ಚಿತ್ರದುರ್ಗ: ಒಂದು ವರ್ಷದೊಳಗೆ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಪೂರ್ಣಗೊಳಿಸಲು ಪ್ರಾಮಾಣಿಕವಾಗಿ ಯತ್ನಿಸಲಾಗುವುದು ಎಂ ದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಹೇಳಿದರು. ಜಿಲ್ಲೆ,ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ವಿವಿಧೆಡೆ ಯೋಜನೆ ಕಾಮಗಾರಿ ಪ್ರಗತಿ ಶನಿವಾರ ಪರಿಶೀಲಿಸಿ ಸುದ್ದಿಗಾರ ಜತೆ ಮಾತನಾಡಿದ ಅವರು,ಯೋಜನೆ ಪ್ಯಾಕೇಜ್-1ರಲ್ಲಿ ತುಂಗಾ ನಂದಿಯಿಂದ 17.40 ಟಿಎಂಸಿ ನೀರನ್ನು ಲಿಫ್ಟ್ ಮಾಡಿ ಭದ್ರಾ ಜಲಾಶಯಕ್ಕೆ ಹರಿಸುವ ಕಾಮಗಾರಿಗೆ ಇನ್ನಷ್ಟು ವೇಗ ಸಿಗಬೇಕಿದೆ.
ಇದಕ್ಕಾಗಿ ನಮ್ಮ ಜಿಲ್ಲೆ ಯ ಎಲ್ಲ ಶಾಸಕರು ಹಾಗೂ ಪಕ್ಷದ ಪ್ರಮುಖರೊಂದಿಗೆ ಪರಿಶೀಲಿಸಲಾಗಿದ್ದು,ಕಾಮಗಾರಿಯ ತ್ವರಿತ ಅನುಷ್ಠಾನಕ್ಕಾಗಿ ಸಿಎಂ ಸಿದ್ದರಾ ಮಯ್ಯ,ಡಿಸಿಎಂ ಡಿ.ಕೆ.ಶಿವಕುಮಾರ್ ಅವರೊಂದಿಗೆ ಚರ್ಚಿಸುವುದಾಗಿ ಹೇಳಿದರು.
ಕಳೆದ ಐದು ವರ್ಷಗಳಲ್ಲಿ ನಿರೀಕ್ಷಿತ ಮಟ್ಟದಲ್ಲಿ ಕಾಮಗಾರಿ ನಡೆದಿಲ್ಲ. ಕುಂಠಿತವಾಗಿರುವ ಕಾಮಗಾರಿ ಚುರುಕುಗೊಳಿಸಿ,ಜನರಿಗೆ ನೀರು ಕೊಡ ಬೇಕಿದೆ. 12 ಟವರ್‌ಗಳ ನಿರ್ಮಾಣಕ್ಕೆ ಕೇಂದ್ರ ಅರಣ್ಯ,ಪರಿಸರ ಇಲಾಖೆ ಅನುಮತಿ ದೊರೆಯಬೇಕಿದೆ. ಕಾಮಗಾರಿ ಚುರುಕಾದರೆ ಯೋಜನಾ ವೆಚ್ಚವನ್ನು ನಿಯಂತ್ರಿಸಬಹುದು.
ಶಾಸಕರು,ರೈತರೊಂದಿಗೆ ಚರ್ಚಿಸಿ ಭೂಸ್ವಾಧೀನ ಸೇರಿದಂತೆ ನಾನಾ ಸಮಸ್ಯೆಗಳ ಪರಿಹಾರಗಳನ್ನು ಕಂಡುಕೊಳ್ಳ ಬೇಕಿದೆ. ಕೇಂದ್ರ ಯೋಜನೆಗೆ ಘೋಷಿಸಿರುವ 5300 ಕೋಟಿ ರೂ.ಅನುದಾನ ಈವರೆಗೆ ಬಂದಿಲ್ಲ,ರಾಷ್ಟ್ರೀಯ ಯೋಜನೆ ಎಂದು ಕೂಡ ಘೋಷಿಸಿಲ್ಲವೆಂದು ಕೇಂದ್ರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಅಬ್ಬಿನಹೊಳಲಿನ 33 ರೈತರ ಪೈಕಿ 26 ಮಂದಿ ಭೂ ಸ್ವಾಧೀನದ ಹೆಚ್ಚಿನ ಪರಿಹಾರಕ್ಕಾಗಿ ನ್ಯಾಯಾಲಯದ ಮೊರೆ ಹೋಗಿರುವುದು ಅಜ್ಜಂಪುರ ಬಳಿ ವೈಜಂಕ್ಷನ್ ಕಾಮಗಾರಿಗೆ ಅಡ್ಡಿಯಾಗಿದೆ. ಸಮಸ್ಯೆ ಬಗೆಹರಿಸಲು ಸಹಕರಿಸುವಂತೆ ತರೀಕೆರೆ ಶಾಸಕ ಶ್ರೀನಿವಾಸ ಅವರಿಗೆ ಮನವಿ ಮಾಡಿದ್ದೇವೆ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ತರೀಕೆರೆ ಶಾಸಕ ಶ್ರೀನಿವಾಸ್ ಸಮಸ್ಯೆ ಇತ್ಯರ್ಥಪಡಿಸಲು ಪ್ರಯತ್ನಿಸುವುದಾಗಿ ಹೇಳಿದರು. ಶಾಸಕ ಟಿ.ರಘು ಮೂರ್ತಿ ಮಾತನಾಡಿ,ಅರಣ್ಯಇಲಾಖೆ ಅನುಮತಿ ದೊರೆತಿಲ್ಲವೆಂಬ ನೆಪದಲ್ಲಿ ಇತರೆ ಕಾಮಗಾರಿಗಳು ಸ್ಥಗಿತವಾಗಬಾರದೆಂದು ಅಧಿಕಾರಿ ಗಳನ್ನು ಎಚ್ಚರಿಸಿದರು. ಮೊಳಕಾಲ್ಮೂರು ಶಾಸಕ ಎನ್.ವೈ.ಗೋಪಾಲಕೃಷ್ಣ ಮಾತನಾಡಿ ಕೇಂದ್ರ ಅರಣ್ಯ ಇಲಾಖೆ ಅನುಮತಿಗೆ ಅಗತ್ಯ ವಿರುವ ವರದಿ ಸಿದ್ಧ ಪಡಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.
ಪ್ರಭಾರ ಮುಖ್ಯಇಂಜಿನಿಯರ್ ಕೆ.ಎಂ.ಶಿವಪ್ರಕಾಶ್,ತುಂಗಾ ನದಿಯಿಂದ ಭದ್ರಾ ಜಲಾಶಯಕ್ಕೆ 17.40 ಟಿಎಂಸಿ ನೀರನ್ನು ಲಿಫ್ಟ್ ಮಾಡಿ ಹರಿಸುವ 324 ಕೋಟಿ ರೂ.ವೆಚ್ಚದ ಕಾಮಗಾರಿಯ ವಿವರ ನೀಡಿದರು. ಭದ್ರಾ ಜಲಾಯಶದಿಂದ 29.90 ಟಿಎಂಸಿ ನೀರನ್ನು ಅಜ್ಜಂಪುರ ಹತ್ತಿರ ವಿತರಣಾ ತೊಟ್ಟಿಗೆ ಹರಿಸುವ 1015 ಕೋಟಿ ರೂ.ವೆಚ್ಚದ ಕಾಮಗಾರಿ ಪೂರ್ಣಗೊಂಡಿದೆ. ವಾಣಿ ವಿಲಾಸ ಸಾಗರ ಜಲಾಶಯಕ್ಕೆ 2020-21ರಲ್ಲಿ 6.61 ಟಿಎಂಸಿ ನೀರು ಹಾಗೂ 2021-22ರಲ್ಲಿ 6.82 ಟಿಎಂಸಿ ನೀರು ಹರಿಸಲಾಗಿದೆ ಎಂದರು.
ಸಚಿವರು,ಶಾಸಕರು ಶಿವಮೊಗ್ಗ ಜಿಲ್ಲೆ ಮುತ್ತಿನಕೊಪ್ಪದ ತುಂಗಾ ಇಂಟೇಕ್ ಕಾಲುವೆ,ಪಂಪ್‌ಹೌಸ್,ಸಬ್‌ಸ್ಟೇಷನ್,ಟನೆಲ್ ಕಾಮಗಾರಿ ಸ್ಥಳಗಳಿಗೆ ಭೇಟಿ ನೀಡಿದರು. ಶಾಸಕರಾದ ಕೆ.ಸಿ.ವೀರೇಂದ್ರ ಪಪ್ಪಿ,ಬಿ.ಜಿ.ಗೋವಿಂದಪ್ಪ,ಮಾಜಿ ಸಂಸದ ಬಿ.ಎನ್.ಚಂದ್ರಪ್ಪ,ಮಾಜಿ ಸಚಿವ ಎಚ್.ಆಂಜನೇ ಯ,ನಿವೃತ್ತ ಮುಖ್ಯಇಂಜಿನಿಯರ್ ಚೆಲುವರಾಜ್,ಎಸ್‌ಇ ಎಫ್.ಎಚ್.ಲಮಾಣಿ,ಇಇಗಳಾದ ಹರೀಶ್,ಬಿ.ಮಧುಕುಮಾರ್ ಮತ್ತಿತರರು ಇದ್ದರು.