ಸಂಡೂರು: ಪಕ್ಷದ ಸಂಘಟನೆ ಬಲಪಡಿಸಲು, ಯುವಕರು, ಮಹಿಳೆಯರ ಸಮಸ್ಯೆಗಳಿಗೆ ಧ್ವನಿಯಾಗಲು ಮತ್ತು ಸಮಾಜದಲ್ಲಿ ಬದಲಾವಣೆ ತರುವ ಯೋಜನೆ ರೂಪಿಸಲು ಮುಂದಾಗಬೇಕು ಎಂದು ಯುವ ಕಾಂಗ್ರೆಸ್ ಬಳ್ಳಾರಿ ಜಿಲಾಧ್ಯಕ್ಷ ಎನ್.ಮಂಜುನಾಥ ಹೇಳಿದರು.
ತೋರಣಗಲ್‌ನಲ್ಲಿ ಯುವ ಕಾಂಗ್ರೆಸ್ ಜಿಲ್ಲಾ ಕಾರ್ಯಕಾರಿಣಿಯಲ್ಲಿ ಮಾತನಾಡಿದರು. ಪಕ್ಷದ ಸಿದ್ಧಾಂತ, ನಡವಳಿಕೆ, ಸೇವಾ ಮನೋಭಾವ ನಮಗೆ ದಾರಿದೀಪವಾಗಬೇಕು. ಯುವ ಕಾಂಗ್ರೆಸ್ ಎಂದರೆ ಉತ್ಸಾಹ, ಕೆಲಸ, ಜವಾಬ್ದಾರಿಯಾಗಿದ್ದು, ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ಜನರಿಗೆ ತಲುಪುತ್ತಿರುವುದನ್ನು ಮನಗಾಣಬೇಕು. ಜನರಿಗೆ ಸೌಲಭ್ಯ ತಲುಪಿಲ್ಲದಿದ್ದರೆ ಸಮಸ್ಯೆ ಪರಿಹರಿಸಬೇಕು. ಜನರ ಹಿತಕ್ಕಾಗಿ ನಿರಂತರ ಶ್ರಮಿಸೋಣ. ಒಟ್ಟಾಗಿ ಕೆಲಸ ಮಾಡಿದರೆ ಯಶಸ್ಸು ಖಚಿತ ಎಂಬುದನ್ನು ತಿಳಿಯಬೇಕು ಎಂದರು.
ಯುವ ಕಾಂಗ್ರೆಸ್ ರಾಜ್ಯ ಅಧ್ಯಕ್ಷ ಎಚ್.ಎಸ್.ಮಂಜುನಾಥ್, ರಾಜ್ಯ ಉಸ್ತುವಾರಿ ನಿಗಮ್ ಭಂಡಾರಿ, ಮಾಧ್ಯಮ ವಿಭಾಗದ ರಾಜ್ಯಾಧ್ಯಕ್ಷ ದೀಪಕ್, ಉಪಾಧ್ಯಕ್ಷ ಅಬ್ದುಲ್ ದೇಸಾಯಿ, ಪ್ರಧಾನ ಕಾರ್ಯದರ್ಶಿ ರಾಹುಲ್ ಜಾರಕಿಹೊಳಿ, ಬಳ್ಳಾರಿ ಜಿಲ್ಲಾ ಉಸ್ತುವಾರಿಗಳಾದ ಆದಿಲ್, ಆಕಾಶ್, ಪ್ರಧಾನ ಕಾರ್ಯದರ್ಶಿ ಚಿನ್ನಿ ಕೃಷ್ಣ, ಕೊಪ್ಪಳ ಜಿಲ್ಲಾಧ್ಯಕ್ಷ ಲಿಂಗೇಶ್, ಬಳ್ಳಾರಿ ನಗರ ಜಿಲ್ಲಾಧ್ಯಕ್ಷ ಶ್ರೀಕಾಂತ್, ಸಿದ್ದು ಹಳ್ಳಿಗೌಡ, ತಾಲೂಕು ಮಾಜಿ ಅಧ್ಯಕ್ಷ ನಾಗರಾಜ್ ಇತರರಿದ್ದರು.