ಚಿಕ್ಕೋಡಿ ತಾಲೂಕಿನ ಬೆಳಕೂಡ ಗ್ರಾಮದಲ್ಲಿ ಗ್ರಾಮ ಒನ್ ಸೇವಾ ಕೇಂದ್ರವನ್ನು ಶಾಸಕ ಡಿ.ಎಂ.ಐಹೊಳೆ ಉದ್ಘಾಟಿಸಿದರು. ಪ್ರಮೀಳಾ ದೇಶಪಾಂಡೆ, ಬಸವರಾಜ ಕುಂಬಾರ, ಟಿ.ಎಸ್.ಮೋರೆ, ಚಂದ್ರಶೇಖರ ಅರಬಾವಿ, ಅನಿಲ ದಲಾಲ ಇದ್ದರು. 
ಜಿಲ್ಲೆ

ಒಂದೇ ಸೂರಿನಡಿ ಎಲ್ಲ ಸವಲತ್ತು ಲಭ್ಯ

ಚಿಕ್ಕೋಡಿ: ರಾಜ್ಯಾದ್ಯಂತ ಗ್ರಾಮೀಣ ಪ್ರದೇಶದ ಜನರು ತಾಲೂಕು ಹಾಗೂ ಜಿಲ್ಲಾ ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಲು ಸರ್ಕಾರ ಗ್ರಾಮ ಒನ್ ಸೇವಾ ಕೇಂದ್ರ ಸ್ಥಾಪಿಸಿದೆ ಎಂದು ರಾಯಬಾಗ ಶಾಸಕ ದುರ್ಯೋಧನ ಐಹೊಳೆ ಹೇಳಿದರು. ತಾಲೂಕಿನ ಬೆಳಕೂಡ ಗ್ರಾಮದಲ್ಲಿ ಗ್ರಾಮ ಒನ್ ಸೇವಾ ಕೇಂದ್ರವನ್ನು ಬುಧವಾರ ಉದ್ಘಾಟಿಸಿ ಮಾತನಾಡಿದರು. ತಹಸೀಲ್ದಾರ್ ಪ್ರಮೀಳಾ ದೇಶಪಾಂಡೆ ಮಾತನಾಡಿ, ಗ್ರಾಮ ಒನ್ ಗ್ರಾಮೀಣ ಜನರಿಗೆ ಸಹಕಾರಿಯಾಗಲಿದೆ ಎಂದರು. ಗ್ರಾಪಂ ಅಧ್ಯಕ್ಷ ಬಸವರಾಜ ಕುಂಬಾರ, ಟಿ.ಎಸ್.ಮೋರೆ ಆಗಮಿಸಿ ಮಾತನಾಡಿದರು. ಗ್ರಾಪಂ ಸದಸ್ಯರಾದ ದೇವರಾಜ ಪಾಶ್ಚಾಪುರೆ, ಮಲ್ಲಪ್ಪ ಅರಬಾವಿ, ಶಂಕರ ಗಿರಜಾಯಿ, ಮಲ್ಲಿಕಾರ್ಜುನ ಬೀಡ, ಬಸವಣ್ಣಿ ಕವಣಿ, ಮಹಾಂತೇಶ ಚವ್ಹಾಣ, ಶಿವರಾಜ ಮುಗಳಿ, ನಟರಾಜ ಹಿರೇಮಠ, ನಂದಕುಮಾರ ಖಟಾವಿ, ಉಪತಹಸೀಲ್ದಾರ್ ವಿಜಯ ಚೌಗಲಾ, ಡಿ.ಎಸ್.ವಂಟಗುಡೆ, ಎಸ್.ಬಿ.ಮುಲ್ಲಾ, ಪ್ರವೀಣ ಗಂಧ, ಉಮೇಶ ತೋಟದ, ಸೇವಕ ಅನಿಲ ದಲಾಲ ಇದ್ದರು. ಚಂದ್ರಶೇಖರ ಅರಬಾವಿ ಸ್ವಾಗತಿಸಿ, ವಂದಿಸಿದರು.