ಹುಬ್ಬಳ್ಳಿ: ಶುಕ್ರವಾರ ಏರ್ಪಡಿಸಿದ್ದ ಇನ್ವೆಸ್ಟ್ ಕರ್ನಾಟಕ ಹುಬ್ಬಳ್ಳಿ ಸಮಾವೇಶದಲ್ಲಿ ದೊಡ್ಡ-ಚಿಕ್ಕ ಕಂಪನಿಗಳು ಸರ್ಕಾರದೊಂದಿಗೆ ಒಡಂಬಡಿಕೆ ಪತ್ರಕ್ಕೆ ಸಹಿ ಹಾಕಿದ್ದು, ಭವಿಷ್ಯ ಆಶಾದಾಯಕವಾಗಿದೆ ಎನ್ನುವುದನ್ನು ಸಾಬೀತುಪಡಿಸಿತು. ಒಡಂಬಡಿಕೆ ಮಾಡಿಕೊಂಡ ಕಂಪನಿಗಳ ಮಾಹಿತಿ ಇಲ್ಲಿದೆ.
ಅತಿ ಹೆಚ್ಚು ಬಂಡವಾಳ ಹೂಡಿಕೆಗೆ ಒಡಂಬಡಿಕೆ ಮಾಡಿಕೊಂಡಿದ್ದು ಬೆಂಗಳೂರು ಮೂಲದ ರಾಜೇಶ ಎಕ್ಸ್ಪೋರ್ಟ್ಸ್ ಲಿ. ಕಂಪನಿ. ಇಲೆಕ್ಟ್ರಿಕಲ್ ವಾಹನಗಳ ತಯಾರಿಕೆಯ ರಾಜೇಶ ಎಕ್ಸ್ಪೋರ್ಟ್ಸ್ ಧಾರವಾಡದಲ್ಲಿ 50 ಸಾವಿರ ಕೋಟಿ ರೂ.ಗಳ ಬಂಡವಾಳ ಹೂಡಲು ಮುಂದೆ ಬಂದಿದೆ.
ವಿದ್ಯುತ್ ಚಾಲಿತ ವಾಹನಗಳಿಂದ ಕಚ್ಚಾ ತೈಲದ ಆಮದಿನಲ್ಲಿ ಸಾಕಷ್ಟು ಇಳಿಕೆಯಾಗಲಿದೆ. ಈ ಭಾಗದಲ್ಲಿ ಹೂಡಿಕೆ ಸ್ನೇಹಿ ವಾತಾವರಣ ಇರುವುದರಿಂದ ಧಾರವಾಡದಲ್ಲಿ ಇಲೆಕ್ಟ್ರಿಕಲ್ ವಾಹನಗಳ ಉತ್ಪಾದನೆ ಘಟಕ ಪ್ರಾರಂಭಿಸಲು ನಿರ್ಧರಿಸಿದ್ದಾಗಿ ರಾಜೇಶ ಎಕ್ಸ್ಪೋರ್ಟ್ಸ್ನ ಚೇರ್ಮನ್ ರಾಜೇಶ ಮೆಹ್ತಾ ಇದೇ ಸಂದರ್ಭದಲ್ಲಿ ಹೇಳಿದರು.
ಸೊನಾಲಿ ಪವರ್ ಕಂಪನಿ 4,800 ಕೋಟಿ ರೂ.(ದಾವಣಗೆರೆ-2,100 ಉದ್ಯೋಗ), ನ್ಯಾಟ್ಕ್ಯಾಪ್ ಪವರ್ 3 ಸಾವಿರ ಕೋಟಿ ರೂ. (ಹುಬ್ಬಳ್ಳಿ-100 ಉದ್ಯೋಗ), ಜೆಟ್ವಿಂಗ್ಸ್ ಏರೋಸ್ಪೇಸ್ ಆಂಡ್ ಏವಿಯೇಷನ್ 2,060 ಕೋಟಿ ರೂ. (ಧಾರವಾಡ-2,520 ಉದ್ಯೋಗ), ಅಯನಾ ರಿನಿವೆಬಲ್ ಪವರ್ 3 ಸಾವಿರ ಕೋಟಿ ರೂ. (ಹುಬ್ಬಳ್ಳಿ-250 ಉದ್ಯೋಗ), ಲುಗ್ಸೋರ್ ಎನರ್ಜಿ 1,200 ಕೋಟಿ ರೂ. (ವಿಜಯಪುರ-1,500 ಉದ್ಯೋಗ) ಹೆಚ್ಚು ಬಂಡವಾಳ ಹೂಡಿಕೆಗೆ ಒಡಂಬಡಿಕೆ ಮಾಡಿಕೊಂಡ ಪ್ರಮುಖ ಕೈಗಾರಿಕೆಗಳು.
ಭಾಗಿರಧಾ ಕೆಮಿಕಲ್ಸ್ ಆಂಡ್ ಇಂಡಸ್ಟ್ರೀಸ್ (ಯಾದಗಿರಿ- 345 ಕೋಟಿ), ಜಿನಬಕುಲ ಫಾರ್ಗ್ (ಬೆಳಗಾವಿ-20 ಕೋಟಿ), ಕ್ವಾಲಿಟಿ ಎನಿಮಲ್ ?ೕಡ್ಸ್ (ಬೆಳಗಾವಿ- 45 ಕೋಟಿ), ಇಂದೂರ ಲೈಫ್ ಸೈನ್ಸ್ (ಯಾದಗಿರಿ-16 ಕೋಟಿ), ಹರಿ ಫಾರ್ವ (ಯಾದಗಿರಿ- 16 ಕೋಟಿ), ಸ್ಯಾವ್ಸನ್ ಡಿಜಿಟಲ್ (ಬೆಳಗಾವಿ- 122 ಕೋಟಿ), ಆಸ್ಕಿನ್ ಬಯೊಫ್ಯುಯೆಲ್ಸ್ (ಬೆಳಗಾವಿ- 80 ಕೋಟಿ), ಫ್ಯುಯಲ್ (ಹುಬ್ಬಳ್ಳಿ-ಧಾರವಾಡ, ಬೆಳಗಾವಿ-50 ಕೋಟಿ), ಬಾಲಾಜಿ ಹೆಲ್ತ್ ಸರ್ವಿಸಸ್ (ಹುಬ್ಬಳ್ಳಿ-ಧಾರವಾಡ 130 ಕೋಟಿ), ಪ್ರಭಂಜನ ಇಂಡಸ್ಟ್ರೀಸ್ (ಹಾವೇರಿ- 500 ಕೋಟಿ), ಎಬಲಾನ್ ಗುಡ್ಸ್ಟೆಪ್ಸ್ (ಧಾರವಾಡ- 70 ಕೋಟಿ), ಮೊನಾಶಿ ಲೈಫ್ ಸೈನ್ಸ್ (ಯಾದಗಿರಿ-20 ಕೋಟಿ), ಆನಂದ ಲೈಫ್ ಸೈನ್ಸ್ (ಬೆಳಗಾವಿ-40 ಕೋಟಿ), ಅವಾದಾ ಎನರ್ಜಿ (ಧಾರವಾಡ- 300 ಕೋಟಿ), ಶಿಲ್ಪಾ ಅಲ್ಬುಮಿನ್ (ಯಾದಗಿರಿ- 221 ಕೋಟಿ), ಎನ್ಡಿಆರ್ ಇನ್ಫ್ರಾಸ್ಟ್ರಕ್ಚರ್ (ಮೈಸೂರು-300 ಕೋಟಿ), ರಾವೂಸ್ ಲ್ಯಾಬೊರೇಟರೀಸ್ (ಯಾದಗಿರಿ-43.50 ಕೋಟಿ), ಹೈಟೆಕ್ ಅಗ್ರಿಕಲಮ್ (ಧಾರವಾಡ-450 ಕೋಟಿ), ಮಾಲಿನಿ ಪಾಟೀಲ ಟೆಕ್ಸ್ಟೈಲ್ಸ್ ಪಾರ್ಕ್ (ಬೆಳಗಾವಿ-63.78 ಕೋಟಿ), ಡ್ಯುರಾಬ್ಯುಲ್ಡ್ ಟೆಕ್ನಾಲಜಿಸ್ (ಧಾರವಾಡ- 100 ಕೋಟಿ), ಕೆಎಲ್ಇ ಎಜುಕೇಶನ್ ಸೊಸೈಟಿ (ಬೆಳಗಾವಿ-600 ಕೋಟಿ), ಗುಜರಾತ ಅಂಬುಜಾ ಎಕ್ಸಪೋರ್ಟ್ಸ್ (ಹಾವೇರಿ-120 ಕೋಟಿ), ಲೊನಿಡಾ ಎಂಟರ್ಪ್ರೖೆಸೆಸ್ ಸೊಲ್ಯುಷನ್ (ಹುಬ್ಬಳ್ಳಿ-25 ಕೋಟಿ), ಕೆ.ಎನ್. ಫಾಮ್ರ್ ಇಕ್ವಿಪ್ವೆುಂಟ್ಸ್ (ಬೀದರ-100 ಕೋಟಿ), ಆದರ್ಶ ಫಾರ್ವಸಿಟಿಕಲ್ ಇಂಡಸಿ ್ಟ್ರ (ಯಾದಗಿರಿ-40 ಕೋಟಿ), ಜೆಟ್ ಲೈಫ್ ಸೈನ್ಸ್ (ಯಾದಗಿರಿ-19.50 ಕೋಟಿ), ಶ್ರೀಯಾ ಫೈನ್ ಕೆಮಿಕಲ್ಸ್ (ಯಾದಗಿರಿ-26.10 ಕೋಟಿ), ಅಸ್ಟ್ರಾಜೆನ್ ಲ್ಯಾಬೊರೇಟರೀಸ್ (ಯಾದಗಿರಿ-49.80 ಕೋಟಿ), ಇಂಡಿಯನ್ ಆಯಿಲ್ ಕಾಪೋರೇಷನ್ (ಚಿತ್ರದುರ್ಗ-500 ಕೋಟಿ), ವಿಜಯ ಶಾಂತಿ ಅಗ್ರೊ ಟೆಕ್ ಎಕ್ ್ಸ ಪೋರ್ಟ್ (ಬೆಳಗಾವಿ-200 ಕೋಟಿ), ದೊಡ್ಲಾ ಡೈರಿ (ಬೆಳಗಾವಿ-60 ಕೋಟಿ), ಹುಬ್ಬಳ್ಳಿ ಅಗ್ರೊ ಫ್ಯಾಬ್ ಕ್ಲಸ್ಟರ್ (ಹುಬ್ಬಳ್ಳಿ-ಧಾರವಾಡ 50.40 ಕೋಟಿ), ಕೃಷಿಸೇವಾ ಅಗ್ರೊ ಇಂಜಿನಿಯರಿಂಗ್ ವರ್ಕ್ಸ್ (ಬೀದರ್-15 ಕೋಟಿ), ಹಿಂದೂಸ್ತಾನ ಪೆಟ್ರೋಲಿಯಂ (ಹಾಸನ, ತುಮಕೂರು, ಚಿತ್ರದುರ್ಗ-680.06 ಕೋಟಿ), ಎಸಿಸಿ ಧಾರವಾಡ (ಧಾರವಾಡ- 25 ಕೋಟಿ), ಅಶೋಕ ಐರನ್ ವರ್ಕ್ಸ್ (ಬೆಳಗಾವಿ-300 ಕೋಟಿ), ಮೈಕ್ರೊ?ನಿಶ್ ಪಂಪ್ಸ್ (ಧಾರವಾಡ-33.50 ಕೋಟಿ), ಎಸ್ವಿಎಸ್ ಆರ್ಗ್ಯಾನಿಕ್ಸ್ (ಹುಬ್ಬಳ್ಳಿ-ಧಾರವಾಡ- 75 ಕೋಟಿ), ಡೆಂಟೊ ಮ್ಯಾಟ್ರಿಕ್ಸ್ (ಹುಬ್ಬಳ್ಳಿ-15 ಕೋಟಿ), ಪ್ರತೀಕ್ಷಾ ಇಂಡಸ್ಟ್ರೀಸ್ (ಧಾರವಾಡ-16.17 ಕೋಟಿ), ಗೋಲ್ಡನ್ ಸೀಮ್್ಸ ಇಂಡಸ್ಟ್ರೀಸ್ (ಬೇಲೂರ/ಕಿತ್ತೂರ-25 ಕೋಟಿ), ಪೆಡ್ರೊ ಶ್ಯುಗರ್ ಇಂಡಸ್ಟ್ರಿ (550 ಕೋಟಿ), ಮೆನ್ಗ್ಯಾಂಗ್ ಮಷಿನರಿ (100 ಕೋಟಿ), ಶ್ರೀ ಸ್ಯಾಕ್ ಅಗ್ರೊ ಇಕ್ವಿಪ್ವೆುಂಟ್ (30 ಕೋಟಿ), ಕಿಲೋಸ್ಕರ್ ಇಂಡಿಯಾ ಬಂಡವಾಳ ಹೂಡಿಕೆಗೆ ಒಡಂಬಡಿಕೆ ಮಾಡಿಕೊಂಡ ಇತರ ಕಂಪನಿಗಳು.
10 ಸಾವಿರ ಜನರಿಗೆ ಉದ್ಯೋಗ
ಲಿಥಿಯಂ ಐಯಾನ್ ಸೆಲ್ನಿಂದ ಇಲೆಕ್ಟ್ರಿಕಲ್ ವೆಹಿಕಲ್, ಬ್ಯಾಟರಿ ಉತ್ಪಾದನೆ ಮಾಡುತ್ತಿದ್ದೇವೆ. ಧಾರವಾಡದಲ್ಲಿ 50 ಸಾವಿರ ಕೋಟಿ ರೂ. ಬಂಡವಾಳ ಹೂಡಿಕೆ ಮಾಡಲಿದ್ದೇವೆ. ಇದು 10 ಸಾವಿರ ಜನರಿಗೆ ಉದ್ಯೋಗ ಕಲ್ಪಿಸಲಿದೆ. ಮುಂದಿನ ದಿನಗಳಲ್ಲಿ ಇಲೆಕ್ಟ್ರಿಕಲ್ ವೆಹಿಕಲ್ಗಳಿಗೆ ಭಾರಿ ಬೇಡಿಕೆ ಬರಲಿದೆ. ಇವು ಪರಿಸರ ಸಂರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸಲಿವೆ. | ರಾಜೇಶ ಮೆಹ್ತಾ
ಸಿಇಒ ರಾಜೇಶ ಎಕ್ಸ್ಪೋರ್ಟ್ಸ್ ಪ್ರೖೆವೇಟ್ ಲಿಮಿಟೆಡ
ಬೃಹತ್ ಉದ್ಯಮಗಳಿಗೆ ಹೇರಳ ಅವಕಾಶ
ಹುಬ್ಬಳ್ಳಿ: ಉತ್ತರ ಕರ್ನಾಟಕ ಭಾಗದಲ್ಲಿ ಸಾಂಪ್ರದಾಯಿಕ ಉದ್ದಿಮೆ ಬಿಟ್ಟರೆ ಬೃಹತ್ ಕೈಗಾರಿಕೆಗಳಿಗೆ ಅವಕಾಶವಿಲ್ಲ ಎಂಬ ಕಲ್ಪನೆ ಕೆಲ ಹೂಡಿಕೆದಾರರಲ್ಲಿದೆ. ಆದರೆ, ಇದು ತಪ್ಪು. ಈ ಭಾಗದಲ್ಲಿ ಸಾಕಷ್ಟು ಅವಕಾಶಗಳಿವೆ ಎಂದು ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯ ಉಪಕುಲಪತಿ ಡಾ. ಅಶೋಕ ಶೆಟ್ಟರ್ ಹೇಳಿದರು. ಸಮಾವೇಶದಲ್ಲಿ ಮಾತನಾಡಿದ ಅವರು, ಈಗಾಗಲೇ ಉನ್ನತ ತಂತ್ರಜ್ಞಾನದ ಏಕಸ್, ಸಂಕಲ್ಪ ಸೆಮಿ ಕಂಡಕ್ಟರ್ಸ್ ಮತ್ತು ನವ್ಯಾ ಬಯೋಟೆಕ್ನಾಲಜಿ ಸೇರಿ ಹಲವು ಕಂಪನಿಗಳು ಸಮರ್ಥವಾಗಿ ಕಾರ್ಯನಿರ್ವಹಿಸುತ್ತಿದ್ದು, ಉತ್ತರ ಕರ್ನಾಟಕದ ಸಾಮರ್ಥ್ಯ ಸಾಬೀತು ಪಡಿಸಿವೆ ಎಂದರು. ಹುಬ್ಬಳ್ಳಿ- ಧಾರವಾಡ ಹಾಗೂ ಬೆಳಗಾವಿ ಉತ್ತರ ಕರ್ನಾಟಕದ ಭವಿಷ್ಯತ್ತಿನ ಮಹಾನಗರಗಳಾಗಿ ಅಭಿವೃದಿಟಛಿ ಹೊಂದುತ್ತಿವೆ. ನೂರಾರು ಶಿಕ್ಷಣ ಸಂಸ್ಥೆಗಳು, ವಿಶ್ವವಿದ್ಯಾಲಯಗಳನ್ನು ಹೊಂದಿರುವ ನಗರಗಳು ಪ್ರತಿವರ್ಷ ಸಹಸ್ರಾರು ಇಂಜಿನಿಯರಿಂಗ್ ಪದವೀಧರರನ್ನು ನೀಡುತ್ತಿವೆ ಎಂದರು. ಕೃಷಿ ಪ್ರಧಾನ ಜಿಲ್ಲೆಗಳಾಗಿರುವುದರಿಂದ ಆಹಾರ ಸಂಸ್ಕರಣೆ ಕೈಗಾರಿಕೆಗೆ ಹೆಚ್ಚು ಅನುಕೂಲಕರ ವಾತಾವರಣ ಇಲ್ಲಿದೆ. ಹೂಡಿಕೆದಾರರು ಆಸಕ್ತಿ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ಶಾಹಿ ಎಕ್ಸ್್ಸೋರ್ಟ್ಸ್ನಿಂದ 12500 ಉದ್ಯೋಗ
ಮುಂಬರುವ ವರ್ಷಗಳಲ್ಲಿ ಉತ್ತರ ಕರ್ನಾಟಕದ ನಾಲ್ಕು ಜಿಲ್ಲೆಗಳಲ್ಲಿ ಐದು ಉದ್ಯಮ ಘಟಕ ಸ್ಥಾಪಿಸಿ 12,500 ಉದ್ಯೋಗ ಸೃಜನೆಯ ಗುರಿ ಹೊಂದಲಾಗಿದೆ ಎಂದು ಶಾಹಿ ಎಕ್ಸ್ಪೋರ್ಟ್ಸ್ ಸಂಸ್ಥೆಯ ಪಿ.ಬಿ. ಆನಂದ ಪದ್ಮನಾಭನ್ ಹೇಳಿದರು.ಕರ್ನಾಟಕದಲ್ಲಿ ಕಳೆದ ಐದು ವರ್ಷಗಳಲ್ಲಿ ಮೂರು ಸರ್ಕಾರಗಳು ಬದಲಾಗಿವೆ. ಆದರೆ, ಕೈಗಾರಿಕೆ ನೀತಿಯಲ್ಲಿ ಬದಲಾವಣೆಗಳಾಗಿಲ್ಲ. ಉದ್ಯಮಿಗಳಿಗೆ ನಿರಂತರ ಪೋ›ತ್ಸಾಹ ಸಿಗುತ್ತಿದೆ. ನಾವು 2 ವರ್ಷಗಳಲ್ಲಿ 200 ಕೋಟಿ ರೂ. ಬಂಡವಾಳ ಹೂಡಿದ್ದೇವೆ. ಕಳೆದ 8 ವರ್ಷಗಳಲ್ಲಿ 23 ಉದ್ದಿಮೆಗಳು ಬೆಂಗಳೂರು ಕೇಂದ್ರಿತವಾಗಿ ಕಾರ್ಯನಿರ್ವಹಿಸುತ್ತಿದ್ದವು. ಈಗ ಬೆಂಗಳೂರಿನಿಂದ ಹೊರಗಡೆ ನಮ್ಮ 24 ಉದ್ಯಮಗಳಿವೆ. ಉತ್ತರ ಕರ್ನಾಟಕದ ಗದಗ, ಧಾರವಾಡ, ಬಳ್ಳಾರಿ, ಬೆಳಗಾವಿ ಜಿಲ್ಲೆಗಳಲ್ಲಿ ಉದ್ಯಮಗಳನ್ನು ಸ್ಥಾಪಿಸಿ 12500 ಉದ್ಯೋಗ ಸೃಜಿಸಲಾಗುವುದು ಎಂದರು.
ಉದ್ಯಮಶೀಲ ವಾತಾವರಣ
ದೇಶಪಾಂಡೆ ಫೌಂಡೇಷನ್ ಸಿಇಒ ವಿವೇಕ ಪವಾರ ಮಾತನಾಡಿ, ಈ ಭಾಗದಲ್ಲಿ ಉದ್ಯಮಶೀಲ ವಾತಾವರಣ ಸೃಷ್ಟಿ ಜತೆಗೆ ಕೃಷಿ ಹಾಗೂ ಜನರ ಜೀವನ ಮಟ್ಟ ಎತ್ತರಿಸಲು ಸಂಸ್ಥೆ ಅವಿರತ ಶ್ರಮಿಸುತ್ತಿದೆ. ವಿಶೇಷವಾಗಿ ಕೃಷಿಕರ ಆದಾಯ ಹೆಚ್ಚಿಸಲು ಕೃಷಿ ಹೊಂಡ ನಿರ್ವಣಕ್ಕೆ ಆದ್ಯತೆ ನೀಡಲಾಗಿದೆ. ಅಂದಾಜು ಒಂದು ಲಕ್ಷ ರೈತರೊಂದಿಗೆ ಸಂಸ್ಥೆ ಸಂಪರ್ಕದಲ್ಲಿದೆ ಎಂದರು. ಯುವತಿಯರು ಹಾಗೂ ಯುವಕರಲ್ಲಿ ಉದ್ಯಮಶೀಲತೆ ಬೆಳೆಸಲು ಕೌಶಲ ತರಬೇತಿ ನೀಡಲಾಗುತ್ತಿದೆ. ಸ್ಟಾರ್ಟ್ ಅಪ್ ಇನ್ಕ್ಯುಬೇಷನ್ ಸೆಂಟರ್ ಸೌಲಭ್ಯ ನೀಡಲಾಗುತ್ತಿದೆ. ದೇಶದ ಅತಿದೊಡ್ಡ ಇನ್ಕ್ಯುಬೇಷನ್ ಹಾಗೂ ಸ್ಕಿಲ್ ಸೆಂಟರ್ ಇಲ್ಲಿ ಇದೆ. ಒಟ್ಟಾರೆ ಯುವ ಸಮೂಹದಲ್ಲಿ ಉದ್ಯೋಗದ ಬಗ್ಗೆ ವಿಶ್ವಾಸ ಮೂಡಿಸುವ ಕೆಲಸ ಮಾಡಲಾಗುತ್ತಿದೆ ಎಂದರು.
ಕೌಶಲ ಮಾನವ ಸಂಪನ್ಮೂಲ
ಧಾರವಾಡ ಟಾಟಾ ಹಿಟಾಚಿ ವ್ಯವಸ್ಥಾಪಕ ನಿರ್ದೇಶಕ ಸಂದೀಪ ಸಿಂಗ್ ಮಾತನಾಡಿ, ಈ ಭಾಗದಲ್ಲಿ ಕೌಶಲ ಹಾಗೂ ಪ್ರತಿಭಾವಂತ ಮಾನವ ಸಂಪನ್ಮೂಲ ಇದೆ. ಸರ್ಕಾರದಿಂದಲೂ ತೆರಿಗೆ ರಿಯಾಯಿತಿ ಸೇರಿ ವಿವಿಧ ಸೌಲಭ್ಯ ಹಾಗೂ ಒಳ್ಳೆಯ ಬೆಂಬಲ ಸಿಗುತ್ತಿದೆ. ಹಾಗಾಗಿ ವರ್ಷದಿಂದ ವರ್ಷಕ್ಕೆ ಕಂಪನಿ ಅಭಿವೃದಿಟಛಿಯಲ್ಲಿ ದಾಪುಗಾಲು ಇಟ್ಟಿದೆ. ಕಂಪನಿ ನೇರವಾಗಿ ಸಾವಿರ ಜನರಿಗೆ ಉದ್ಯೋಗ ನೀಡಿದರೆ, 24 ವೆಂಡರ್ಸ್ 6100, ಡೀಲರ್ಗಳು 180 ಜನರಿಗೆ ಉದ್ಯೋಗ ನೀಡಿದ್ದಾರೆ ಎಂದರು. ಹೂಡಿಕೆಗೆ ಇದು ಉತ್ತಮ ಜಾಗ. ದೊಡ್ಡ ಕಂಪನಿಗಳು ಉದ್ಯಮ ಆರಂಭಿಸಬಹುದು ಎಂದು ಹೇಳಿದರು.
ಹುಬ್ಬಳ್ಳಿಯಲ್ಲಿ ಸಿಪೆಟ್ ಕೇಂದ್ರ
ಹುಬ್ಬಳ್ಳಿಯಲ್ಲಿ ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್ ಪ್ಲಾಸ್ಟಿಕ್ಸ್ ಇಂಜಿನಿಯರಿಂಗ್ ಆಂಡ್ ಟೆಕ್ನಾಲಜಿ (ಸಿಪೆಟ್) ಕೇಂದ್ರ ತೆರೆಯಲು ಉದ್ದೇಶಿಸಲಾಗಿದೆ ಎಂದು ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರ ಸಚಿವ ಡಿ.ವಿ. ಸದಾನಂದಗೌಡ ತಿಳಿಸಿದರು. ಇನ್ವೆಸ್ಟ್ ಕರ್ನಾಟಕ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪಾಲಿಮರ್ ಸೈನ್ಸ್ ಮತ್ತು ಟೆಕ್ನಾಲಜಿ ಕ್ಷೇತ್ರದಲ್ಲಿ ತರಬೇತಿ ಕೇಂದ್ರವಾಗಿ ಇದು ಕೆಲಸ ಮಾಡಲಿದೆ ಎಂದರು.
ವಿದೇಶಿ ನೇರ ಬಂಡವಾಳ ಹರಿವು ಹೆಚ್ಚಳ
ಹುಬ್ಬಳ್ಳಿ: ಹಿಂದಿನ 20 ವರ್ಷಗಳಲ್ಲಿ ದೇಶಕ್ಕೆ ಹರಿದು ಬಂದ ವಿದೇಶಿ ನೇರ ಬಂಡವಾಳ(ಎಫ್ಡಿಐ)ದ ಶೇ. 50 ರಷ್ಟು ಹಣ ಕಳೆದ 5 ವರ್ಷಗಳಲ್ಲಿ ಬಂದಿದೆ ಎಂದು ಕೇಂದ್ರ ಗಣಿ ಮತ್ತು ಕಲ್ಲಿದ್ದಲು ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ಹುಬ್ಬಳ್ಳಿ ಸಮಾವೇಶದಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಮೂಲಸೌಕರ್ಯಗಳ ಅಭಿವೃದಿಟಛಿಗೆ ಹೆಚ್ಚು ಒತ್ತು ನೀಡುತ್ತಿದೆ. ಹಿಂದೆ ನಿತ್ಯ ಸರಾಸರಿ 9-10 ಕಿ.ಮೀ. ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾಮಗಾರಿ ನಡೆಯುತ್ತಿತ್ತು. ಇಂದು ನಿತ್ಯ ಸರಾಸರಿ 30 ಕಿ.ಮೀ.ನಷ್ಟು ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾರ್ಯ ನಡೆಯುತ್ತಿದೆ. ವಿದ್ಯುತ್ ಕೊರತೆ ಇಲ್ಲ. ರಾಷ್ಟ್ರೀಯ ಗ್ರಿಡ್ನಲ್ಲಿ ಹೆಚ್ಚುವರಿ ವಿದ್ಯುತ್ ಸಂಗ್ರಹವಿದೆ ಎಂದರು.
ದ್ವಿತೀಯ ಹಾಗೂ ತೃತೀಯ ಸ್ತರದ ನಗರಗಳಲ್ಲಿ ಕೈಗಾರಿಕೆಗಳ ಬೆಳವಣಿಗೆಯಾದರೆ ದೇಶದ ಆರ್ಥಿಕತೆ 5 ಟ್ರಿಲಿಯನ್ ಡಾಲರ್ವುುಟ್ಟಲಿದೆ. ದೇಶದ 100 ಸ್ಮಾರ್ಟ್ ಸಿಟಿಗಳಲ್ಲಿ ಹು-ಧಾ ಒಂದಾಗಿದೆ. ಈಗಾಗಲೇ ಸಾರ್ವಜನಿಕ ರ್ಪಾಂಗ್ ನಿರ್ವಹಣೆ ವ್ಯವಸ್ಥೆ, ಇ-ಆಡಳಿತ ಮತ್ತು ಇಂಟೆಲಿಜೆಂಟ್ ಟ್ರಾನ್ಸಫೋರ್ಟ್ ಮ್ಯಾನೇಜ್ವೆುಂಟ್ ಸಿಸ್ಟಮ್ಂಥ ಅನೇಕ ಸ್ಮಾರ್ಟ್ ವ್ಯವಸ್ಥೆಗಳನ್ನು ಇಲ್ಲಿ ಜಾರಿಗೊಳಿಸಲಾಗಿದೆ. ಕೈಗಾರಿಕೆ ಬೆಳವಣಿಗೆ ಬೆಂಬಲಿಸಲು ಮತ್ತು ಹೂಡಿಕೆ ಆಕರ್ಷಿಸಲು ಹುಬ್ಬಳ್ಳಿ ಧಾರವಾಡದಲ್ಲಿ ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದಿಟಛಿ ಮಂಡಳಿಯಿಂದ ಕೈಗಾರಿಕಾ ವಸಾಹತು ಪ್ರದೇಶಗಳನ್ನು ಅಭಿವೃದಿಟಛಿಪಡಿಸಲಾಗಿದೆ ಎಂದರು.
ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿರುವ ಟಾಟಾ ಹಿಟಾಚಿಯಂತಹ ಕಂಪನಿಗಳು ಹು-ಧಾ ನಗರವನ್ನು ಆಯ್ಕೆ ಮಾಡಿಕೊಂಡಿವೆ. ಉತ್ತರ ಕರ್ನಾಟಕದ ಔಷಧ ವಲಯವನ್ನು ಬೆಂಬಲಿಸಲು ಹುಬ್ಬಳ್ಳಿ ಮತ್ತು ಬಳ್ಳಾರಿಯಲ್ಲಿ 2 ಪ್ರಾದೇಶಿಕ ಔಷಧ ಪರೀಕ್ಷಾ ಪ್ರಯೋಗಾ ಲಯಗಳನ್ನು ಸ್ಥಾಪಿಸಲಾಗುತ್ತಿದೆ. ಉತ್ತರ ಕರ್ನಾಟಕದ ಆರ್ಥಿಕ ಬೆಳವಣಿಗೆಯ ಸಾಮರ್ಥ್ಯ ಹೆಚ್ಚಿಸುವಲ್ಲಿ ಇನ್ವೆಸ್ಟ್ ಕರ್ನಾಟಕ ಹುಬ್ಬಳ್ಳಿ ಸಮ್ಮೇಳನ ಮಹತ್ವದ ಪಾತ್ರ ವಹಿಸುತ್ತದೆ ಎಂದರು.
ವಿಶ್ವದೆಲ್ಲೆಡೆ ಬೇಡಿಕೆ
ಬೆಳಗಾವಿ ಏರೋಸ್ಪೇಸ್ ವಿಶೇಷ ಆರ್ಥಿಕ ವಲಯದಲ್ಲಿ ಉತ್ಪಾದಿಸುವ ಏರ್ಕ್ರಾಫ್ಟ್ ಬಿಡಿಭಾಗ ಗಳಿಗೆ ವಿಶ್ವದೆಲ್ಲೆಡೆ ಬೇಡಿಕೆ ಯಿದೆ. ಏಕಸ್ ಸಂಸ್ಥೆಯ ಬಿಡಿಭಾಗಗಳಿಲ್ಲದೆ ಯಾವುದೇ ಏರ್ಕ್ರಾಫ್ಟ್ ಸಿದಟಛಿವಾಗುವುದಿಲ್ಲ. ಇದೇ ಮಾದರಿಯಲ್ಲಿ ಕೊಪ್ಪಳದಲ್ಲಿ ಆಟಿಕೆ (ಟಾಯ್) ಕ್ಲಸ್ಟರ್ ಕಾರ್ಯನಿರ್ವಹಿಸಲಿದೆ. ಮುಂದಿನ 5 ವರ್ಷಗಳಲ್ಲಿ 2 ಸಾವಿರ ಕೋಟಿ ರೂ. ಬಂಡವಾಳ ಹೂಡಲಾಗುವುದು. ಉತ್ತರ ಕರ್ನಾಟಕದಲ್ಲಿ ಪ್ರತಿಭೆ ಮತ್ತು ಸಾಮರ್ಥ್ಯಗಳಿಗೆ ಕೊರತೆ ಇಲ್ಲ. ದೀರ್ಘಾವಧಿಯ ಬಂಡವಾಳ ಹೂಡಿಕೆ ಮೂಲಕ ಬೃಹತ್ ಉದ್ದಿಮೆಗಳನ್ನು ಸ್ಥಾಪಿಸಿದರೆ ಪ್ರತಿಭಾ ಪಲಾಯನ ತಡೆಯಬಹುದು.| ಅರವಿಂದ ಮೆಳ್ಳಿಗೇರಿ
ಸಿಎಂಡಿ, ಏಕಸ್