ಜಿಲ್ಲೆ

ಒಂದೇ ಸೂರಿನಡಿ ರೈತರಿಗೆ ಸೌಲಭ್ಯ

Kolar

ಕೋಲಾರ: ಕೃಷಿಪತ್ತಿನ ಸೊಸೈಟಿಗಳನ್ನು 2020-21ನೇ ಸಾಲಿನಲ್ಲಿ ವಿವಿಧೋದ್ದೇಶ ಸೇವಾ ಕೇಂದ್ರಗಳನ್ನಾಗಿಸಿ ಕೃಷಿಗೆ ಸಂಬಂಧಿಸಿದ ಎಲ್ಲ ಸೌಲಭ್ಯಗಳನ್ನು ರೈತರಿಗೆ ಒಂದೇ ಸೂರಿನಡಿ ಕಲ್ಪಿಸಲು ಕೇಂದ್ರ ಸರ್ಕಾರ ಯೋಜನೆ ರೂಪಿಸಿದೆ ಎಂದು ನಬಾರ್ಡ್ ಎಜಿಎಂ ನಟರಾಜನ್ ಹೇಳಿದರು.

ಜಿಲ್ಲಾ ಸಹಕಾರಿ ಯೂನಿಯನ್ ಸಭಾಂಗಣದಲ್ಲಿ ಡಿಸಿಸಿ ಬ್ಯಾಂಕ್‌ನಿಂದ ಗುರುವಾರ ನಡೆದ ಎರಡೂ ಜಿಲ್ಲೆಗಳ ್ಯಾಕ್ಸ್‌ಗಳ ಸಿಇಒಗಳ ಸಭೆಯಲ್ಲಿ ಮಾತನಾಡಿ, ಕೇಂದ್ರ ಸರ್ಕಾರ ಕೃಷಿಗೆ ಆಧುನಿಕ ಯಂತ್ರೋಪಕರಣ, ಬಿತ್ತನೆ ಬೀಜ ಉತ್ಪಾದನೆ, ತಾಂತ್ರಿಕತೆ, ಬೆಳೆದ ಉತ್ಪನ್ನಗಳ ಸಂಗ್ರಹ, ಮಾರುಕಟ್ಟೆ, ಸರಕು ಸಾಗಾಣೆಗೆ ವಾಹನ, ಮತ್ತಿತರ ಅಗತ್ಯ ಸೌಲಭ್ಯಗಳನ್ನೂ ಏಕಗವಾಕ್ಷಿಯಡಿ ್ಯಾಕ್ಸ್ ಮೂಲಕ ರೈತರಿಗೆ ಒದಗಿಸಲು ಕೇಂದ್ರ ಸರ್ಕಾರ ಯೋಜನೆ ರೂಪಿಸಿದೆ. ಈ ಸೌಲಭ್ಯಗಳ ಅಭಿವೃದ್ಧಿಗೆ ್ಯಾಕ್ಸ್‌ಗಳಿಗೆ ಶೇ.1 ರ ಬಡ್ಡಿದರದಲ್ಲಿ ಸಾಲಸೌಲಭ್ಯವನ್ನು ಕೇಂದ್ರ ಸರ್ಕಾರ ನಬಾರ್ಡ್ ಮೂಲಕ ಒದಗಿಸಲಿದೆ ಎಂದರು.

ವ್ಯಾಕ್ಸಿಂಗ್, ಪಾಲಿಷಿಂಗ್, ಪ್ರೀಕೂಲಿಂಗ್ ಚೇಂಬರ್ಸ್‌, ಕೋಳಿಮಾಂಸ ಫ್ಯಾಕಿಂಗ್ ಮಿನಿ ರೈಸ್‌ಮಿಲ್, ಫ್ರೋರ್ ಮಿಲ್, ಮಳಿಗೆಗಳ ನಿರ್ಮಾಣ ಎಲ್ಲವನ್ನು ಸೊಸೈಟಿಗಳ ಮೂಲಕವೇ ನಡೆಸಲು ನಬಾರ್ಡ್ ಶೇ.4ರ ಬಡ್ಡಿದರದಲ್ಲಿ ಸಾಲ ನೀಡುತ್ತದೆ. ಅಡುಗೆ ಅನಿಲ ಏಜೆನ್ಸಿ, ಪೆಟ್ರೋಲ್ ಬಂಕ್ ಇತರೆಲ್ಲಾ ಕೃಷಿ ನಂತರದ ಕೃಷಿಗೆ ಕೊಂಡಿಯಾಗಿರುವ ಸೇವೆಗಳು ್ಯಾಕ್ಸ್ ಮೂಲಕ ಒದಗಿಸಲು ಅವಕಾಶ ಸಿಗಲಿದೆ ಎಂದರು.

ಪ್ಯಾಕ್ಸ್‌ಗಳು ಕೃಷಿ ಸಂಬಂಧಿತ ಗೋಡೌನ್ ನಿರ್ಮಾಣ, ಟ್ರ್ಯಾಕ್ಟರ್, ಟಿಲ್ಲರ್, ಕೃಷಿಕೇತರ ಸರಕುಸಾಗಾಣೆ ವಾಹನಗಳು,ಕೃಷಿ ಸಂಬಂಧಿತ ಒಕ್ಕಣೆ ಯಂತ್ರಗಳ ಖರೀದಿಗೆ ಶೇ.4 ರ ಬಡ್ಡಿದರದಲ್ಲಿ ಸಾಲ ನೀಡಿದರೂ ಶೇ.3ರ ಬಡ್ಡಿಯನ್ನು ಕೇಂದ್ರ ಸರ್ಕಾರ ಸೊಸೈಟಿಗಳಿಗೆ ವಾಪಸ್ ನೀಡುವುದರಿಂದ ಶೇ.1 ಬಡ್ಡಿ ಬೀಳುತ್ತದೆ. ಸೊಸೈಟಿಗಳ ಇತರೆ ಆರ್ಥಿಕ ಸಬಲೀಕರಣ ಚಟುವಟಿಕೆಗಳಿಗೆ ನಬಾರ್ಡ್ ಶೇ.4 ಬಡ್ಡಿದರಲ್ಲಿ ಸಾಲ ಪಡೆಯಬಹುದು ಎಂದರು.

ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಮಾತನಾಡಿ, ್ಯಾಕ್ಸ್‌ಗಳು ಕೃಷಿ ಸಂಬಂಧಿತ ಚಟುವಟಿಕೆ ಅಳವಡಿಸಿಕೊಳ್ಳಲು ಪ್ರಾರಂಭಿಕ ಸೌಲಭ್ಯ ಅಭಿವೃದ್ಧಿಗಾಗಿ ಶೇ.10 ನೆರವನ್ನು ನಬಾರ್ಡ್ ಸೊಸೈಟಿಗಳಿಗೆ ಒದಗಿಸಲಿದೆ. ಕಚೇರಿಗೆ ಕಂಪ್ಯೂಟರ್, ಪೀಠೋಪಕರಣ ಮತ್ತಿತರವುಗಳ ಖರೀದಿಗೆ ಈ ಅನುದಾನ ಬಳಸಿಕೊಳ್ಳಬಹುದು. ಗೋದಾಮು ನಿರ್ಮಾಣಕ್ಕೆ ಅಗತ್ಯ ನೀಲಿನಕ್ಷೆ, ಅಂದಾಜುಪಟ್ಟಿ ಸಿದ್ಧಪಡಿಸಿ ಸೋಮವಾರದೊಳಗೆ ಬ್ಯಾಂಕಿಗೆ ಒದಗಿಸಿ ಎಂದು ಸೊಸೈಟಿ ಸಿಇಒಗಳಿಗೆ ಸೂಚಿಸಿದರು.

ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ನಾಗರಾಜ್, ನಿರ್ದೇಶಕರಾದ ನಾಗನಾಳ ಸೋಮಣ್ಣ, ನಾರಾಯಣರೆಡ್ಡಿ, ಕೆ.ವಿ.ದಯಾನಂದ್, ಯಲವಾರ ಸೊಣ್ಣೇಗೌಡ, ವೆಂಕಟರೆಡ್ಡಿ, ವ್ಯವಸ್ಥಾಪಕ ನಿರ್ದೇಶಕ ರವಿ, ಎಜಿಎಂಗಳಾದ ಬೈರೇಗೌಡ, ಖಲೀಮುಲ್ಲಾ, ತಿಮ್ಮಯ್ಯ, ಬ್ಯಾಂಕ್ ಇಂಜಿನಿಯರ್ ವಿಜಯಕುಮಾರ್ ಹಾಜರಿದ್ದರು.

ಗ್ರಾಹಕ ಸೇವಾ ಕೇಂದ್ರಗಳಾಗಿ ಫ್ಯಾಕ್ಸ್‌ಗಳು ಬದಲಾಗಲಿದೆ. ಇ-ಮಾರ್ಕೆಟ್, ಅಂಗಡಿಗಳ ಮಳಿಗೆಗಳು, ಕೃಷಿ ಉತ್ಪನ್ನಗಳ ಸಾಗಾಣೆಗೆ ವಾಹನ ಸೇರಿದಂತೆ ಎಲ್ಲ ಸೌಲಭ್ಯಗಳು ಸೊಸೈಟಿಗಳ ಮೂಲಕವೇ ರೈತರಿಗೆ ಸಿಗುವಂತಾಗಬೇಕೆಂಬುದು ಕೇಂದ್ರದ ಈ ಯೋಜನೆಯ ಉದ್ದೇಶ. ನಟರಾಜನ್, ನಬಾರ್ಡ್ ಎಜಿಎಂ