ಹುಮನಾಬಾದ್‍ನಲ್ಲಿ ಶನಿವಾರ ಕಾಂಗ್ರೆಸ್ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಸಂಸದ ಸಾಗರ್ ಖಂಡ್ರೆ, ಎಂಎಲ್‍ಸಿ ಡಾ.ಚಂದ್ರಶೇಖರ ಪಾಟೀಲï, ಡಿಸಿಸಿ ಬ್ಯಾಂಕ್ ಉಪಾಧ್ಯP್ಷÀ ಅಭಿಷೇಕ ಪಾಟೀಲ್ ಅವರನ್ನು ಸನ್ಮಾನಿಸಲಾಯಿತು. ಸಚಿವರಾದ ಈಶ್ವರ ಖಂಡ್ರೆ, ರಹೀಮ್ ಖಾನï, ಮಾಜಿ ಸಚಿವ ರಾಜಶೇಖರ ಪಾಟೀಲï, ಎಂಎಲ್‍ಸಿ ಭೀಮರಾವ ಪಾಟೀಲï, ಮಾಜಿ ಎಂಎಲ್‍ಸಿಗಳಾದ ಅರವಿಂದ ಅರಳಿ, ವಿಜಯಸಿಂಗ್ ಇದ್ದರು. 
ಜಿಲ್ಲೆ

ಒಗ್ಗಟ್ಟಿನಿಂದ ಅಭಿವೃದ್ಧಿಗೆ ಶ್ರಮಿಸಿ

ಹುಮನಾಬಾದ್: ಕಾಂಗ್ರೆಸ್ ಮೇಲೆ ಜನರು ಇಟ್ಟಿರುವ ವಿಶ್ವಾಸದಂತೆ ನೂತನವಾಗಿ ಆಯ್ಕೆಯಾದ ಸಂಸದರು, ವಿಧಾನ ಪರಿಷತ್ ಸದಸ್ಯರು ಸೇರಿ ವಿವಿಧ ನಿಗಮ-ಮಂಡಳಿಗಳಿಗೆ ನಾಮನಿರ್ದೇಶನಗೊಂಡ ಅಧ್ಯP್ಷÀರು, ನಿರ್ದೇಶಕರು ಜಿ¯್ಲÉ ಅಭಿವೃದ್ಧಿಗೆ ಒಗ್ಗಟ್ಟಿನಿಂದ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಜಿ¯್ಲÁ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಸಲಹೆ ನೀಡಿದರು.

ಪಟ್ಟಣದ ವೀರಭದ್ರೇಶ್ವರ ಮಂದಿರ ಹತ್ತಿರದ ಬಸವರಾಜ ಪಾಟೀಲ್ ಕಲ್ಯಾಣ ಮಂಟಪ್ಪದಲ್ಲಿ ಶನಿವಾರ ಬ್ಲಾಕ್ ಕಾಂಗ್ರೆಸ್ ಸಮಿತಿ ಆಯೋಜಿಸಿದ್ದ ನೂತನ ಜನಪ್ರತಿನಿಧಿಗಳ ಅಭಿನಂದನಾ ಸಮಾರಂಭ ಉದ್ಘಾಟಿಸಿದ ಅವರು, ಜನರ ಆಶೀರ್ವಾದದಿಂದ ರಾಜ್ಯದಲ್ಲಿ ಪಕ್ಷ ಅಧಿಕಾರಕ್ಕೆ ಬಂದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಜನಪರ ಹಾಗೂ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿz್ದÁರೆ. ಸಂಸದ ಸಾಗರ್ ಖಂಡ್ರೆ, ವಿಧಾನ ಪರಿಷತ್ ಸದಸ್ಯ ಡಾ.ಚಂದ್ರಶೇಖರ ಪಾಟೀಲï ಗೆಲುವಿನಲ್ಲಿ ಮತದಾರರ ಆಶೀರ್ವಾದ ಹಾಗೂ ಪಕ್ಷದ ಮುಖಂಡರು, ಕಾರ್ಯಕರ್ತರ ಶ್ರಮ ಅಡಗಿದೆ ಎಂದರು.
ಕಾಂಗ್ರೆಸ್ ನುಡಿದಂತೆ ನಡೆಯುತ್ತಿದೆ. ಸುಳ್ಳು ಹೇಳುವುದು, ಏಕವಚನದಲ್ಲಿ ಮಾತನಾಡುವುದು ಬಿಜೆಪಿ ಸಂಸ್ಕøತಿ ಎಂದ ಅವರು, ಮಾಜಿ ಸಚಿವ ರಾಜಶೇಖರ ಪಾಟೀಲ್ ಸೋತಿದ್ದರಿಂದ ಹುಮನಾಬಾದ್ ವಿಧಾನಸಭಾ ಕ್ಷೇತ್ರಕ್ಕೆ ಅನ್ಯಾಯವಾಗಿದೆ. ಪP್ಷÀ ಅವರೊಂದಿಗಿದೆ. ಕೆಕೆಆರ್‍ಡಿಬಿ ಅನುದಾನ ದುರ್ಬಳಕೆಯಾದಲ್ಲಿ ಸಂಬಂಧಿತರ ವಿರುದ್ಧ ಮುಲಾಜಿಲ್ಲದೆ ಕ್ರಮ ಜರುಗಿಸುವುದಾಗಿ ಎಚ್ಚರಿಸಿದರು.

ಮಾಜಿ ಸಚಿವ ರಾಜಶೇಖರ ಪಾಟೀಲ್ ಮಾತನಾಡಿ, ನೂತನ ಸಂಸದ ಖಂಡ್ರೆ, ಎಂಎಲ್‍ಸಿ ಪಾಟೀಲï ಅಭಿವೃದ್ಧಿಗೆ ನಿರಂತರ ಶ್ರಮಿಸಬೇಕು. ಸಂಸದರಿಗೆ ಹುಮನಾಬಾದ್ ಕ್ಷೇತ್ರದ ಮತದಾರರು ಸುಮಾರು 27 ಸಾವಿರ ಲೀಡ್ ನೀಡಿz್ದÁರೆ. ಒಳ್ಳೆಯ ರೀತಿಯಿಂದ ಕೆಲಸ ಮಾಡಿ ಜನರ ಸಮಸ್ಯೆಗೆ ಸ್ಪಂದಿಸಬೇಕು ಎಂದು ಸಲಹೆ ನೀಡಿದರು.

ಸಿಎಂ ಸಿದ್ದರಾಮಯ್ಯ ಕೊಟ್ಟ ಭರವಸೆಯಂತೆ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗಾಗಿ 5000 ಕೋಟಿ ಅನುದಾನ ಒದಗಿಸಿದ್ದಾರೆ. ಹುಮನಾಬಾದ್ ಕ್ಷೇತ್ರಕ್ಕೆ ಸುಮಾರು 45 ಕೋಟಿ ಅನುದಾನ ನೀಡಿದ್ದು, ದುರ್ಬಳಕೆಯಾಗಲು ಬಿಡದೆ ಸದ್ಬಳಕೆಯಾಗುವಂತೆ ಜಿ¯್ಲÁ ಉಸ್ತುವಾರಿ ಸಚಿವರು ಗಮನಹರಿಸಬೇಕು ಎಂದರು.

ಪೌರಾಡಳಿತ ಸಚಿವ ರಹೀಮ್ ಖಾನ್, ವಿಧಾನ ಪರಿಷತ್ ಸದಸ್ಯ ಭೀಮರಾವ ಪಾಟೀಲï, ಮಾಜಿ ಎಂಎಲ್‍ಸಿಗಳಾದ ವಿಜಯಸಿಂಗ್, ಅರವಿಂದ ಅರಳಿ, ಜಿಪಂ ಮಾಜಿ ಉಪಾಧ್ಯP್ಷÀ ಲಕ್ಷ್ಮಣರಾವ ಬುಳ್ಳಾ, ಮಾಜಿ ಸದಸ್ಯ ವೀರಣ್ಣ ಪಾಟೀಲï, ಬೀದರ್ ನಗರಸಭೆ ಅಧ್ಯP್ಷÀ ಎಂ.ಡಿ.ಗೌಸ್, ಕೆಎಂಎಫ್ ನಿರ್ದೇಶಕ ರೇವಣಸಿದ್ದಪ್ಪ ಪಾಟೀಲï, ಚಿಂಚೋಳಿ ಕ್ಷೇತ್ರದ ಮುಖಂಡ ಸುಭಾಷ ರಾಠೋಡ್, ಬ್ಲಾಕ್ ಕಾಂಗ್ರೆಸ್ ಅಧ್ಯP್ಷÀ ಅಫ್ಸರ್‍ಮಿಯಾ, ಗ್ರಾಮೀಣ ಘಟಕದ ಅಧ್ಯP್ಷÀ ಓಂಕಾರ ತುಂಬಾ ಇತರರಿದ್ದರು.

ಶಾಸಕ ಪಾಟೀಲ್ ವಿರುದ್ಧ ಕಿಡಿ: ಸಂಸದ ಸಾಗರ್ ಖಂಡ್ರೆ ಇತರರ ಅಭಿನಂದನಾ ಸಮಾರಂಭದಲ್ಲಿ ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಯಿತು. ಮಾಜಿ ಸಚಿವ ರಾಜಶೇಖರ ಪಾಟೀಲ್ ಮಾತನಾಡಿ, ಅಧಿಕಾರ ಶಾಶ್ವತವಲ್ಲ. ಅಧಿಕಾರ ಇರುತ್ತದೆ, ಹೋಗುತ್ತದೆ. ಎಲ್ಲವನ್ನೂ ನಾನು ಕಂಡಿರುವೆ. ಇಲ್ಲಿಯ ಶಾಸಕರು ನಮ್ಮ ಕುಟುಂಬದ ಬಗ್ಗೆ ಏಕವಚನದಲ್ಲಿ ಮಾತನಾಡುತ್ತಿದ್ದಾರೆ. ಎಲ್ಲವನ್ನು ಶಾಂತಿಯುತವಾಗಿ ಗಮನಿಸುತ್ತಿz್ದÉೀನೆ. ಪ್ರತಿಯೊಂದಕ್ಕೂ ಉತ್ತರ ನೀಡುವೆ. ಇಲ್ಲದಿದ್ದರೆ ನೇರವಾಗಿ ಶಾಸಕರ ಮನೆಗೆ ಹೋಗಿ ತಕ್ಕ ಉತ್ತರ ಕೊಡುವೆ ಎಂದು ಹರಿಹಾಯ್ದರು. ವಿಧಾನ ಪರಿಷತ್ ಸದಸ್ಯ ಡಾ.ಚಂದ್ರಶೇಖರ ಪಾಟೀಲ್ ಮಾತನಾಡಿ, ಮಾಜಿ ಶಾಸಕ ರಾಜಶೇಖರ ಪಾಟೀಲ್ ಬಗ್ಗೆ ಏಕವಚನದಲ್ಲಿ ಶಾಸಕರು ಮಾತನಾಡುತ್ತಿರುವುದು ಸರಿಯಲ್ಲ. ಇದೇ ರೀತಿ ಮತ್ತೆ ಮಾತನಾಡಿದರೆ ನಾಲಿಗೆ ಕಟ್ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.