ಕಲಬುರಗಿ: ಜಿಲ್ಲೆಯಲ್ಲಿ ಈಗಾಗಲೇ ಮೂವರನ್ನು ಬಲಿ ಪಡೆದಿರುವ ಚೀನಿ ವೈರಸ್ ದಿನೇದಿನೆ ತನ್ನ ಕಬಂದಬಾಹು ವ್ಯಾಪಿಸುತ್ತಿದ್ದು, ಸೋಮವಾರ ಮತ್ತೆ ಐವರಿಗೆ ಸೋಂಕು ದೃಢಪಟ್ಟಿರುವುದು ಜನರಲ್ಲಿ ಜೀವಭಯ ಸೃಷ್ಟಿಸಿದೆ.
ಹೊಸ ಪ್ರಕರಣಗಳಲ್ಲಿ ನಾಲ್ವರು ನಿಜಾಮುದ್ದೀನ್ ತಬ್ಲಿಘಿ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡವರ ಸಂಪರ್ಕಕ್ಕೆ ಬಂದಿದ್ದವರ ಜತೆ ಸಂಪರ್ಕ ಸಾಧಿಸಿದವರಾಗಿದ್ದಾರೆ. ಹೀಗಾಗಿ ತಬ್ಲಿಘಿ ಕರಾಳತೆ ಜಿಲ್ಲೆಯಲ್ಲಿ ತನ್ನ ಕೈಗಳನ್ನು ಚಾಚುತ್ತಲೇ ನಡೆದಿದೆ.
ಕಳೆದ ಶುಕ್ರವಾರ ಮತ್ತು ಭಾನುವಾರ ಒಂದೇ ಒಂದು ಪಾಸಿಟಿವ್ ಕೇಸ್ ವರದಿಯಾಗದೆ ಜನರಲ್ಲಿ ನೆಮ್ಮದಿಯ ಭಾವ ಮೂಡಿತ್ತು. ಆದರೆ ಸೋಮವಾರ ದಿಢೀರ್ 5 ಪಾಸಿಟಿವ್ ಬಂದಿರುವುದು ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆ ತಲೆನೋವು ಹೆಚ್ಚಿಸಿದೆ.
ಶನಿವಾರ ಎರಡು ಹೊಸ ಕೇಸ್ ಪತ್ತೆಯಾಗಿದ್ದವು. ಇಂದಿನ ಪ್ರಕರಣಗಳಲ್ಲಿ 13 ವರ್ಷದ ಬಾಲಕ ಮತ್ತು 17, 19 ವರ್ಷದ ಯುವಕರು, 30 ವರ್ಷದ ಮಹಿಳೆ ಮತ್ತು 50 ವರ್ಷದ ವ್ಯಕ್ತಿ ಸೇರಿದ್ದಾರೆ.
ಕರೊನಾದಿಂದ ಮೃತಪಟ್ಟ ಬಟ್ಟೆ ವ್ಯಾಪಾರಿ (ಪಿ205) ಜತೆ ನೇರ ಸಂಪರ್ಕಕ್ಕೆ ಖಾದ್ರಿ ಚೌಕ್ನ ಬಂದಿರುವ 13 ವರ್ಷದ ಬಾಲಕ (ಪಿ392), ಮೋಮಿನಪುರದ 30 ವರ್ಷದ ಮಹಿಳೆ (ಪಿ393) ಮತ್ತು 19 ವರ್ಷದ ಯುವಕ (ಪಿ395) ಹಾಗೂ ಮೃತ ಹಣ್ಣಿನ ವ್ಯಾಪಾರಿ (ಪಿ177) ಜತೆ ಸಂಪರ್ಕ ಹೊಂದಿರುವ 50 ವರ್ಷದ ಪುರುಷ, ಹಾಗೂ ಮಹಿಳೆಯ (ಪಿ 175) ನೇರ ಸಂಪರ್ಕಕ್ಕೆ ಬಂದ (ಪಿ 391) ಖಮರ್ ಕಾಲೊನಿಯ 17 ವರ್ಷದ ಯುವಕನನ್ನು ಇಎಸ್ಐ ಐಸೊಲೇಷನ್ ವಾರ್ಡ್ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಮೃತಪಟ್ಟ ಇಬ್ಬರು ನಿಜಾಮುದ್ದೀನ್ ತಬ್ಲಿಘಿ ಸಭೆಗೆ ಹೋಗಿ ಬಂದವರ ಸಂಪರ್ಕ ಹೊಂದಿದ್ದರು. ಈಗ ನಾಲ್ವರು ಸೋಂಕಿತರು ತಬ್ಲಿಘಿಗಳ ಜತೆ ಸಂಪರ್ಕ ಹೊಂದಿದ್ದವರ ಜತೆ ನೇರ ಸಂಪರ್ಕಕ್ಕೆ ಬಂದವರಾಗಿರುವುದು ಜಿಲ್ಲೆಯನ್ನು ಮತ್ತಷ್ಟು ತಲ್ಲಣಗೊಳಿಸಿದೆ.
ಇಂದಿನ ಐದು ಸೇರಿ ಸೋಂಕಿತರ ಸಂಖ್ಯೆ 27ಕ್ಕೇರಿದೆ. ಈ ಪೈಕಿ ಮೂವರು ಅಸುನೀಗಿದರೆ, ಮೂವರು ಗುಣಮುಖರಾಗಿ ಮನೆ ಸೇರಿದ್ದಾರೆ. ಉಳಿದ 21 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.
912 ರಿಪೋರ್ಟ ನೆಗೆಟಿವ್
ಜಿಲ್ಲೆಯಲ್ಲಿ ಈವರೆಗೆ 1922 ಶಂಕಿತರ ರಕ್ತ, ಗಂಟಲು ದ್ರವ ಟೆಸ್ಟ್ಗೆ ಕಳುಹಿಸಿದ್ದು, 27 ಪಾಸಿಟಿವ್, 912 ಜನರ ನೆಗೆಟಿವ್ ರಿಪೋರ್ಟ್ ಬಂದಿದೆ ಎಂದು ಜಿಲ್ಲಾಧಿಕಾರಿ ಶರತ್ ಬಿ. ತಿಳಿಸಿದ್ದಾರೆ. ತಾಂತ್ರಿಕ ಕಾರಣಗಳಿಂದ ಇಬ್ಬರ ಲ್ಯಾಬ್ ಟೆಸ್ಟ್ ಆಗಿಲ್ಲ. 981 ಜನರ ವರದಿಗೆ ಕಾಯಲಾಗುತ್ತಿದೆ. 15 ಕಂಟೇನ್ಮೆಂಟ್ ಜೋನ್ ಗುರುತಿಸಿದ್ದು, 34699 ಮನೆಗಳ ಸಮೀಕ್ಷೆ ಕೈಗೊಳ್ಳಲಾಗಿದೆ. ಪ್ರೈಮರಿ 416, ಸೆಕೆಂಡರಿ ಕಾಂಟ್ಯಾಕ್ಟ್ಸ್ 1633, ವಿದೇಶದಿಂದ ಬಂದ 488 ಜನರನ್ನು ಗುರುತಿಸಲಾಗಿದೆ. ಹೋಂ ಕ್ವಾರಂಟೈನ್ನಲ್ಲಿ 1245 ಜನರಿದ್ದು, 28 ದಿನ ಮುಗಿಸಿದ 967 ಮತ್ತು 14 ದಿನ ಪೂರ್ಣಗೊಳಿಸಿದ 86 ಜನರನ್ನು ಮುಕ್ತಗೊಳಿಸಲಾಗಿದೆ. 193 ಜನರನ್ನು ಇಎಸ್ಐಸಿ ಐಸೋಲೇಷನ್ ವಾಡರ್್ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.