ಶಹಾಬಾದ್: ಪರಸ್ಪರ ಬನ್ನಿ ವಿನಿಮಯ ಮಾಡಿಕೊಳ್ಳುವ ಮೂಲಕ ಸಮಾಜದಲ್ಲಿ ಒಡೆದ ಮನಸ್ಸುಗಳನ್ನು ಒಂದುಗೂಡಿಸುವ ಶ್ರೇಷ್ಠ ಸಂದೇಶವನ್ನು ದಸರಾ ಹಬ್ಬ ನೀಡುತ್ತದೆ ಎಂದು ರಾವೂರಿನ ಸಿದ್ಧಲಿಂಗೇಶ್ವರ ಸಂಸ್ಥಾನ ಮಠದ ಪೀಠಾಧಿಪತಿ ಶ್ರೀ ಸಿದ್ಧಲಿಂಗ ಸ್ವಾಮೀಜಿ ನುಡಿದರು.
ರಾವೂರಿನ ಶ್ರೀ ಸಿದ್ಧಲಿಂಗೇಶ್ವರ ಸಂಸ್ಥಾನ ಮಠದಲ್ಲಿ ಶನಿವಾರ ಸಂಜೆ ಆಯೋಜಿಸಿದ್ದ ವಿಜಯದಶಮಿ ಕಾರ್ಯಕ್ರಮದಲ್ಲಿ ವಿಶೇಷ ಆಶೀರ್ವಚನ ನೀಡಿದ ಅವರು, ಹಿಂದು ಧರ್ಮದಲ್ಲಿನ ಪ್ರತಿ ಆಚರಣೆಗಳು ತನ್ನದೇ ಇತಿಹಾಸ, ಹಿನ್ನೆಲೆ ಹಾಗೂ ಸಂದೇಶ ಹೊಂದಿವೆ. ವಿಜಯದಶಮಿ ಐತಿಹಾಸಿಕ ಧಾರ್ಮಿಕ ಹಿನ್ನೆಲೆಯುಳ್ಳ ಹಬ್ಬವಾಗಿದೆ. ಪರಸ್ಪರ ಬನ್ನಿ ಕೊಡುವುದರಿಂದ ದೂರವಿದ್ದವರು ಹತ್ತಿರವಾಗುತ್ತಾರೆ. ಅಲ್ಲದೆ ದ್ವೇಷಿಸುವವರನ್ನು ಪ್ರೀತಿಸುವಂತಾಗುತ್ತದೆ ಎಂದರು.
ಭಕ್ತರು ಕರ್ತೃ ಗದ್ದುಗೆ ಹಾಗೂ ಶ್ರೀಗಳಿಗೆ ಬನ್ನಿ ನೀಡಿ ಆಶೀರ್ವಾದ ಪಡೆದುಕೊಂಡರು. ಪ್ರಮುಖರಾದ ಡಾ.ಗುಂಡಣ್ಣ ಬಾಳಿ, ಚನ್ನಣ್ಣ ಬಾಳಿ, ಗುರುನಾಥ ಗುದ್ಗಲ್, ತಿಪ್ಪಣ್ಣ ವಗ್ಗರ, ಸಾಹೇಬಗೌಡ ತುಮಕೂರ, ದೇವಿಂದ್ರ ತಳವಾರ, ಈಶ್ವರ ಬಾಳಿ, ಬಸವರಾಜ ಯಾಕಾ, ಪಾಂಡುರAಗ ಇಗ್ವೆ, ಸೂರ್ಯಕಾಂತ ಕಾಳೇಕರ್, ಚಂದ್ರಶೇಖರ ಹಾವೇರಿ, ಸಿದ್ರಾಮಪ್ಪ ದೇಸಾಯಿ, ಚನ್ನಪ್ಪ ಅಳ್ಳೊಳ್ಳಿ, ಭೀಮರಾವ ಪಾಟೀಲ್, ಸಿದ್ದಲಿಂಗ ಬಾಳಿ ಇತರರಿದ್ದರು.