ಜಿಲ್ಲೆ

ಒಂದೇ ಮತದಿಂದ ಗೆಲುವು

ಬೀದರ್: ತಾಲೂಕಿನ ಸಿರ್ಸಿ (ಎ) ಗ್ರಾಮ ಪಂಚಾಯಿತಿಯಲ್ಲಿ ಒಂದು ಮತದಿಂದ ಅಭ್ಯರ್ಥಿಗೆ ಗೆಲುವು ಸಿಕ್ಕಿದೆ. ಗ್ರಾಮದಲ್ಲಿ ಸಾಮಾನ್ಯ ಕ್ಷೇತ್ರದಿಂದ ಸ್ಪರ್ಧಿಸಿದ್ದ ಸಂತೋಷಕುಮಾರ (ರಾಕೇಶ್) ಮಾಣಿಕಪ್ಪ ಹುಮನಾಬಾದೆ ಒಂದು ಮತದ ಅಂತರದಿಂದ ಗೆದ್ದಿದ್ದಾರೆ. ಸಂತೋಷ 166 ಮತ ಪಡೆದರೆ, ಪ್ರತಿಸ್ಪರ್ಧಿ ರಾಜಶೇಖರ 164 ಮತ ಪಡೆದಿದ್ದರು. ಆದರೆ ಎಸ್ಟಿ ಕ್ಷೇತ್ರದ ಅಭ್ಯರ್ಥಿ ರೇಣುಕಾ ಮಾರುತಿ 165 ಮತ ಪಡೆದಿದ್ದರು. ಹೀಗಾಗಿ ಸಂತೋಷ ಅವರು ರೇಣುಕಾ ವಿರುದ್ಧ ಒಂದು ಮತದ ಗೆಲುವು ಸಾಧಿಸಿದ್ದಾರೆ.