ಜಿಲ್ಲೆ

ಒಂದಿಂಚು ಭೂಮಿಯನ್ನೂ ಮಹಾರಾಷ್ಟ್ರಕ್ಕೆ ಕೊಡಲ್ಲ: ಉದ್ಧವ್ ಠಾಕ್ರೆಗೆ ಸಚಿವ ಕೆ.ಎಸ್.ಈಶ್ವರಪ್ಪ ತಿರುಗೇಟು

ಶಿವಮೊಗ್ಗ: ಕರ್ನಾಟಕದ ಒಂದಿಂಚು ಭೂಮಿಯನ್ನೂ ಮಹಾರಾಷ್ಟ್ರಕ್ಕೆ ಹೋಗಲು ಬಿಡುವುದಿಲ್ಲ. ಅದೇ ರೀತಿ ಮಹಾರಾಷ್ಟ್ರದ ಭೂಮಿಯನ್ನು ನಾವು ಪಡೆಯಲ್ಲ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ಕರ್ನಾಟಕ ಆಕ್ರಮಿತ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರ್ಪಡೆಗೊಳಿಸಿಕೊಳ್ಳುವ ಕುರಿತು ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಮಹಾರಾಷ್ಟ್ರ ಭೂಮಿ-ನೀರು ವಿಚಾರದಲ್ಲಿ ಆಗಾಗ ವಿವಾದ ತೆಗೆಯುತ್ತಿದೆ. ಕ್ಯಾತೆ ತೆಗೆದರೆ ಮರಾಠಿಗರು ಬೆಂಬಲಿಸುತ್ತಾರೆಂದು ಅಲ್ಲಿನ ಕೆಲ ವ್ಯಕ್ತಿಗಳು ಹಾಗೂ ಪಕ್ಷಗಳು ಭ್ರಮೆಯಲ್ಲಿವೆ ಎಂದರು.
ಕರ್ನಾಟಕದವರು ಮಹಾರಾಷ್ಟ್ರದ ಹಲವು ಭಾಗದಲ್ಲಿದ್ದಾರೆ. ಮಹಾರಾಷ್ಟ್ರದವರೂ ಕರ್ನಾಟಕದಲ್ಲಿ ವಾಸವಿದ್ದಾರೆ. ಹಾಗಂತ ಕನ್ನಡಿಗರಿರುವ ಪ್ರದೇಶವನ್ನು ಕರ್ನಾಟಕ ಹಾಗೂ ಮರಾಠಿಗರಿರುವ ಜಾಗವನ್ನು ಮಹಾರಾಷ್ಟ್ರ ಎನ್ನಲು ಸಾಧ್ಯವೇ? ಕರ್ನಾಟಕ-ಮಹಾರಾಷ್ಟ್ರ, ಕರ್ನಾಟಕ-ತಮಿಳುನಾಡು, ಕರ್ನಾಟಕ-ಕೇರಳ, ಕರ್ನಾಟಕ-ಆಂಧ್ರದವರೆಲ್ಲ ಅಣ್ಣ ತಮ್ಮಂದಿರಂತೆ ಇದ್ದೇವೆ. ಮುಂದೆಯೂ ಇರಬೇಕಾಗುತ್ತದೆ ಎಂದು ಸ್ಪಷ್ಟಪಡಿಸಿದರು.