ಬಿದ್ದು ಸಾಕಷ್ಟು ಅವಾಂತರಕ್ಕೆ ಕಾರಣವಾಗಿದ್ದ ಬಗ್ಗೆ ದೂರುಗಳು ಬಂದಿತ್ತು. ಹೀಗಾಗಿ ಒಣಗಿರುವ ಕೊಂಬೆಗಳನ್ನು ತೆರವುಗೊಳಿಸಲು ಮುಂದಾಗಿರುವುದಾಗಿ ವಿದ್ಯುತ್ ಇಲಾಖೆಯ ಇಂಜಿನಿಯರ್ ದೀಪಕ್, ಅರಣ್ಯ ಇಲಾಖೆಯ ಪ್ರದೀಪ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಟಿ.ಲಕ್ಷ್ಮಣ್, ಕಾಲೇಜಿನ ಪ್ರಾಂಶುಪಾಲ ಪ್ರಾಣೇಶ್‌ರಾವ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ಸೂಕ್ತ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದರು.