ಕಲಬುರಗಿ: ರಾಜಕೀಯ, ಸರ್ಕಾರದ ಸೌಲಭ್ಯ ಪಡೆಯಲು ವಿಶ್ವಕರ್ಮ ಸಮಾಜದವರು ಒಂದುಗೂಡಬೇಕು. ಸಮುದಾಯದಲ್ಲಿ ಸಂಘಟನೆ ಕೊರತೆ ಇದ್ದು, ಶಿಕ್ಷಣ ಸಂಘಟನೆ, ಹೋರಾಟದ ಮಾರ್ಗದಲ್ಲಿ ಸಾಗಬೇಕು ಎಂದು ವಿಶ್ವಕರ್ಮ ನೌಕರರ ಕ್ಷೇಮಾಭಿವೃದ್ಧಿ ಸಂಘದ ಜಿ¯್ಲÁಧ್ಯP್ಷÀ ಚಂದ್ರಶೇಖರ ಕೆ.ಪತ್ತಾರ ಹೇಳಿದರು.
ಡಾ.ಎಸ್.ಎಂ. ಪಂಡಿತ ರಂಗಮAದಿರದಲ್ಲಿ ವಿಶ್ವಕರ್ಮ ನೌಕರರ ಕ್ಷೇಮಾಭಿವೃದ್ಧಿ ಸಂಘ, ವಿಶ್ವಕರ್ಮ ನೌಕರರ ವಿವಿದೋz್ದÉÃಶ ಸಹಕಾರ ಸಂಘ ಹಾಗೂ ಗಾಯತ್ರಿ ವಿಶ್ವಕರ್ಮ ಮಹಿಳಾ ಸಹಕಾರ ಸಂಘದಿAದ ಭಾನುವಾರ ಆಯೋಜಿಸಿದ್ದ ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ, ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿದರು.
ಪ್ರಸಕ್ತ ವರ್ಷ ಕಲಬುರಗಿಯಲ್ಲಿ ನಿವೇಶನಕ್ಕೆ ಶ್ರಮಿಸಲಾಗುವುದು. ನಮ್ಮ ಮಕ್ಕಳ ಅಧ್ಯಯನಕ್ಕಾಗಿ ಸಮಾಜದ ವಿದ್ಯಾರ್ಥಿಗಳಿಗೆ ವಸತಿ ನಿಲಯ, ಉಚಿತ ಪ್ರಸಾದ ವ್ಯವಸ್ಥೆ ಮಾಡಲಾಗುವುದು. ಸಮುದಾಯದ ಎಲ್ಲರೂ ಸಹಕಾರ, ಮಾರ್ಗದರ್ಶನ ಪಡೆಯಲಾಗುವುದು ಎಂದರು.
ವಿಶ್ವಕರ್ಮ ಸಮಾಜದ ಮುಖಂಡರು ರಾಜಕೀಯವಾಗಿ ಗುರುತಿಸಿಕೊಂಡು ಉನ್ನತ ಸ್ಥಾನಕ್ಕೆ ಏರುತ್ತಿದ್ದು, ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲೂ ಸ್ಪರ್ಧಿಸಿ, ಜಿ¯್ಲÁ ಪಂಚಾಯಿತಿಗೆ ಆಯ್ಕೆಯಾಗಬೇಕು. ಮಹಿಳಾ ಸಂಘದ ಸದಸ್ಯರ ಸಂಖ್ಯೆ ನಾಲ್ಕು ತಿಂಗಳಲ್ಲಿ ೪೦೦ಕ್ಕೂ ಹೆಚ್ಚು ಸದಸ್ಯರಾಗಿದ್ದಾರೆ. ಮಹಿಳೆಯರು ಸ್ವಯಂ ಉದ್ಯೋಗಕ್ಕೆ ಆದ್ಯತೆ ನೀಡಿ, ಆದಾಯ ಸೃಷ್ಟಿಯ ಮೂಲ ಹುಡುಕಲಾಗುವುದು ಎಂದು ಹೇಳಿದರು.
ಖ್ಯಾತ ಮನೋವೈದ್ಯ ಡಾ.ಸಿ.ಆರ್.ಚಂದ್ರಶೇಖರ ಹಾಗೂ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ.ರಾಜಣ್ಣ ಅವರು ವಿವಿಧ ಕ್ಷೇತ್ರಗಳ ಸಾಧಕರು ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಯಾದಗಿರಿ ವಿಶ್ವಕರ್ಮ ಏಕದಂಡಿಗಿ ಮಠದ ಸುರೇಂದ್ರ ಸ್ವಾಮೀಜಿ, ಮಹಿಳಾ ಸಂಘದ ಅಧ್ಯಕ್ಷೆ ಗೀತಾ ದೇವಿ, ಮುಖಂಡರಾದ ಕೆ.ಮೋನಪ್ಪ, ಗಂಗಾಧರ ಬೆಣ್ಣೆಸಿರೂರ, ಶ್ರೀದೇವಿ, ಶಶಿಕಲಾ, ಪ್ರಾಣೇಶ ಬಡಿಗೇರ, ಜನಾರ್ಧನ ಹೇಮನೂರ, ಅಶೋಕ ಪತ್ತಾರ, ಚಿತ್ರಲೇಖಾ ಟೆಂಗಳಿಕರ ಇತರರಿದ್ದರು.