ಕಲಬುರಗಿ: ಜಿಲ್ಲೆಯಲ್ಲಿ ಚೀನಿ ವೈರಸ್ ಕಬಂದಬಾಹು ಮತ್ತಷ್ಟು ವಿಸ್ತರಿಸಿದೆ. ಸೋಮವಾರ ಕರೊನಾಕ್ಕೆ ಒಂದು ಸಾವು ಸಂಭವಿಸಿದ್ದಲ್ಲದೆ ಮತ್ತೆ ಆರು ಜನರಿಗೆ ಸೋಂಕು ದೃಢಪಟ್ಟಿರುವುದು ಜನರಲ್ಲಿ ಆತಂಕ ಇಮ್ಮಡಿಗೊಳಿಸಿದೆ. ಬೆಳಗ್ಗೆ ಮತ್ತು ಸಂಜೆ ಬಿತ್ತರವಾದ ಬುಲೆಟಿನ್ಗಳಲ್ಲಿ ಈ ಸುದ್ದಿ ಇರಲಿಲ್ಲ. ನಂತರ ಜಿಲ್ಲಾಧಿಕಾರಿ ಶರತ್ ಬಿ. ಹೊಸ ಆರು ಪ್ರಕರಣಗಳನ್ನು ದೃಢಪಡಿಸಿದ್ದಾರೆ.
ಇಂದಿನ ಪ್ರಕರಣ ಸೇರಿ ಜಿಲ್ಲೆಯಲ್ಲಿ ಕರೊನಾ ಪಾಸಿಟಿವ್ ಕೇಸ್ಗಳ ಸಂಖ್ಯೆ 44ಕ್ಕೇರಿದೆ. ಈ ಪೈಕಿ ಐವರು ಸಾವನ್ನಪ್ಪಿದ್ದು, ಏಳು ಜನ ಗುಣಮುಖರಾಗಿ ಮನೆಗಳಿಗೆ ಹೋಗಿದ್ದಾರೆ. ಹೀಗಾಗಿ 32 ಪ್ರಕರಣ ಸಕ್ರಿಯವಾಗಿವೆ.
ಜಿಲ್ಲೆಯಲ್ಲಿ ಶುಕ್ರವಾರ, ಶನಿವಾರ ಒಂದೇ ಒಂದು ಪಾಸಿಟಿವ್ ಕೇಸ್ ವರದಿಯಾಗಿರಲಿಲ್ಲ. ಆದರೆ ಸೋಮವಾರ ದಿಢೀರ್ ಆರು ಪ್ರಕರಣ ದೃಢಪಟ್ಟಿರುವುದು ಜನರಲ್ಲಿ ಭಯ ಹೆಚ್ಚಳಕ್ಕೆ ಕಾರಣವಾಗಿದೆ. 45, 22, 28, 40 ವರ್ಷದ ಮಹಿಳೆಯರು ಹಾಗೂ 43, 55 ವರ್ಷದ ಪುರುಷರು ಸೋಂಕಿತರಾಗಿರುವುದು ಖಚಿತವಾಗಿದೆ. ಇಂದಿನ ಎಲ್ಲ ಆರು ಪ್ರಕರಣಗಳು ಪಿ395 ಜತೆ ಸಂಪರ್ಕ ಹೊಂದಿರುವುದು ದೃಢಪಟ್ಟಿದೆ.
2467 ಜನರ ರಿಪೋರ್ಟ ನೆಗೆಟಿವ್
ಕರೊನಾ ಮತ್ತಿತರ ರೋಗಗಳಿಂದ ಬಳಲುತ್ತಿದ್ದ ಆಳಂದದ 57 ವರ್ಷದ ವ್ಯಕ್ತಿ (ಪಿ422) ಸೋಮವಾರ ಮೃತಪಟ್ಟಿದ್ದಾರೆ. ಈ ಮಧ್ಯೆ ಪರೀಕ್ಷಾ ವರದಿಗಳು ಹೆಚ್ಚಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. 1156 ಜನರ ಪರೀಕ್ಷಾ ವರದಿಗೆ ಕಾಯಲಾಗುತ್ತಿದೆ. ಜಿಲ್ಲೆಯಲ್ಲಿ ಈವರೆಗೆ 3667 ಶಂಕಿತರ ರಕ್ತ, ಗಂಟಲು ದ್ರವ ಟೆಸ್ಟ್ಗೆ ಕಳುಹಿಸಲಾಗಿದ್ದು, ಇವರಲ್ಲಿ 2467 ಜನರ ನೆಗೆಟಿವ್ ರಿಪೋಟರ್್ ಬಂದಿದೆ. ಜಿಲ್ಲೆಯ 20 ಕಂಟೈನ್ಮೆಂಟ್ ಜೋನ್ಗಳಲ್ಲಿ 42,560 ಮನೆಗಳ ಸಮೀಕ್ಷೆ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಶರತ್ ಬಿ. ತಿಳಿಸಿದ್ದಾರೆ.ಪ್ರೈಮರಿ ಕಾಂಟ್ಯಾಕ್ಟ್ಸ್ 688, ಸೆಕೆಂಡರಿ ಕಾಂಟ್ಯಾಕ್ಟ್ಸ್ 2504, ವಿದೇಶದಿಂದ ಬಂದ 488 ಜನರನ್ನು ಗುರುತಿಸಲಾಗಿದೆ. ಹೋಂ ಕ್ವಾರಂಟೈನ್ನಲ್ಲಿ 1455 ಜನರನ್ನು ಇರಿಸಲಾಗಿದೆ. ಈವರೆಗೆ ಹೋಂ ಕ್ವಾರಂಟೈನ್ನಲ್ಲಿ 28 ದಿನ ಮುಗಿಸಿದ 981 ಹಾಗೂ 14 ದಿನದ ಅವಧಿ ಪೂರ್ಣಗೊಳಿಸಿದ 992 ಜನರನ್ನು ಮುಕ್ತಗೊಳಿಸಲಾಗಿದೆ. 224 ಜನರನ್ನು ಇಎಸ್ಐಸಿ ಐಸೋಲೇಷನ್ ವಾಡರ್್ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.