ಜಿಲ್ಲೆ

ಒಂದೇ ದಿನ ಸಾವಿರ ದಾಟಿದ ಸೋಂಕು

ಕಾರವಾರ: ಜಿಲ್ಲೆಯಲ್ಲಿ ಒಂದೇ ದಿನ 1277 ಜನರಿಗೆ ಕರೊನಾ ಸೋಂಕು ಕಾಣಿಸಿಕೊಂಡಿದೆ. ಶನಿವಾರ ರಾತ್ರಿವರೆಗಿನ ಜಿಲ್ಲೆಯ ಹೆಲ್ತ್ ಬುಲೆಟಿನ್​ನಂತೆ ಕಾರವಾರದಲ್ಲಿ 137, ಅಂಕೋಲಾ-74, ಕುಮಟಾ-94, ಹೊನ್ನಾವರ- 238, ಭಟ್ಕಳ-74, ಶಿರಸಿ-177, ಸಿದ್ದಾಪುರ-71, ಯಲ್ಲಾಪುರ-117, ಮುಂಡಗೋಡ-61, ಹಳಿಯಾಳ- ದಾಂಡೇಲಿ 194, ಜೊಯಿಡಾದಲ್ಲಿ 40 ಜನರಿಗೆ ಕರೊನಾ ಇರುವುದು ಖಚಿತವಾಗಿದೆ. ಕಾರವಾರ, ಶಿರಸಿಯಲ್ಲಿ ತಲಾ 2, ಹೊನ್ನಾವರ, ಹಳಿಯಾಳದಲ್ಲಿ ತಲಾ 3, ಅಂಕೋಲಾದಲ್ಲಿ 1, ಭಟ್ಕಳದಲ್ಲಿ 4 ಸೇರಿ ಒಟ್ಟು 15 ಸಾವು ಸಂಭವಿಸಿದೆ.

ಜಿಲ್ಲೆಯಲ್ಲಿ ಒಟ್ಟಾರೆ 5870 ಸಕ್ರಿಯ ಪ್ರಕರಣಗಳಿದ್ದು, ಕಾರವಾರದಲ್ಲಿ 864, ಅಂಕೋಲಾ-489, ಕುಮಟಾ- 448, ಹೊನ್ನಾವರ-456, ಭಟ್ಕಳ-336, ಶಿರಸಿ-682, ಸಿದ್ದಾಪುರ- 541, ಯಲ್ಲಾಪುರ- 473, ಮುಂಡಗೋಡ-367, ಹಳಿಯಾಳ ಮತ್ತು ದಾಂಡೇಲಿ ಸೇರಿ 1001, ಜೊಯಿಡಾದಲ್ಲಿ 213 ಸಕ್ರಿಯ ಪ್ರಕರಣಗಳಿವೆ.

ಜಿಲ್ಲೆಯಲ್ಲಿ 502 ಜನ ವಿವಿಧ ಆಸ್ಪತ್ರೆಗಳಲ್ಲಿದ್ದು, ಕಾರವಾರದಲ್ಲಿ 68, ಅಂಕೋಲಾ-40, ಕುಮಟಾ-69, ಹೊನ್ನಾವರ-38, ಭಟ್ಕಳ- 45, ಶಿರಸಿ- 69, ಸಿದ್ದಾಪುರ- 27, ಯಲ್ಲಾಪುರ-47, ಮುಂಡಗೋಡ-30, ಹಳಿಯಾಳ-ದಾಂಡೇಲಿ ಸೇರಿ 58, ಜೊಯಿಡಾದಲ್ಲಿ 11 ಜನ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

*ಜಿಲ್ಲೆಯಲ್ಲಿ ಇದುವರೆಗೆ ಲಸಿಕೆ ಪಡೆದವರು -2,66,288

*ಜಿಲ್ಲೆಯ ಕೋವಿಡ್ ಕೇರ್ ಸೆಂಟರ್​ನಲ್ಲಿ ಇರುವವರು-6

*ಹೋಂ ಐಸೊಲೇಶನ್​ನಲ್ಲಿರುವ ಸೋಂಕಿತರು-5368

*ಜಿಲ್ಲೆಯಲ್ಲಿ 218 ಸಾಮಾನ್ಯ ಬೆಡ್ , 298 ಆಕ್ಸಿಜನ್ ಇರುವ ಬೆಡ್​ಗಳು ಲಭ್ಯ

*39 ವೆಂಟಿಲೇಟರ್ ಬೆಡ್​ಗಳು, 19 ಎಚ್​ಎಫ್​ಎನ್​ಸಿ, 224 ಎಚ್​ಎಫ್​ಎಸ್​ಸಿ ಇಲ್ಲದ ಬೆಡ್​ಗಳು ಲಭ್ಯ

ರಾಜ್ಯದಲ್ಲಿ ರೆಡ್ ಜೋನ್​ನಲ್ಲಿರುವ ಜಿಲ್ಲೆಗಳಿಗಿಂತ ನಾವು ಒಂದೆರಡು ದಿನ ಹಿಂದಿದ್ದೇವೆ. ಜನ ಪರಿಸ್ಥಿತಿಯ ಗಂಭೀರತೆಯನ್ನು ಅರ್ಥ ಮಾಡಿಕೊಂಡು ಮನೆಯ ಒಳಗೇ ಇದ್ದು, ಕರೊನಾ ಹಬ್ಬುವ ಸರಪಳಿಯನ್ನು ಮುರಿಯಬೇಕಿದೆ.ಮುಲ್ಲೆ್ತ್ರ ಮುಗಿಲನ್ಜಿಲ್ಲಾಧಿಕಾರಿ, ಉತ್ತರ ಕನ್ನಡ

ಆಮ್ಲಜನಿಕ ಸಹಿತ ಆಂಬುಲೆನ್ಸ್ ಉಚಿತ ಸೇವೆ ಆರಂಭಿಸಿದ ಶಾಸಕ

ಭಟ್ಕಳ: ತಾಲೂಕಿನಲ್ಲಿರುವ ಕೋವಿಡ್ ಸೋಂಕಿತರ ಅನುಕೂಲಕ್ಕಾಗಿ ಭಟ್ಕಳ ಶಾಸಕ ಸುನೀಲ ಆಮ್ಲಜನಿಕ ಸಹಿತ ಉಚಿತ ಆಂಬುಲೆನ್ಸ್ ಸೇವೆಯನ್ನು ಪ್ರಾರಂಭಿಸಿದ್ದು, ಭಾನುವಾರ ತಾಲೂಕಾಸ್ಪತ್ರೆಯಲ್ಲಿ ಇದಕ್ಕೆ ಚಾಲನೆ ನೀಡಲಾಯಿತು.

ನಂತರ ಮಾತನಾಡಿದ ಅವರು ತಾಲೂಕಿನಲ್ಲಿ ಹಲವು ಆಂಬುಲೆನ್ಸ್​ಗಳು ಕಾರ್ಯನಿರ್ವಹಿಸುತ್ತಿದೆ. ಆದರೂ ತುರ್ತು ಸಂದರ್ಭದಲ್ಲಿ ಲಭ್ಯವಾಗುವುದಿಲ್ಲ. ಹೀಗಾಗಿ ನಾನು ನನ್ನ ಸ್ವಂತ ವೆಚ್ಚದಲ್ಲಿ ಈ ಆಂಬುಲೆನ್ಸ್ ಸೇವೆ ಪ್ರಾರಂಭಿಸಿದ್ದೇನೆ. ಅಗತ್ಯ ಇದ್ದವರು ಈ 9741623913 ನಂಬರ್​ಗೆ ಕರೆ ಮಾಡಿ ಸಹಾಯ ಪಡೆಯಬಹುದು ಎಂದರು.

ಕೇತ್ರದ ಜನರ ಆಶೀರ್ವಾದದಿಂದ ಗೆದ್ದು ಬಂದ ನಾನು ಜನರ ತುರ್ತು ಅಗತ್ಯಗಳಿಗೆ ಸ್ಪಂದಿಸಲು ದಿನದ 24 ಗಂಟೆಯೂ ಸಿದ್ಧ. ಜನರು ಯಾವುದೇ ಸಮಸ್ಯೆ ಬಂದಲ್ಲಿ ನನ್ನ ಹಾಗೂ ನನ್ನ ಆಪ್ತಸಹಾಯಕರಿಗೆ ಕರೆ ಮಾಡಿ ಸಹಾಯ ಪಡೆದುಕೊಳ್ಳಬಹುದು ಎಂದರು.

ತಾಲೂಕು ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಸವಿತಾ ಕಾಮತ, ಬಿಜೆಪಿ ತಾಲೂಕು ಅಧ್ಯಕ್ಷ ಸುಬ್ರಾಯ ದೇವಾಡಿಗ, ಮಾಜಿ ಅಧ್ಯಕ್ಷ ನ್ಯಾಯವಾದಿ ರಾಜೇಶ ನಾಯ್ಕ, ಪ್ರಮೋದ ಜೋಶಿ, ಶ್ರೀಕಾಂತ ನಾಯ್ಕ, ಯುವ ಮೊರ್ಚ ಅಧ್ಯಕ್ಷ ಮಹೇಂದ್ರ ನಾಯ್ಕ, ನಿಸಾರ್ ಅಹ್ಮದ ಇದ್ದರು.

ಯಲ್ಲಾಪುರದ ಸರ್ಕಾರಿ ಆಸ್ಪತ್ರೆಗೆ ಎಡಿಸಿ ಭೇಟಿ

ಯಲ್ಲಾಪುರ: ಅಪರ ಜಿಲ್ಲಾಧಿಕಾರಿ ಎಚ್.ಕೆ. ಕೃಷ್ಣಮೂರ್ತಿ ಯಲ್ಲಾಪುರದ ಸರ್ಕಾರಿ ಆಸ್ಪತ್ರೆಗೆ ಭಾನುವಾರ ಭೇಟಿ ನೀಡಿದರು. ಕರೊನಾ ನಿಯಂತ್ರಣ ಹಾಗೂ ಸೋಂಕಿತರ ಚಿಕಿತ್ಸೆಗೆ ಕೈಗೊಂಡ ಕ್ರಮಗಳನ್ನು ಪರಿಶೀಲಿಸಿದರು. ಆಕ್ಸಿಜನ್ ಉತ್ಪಾದನಾ ಘಟಕವನ್ನು ಪರಿಶೀಲಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದರು. ತಹಸೀಲ್ದಾರ್ ಶ್ರೀಕೃಷ್ಣ ಕಾಮ್ಕರ್, ಗ್ರೇಡ್ 2 ತಹಸೀಲ್ದಾರ್ ಸಿ.ಜಿ.ನಾಯ್ಕ, ತಾಲೂಕು ಆರೋಗ್ಯಾಧಿಕಾರಿ ಡಾ.ನರೇಂದ್ರ ಪವಾರ್, ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಟಿ.ಭಟ್ಟ ಇತರರಿದ್ದರು.

ಮದ್ಯದಂಗಡಿ ಎದುರು ಸರದಿ

ಮೇ 10 ರಿಂದ ಸಂಪೂರ್ಣ ಲಾಕ್​ಡೌನ್ ಜಾರಿ ಹಿನ್ನೆಲೆಯಲ್ಲಿ ಭಾನುವಾರ ಜನ ಅಗತ್ಯ ವಸ್ತುಗಳನ್ನು ಮುಗಿಬಿದ್ದು ಖರೀದಿಸಿದರು. ದಿನಸಿ, ತರಕಾರಿ ಅಂಗಡಿಗಳು, ಪೆಟ್ರೋಲ್ ಬಂಕ್​ಗಳಲ್ಲಿ ಸರದಿಯಲ್ಲಿ ಜನ ನಿಂತಿದ್ದರು. ಮುಖ್ಯವಾಗಿ ಎಂಎಸ್​ಐಎಲ್ ಮದ್ಯದ ಅಂಗಡಿಯ ಎದುರೂ ಭಾನುವಾರ ಸರತಿ ಸಾಲು ಸೇರಿತ್ತು.