ಜಿಲ್ಲೆ

ಒಂದು ವಾರ ನೀರು ಪೂರೈಕೆ ವ್ಯತ್ಯಯ

ಗದಗ: ಮುಂಡರಗಿ ತಾಲೂಕಿನ ಹಮ್ಮಿಗಿ ಬ್ಯಾರೇಜ್‌ನಿಂದ ಅವಳಿನಗರಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ವಿದ್ಯುತ್ ಸ್ಥಾವರಗಳು ದುರಸ್ತಿಗೆ ಬಂದಿದ್ದರಿಂದ ನೀರು ಪೂರೈಕೆಯಲ್ಲಿ ವಿಳಂಬವಾಗಿದೆ. ಡಂಬಳ ಪಂಪ್‌ಹೌಸ್‌ನಲ್ಲಿ ದುರಸ್ತಿ ಕಾರ್ಯ ಪೂರ್ಣವಾಗಿದ್ದರೂ ಪಾಪನಾಶಿ ಶುದ್ಧೀಕರಣ ಘಟಕದಲ್ಲಿನ ಮೋಟಾರ್‌ಗಳು ದುರಸ್ತಿ ಆಗಬೇಕಿದೆ. ಹೀಗಾಗಿ ನೀರು ಪೂರೈಕೆಯಲ್ಲಿ ಒಂದು ವಾರ ವ್ಯತ್ಯಯ ಉಂಟಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.