ಒಂದಾದ ಕತ್ತಿ-ಪಾಟೀಲ ಕುಟುಂಬ
ವಿಜಯವಾಣಿ ಸುದ್ದಿಜಾಲ
ಸಂಕೇಶ್ವರ : ಮೊದಲ ಶ್ರಾವಣ ಸೋಮವಾರ ನಿಮಿತ್ತ ಪಟ್ಟಣದ ಶಂಕರಲಿಂಗ ದೇವಸ್ಥಾನಕ್ಕೆ ಮಾಜಿ ಸಚಿವ ಎ.ಬಿ.ಪಾಟೀಲ ಹಾಗೂ ಮಾಜಿ ಸಂಸದ ರಮೇಶ ಕತ್ತಿ ಭೇಟಿ ನೀಡಿ ದರ್ಶನ ಪಡೆದರು.
ಬಹುವರ್ಷಗಳಿಂದ ರಾಜಕೀಯ ಕಾರಣಗಳಿಗಾಗಿ ಮುನಿಸಿಕೊಂಡಿದ್ದ ಎರಡು ಕುಟುಂಬಗಳ ಮುಖಂಡರನ್ನು ಒಂದೆಡೆ ಕಂಡು ಅಭಿಮಾನಿಗಳು ಹರ್ಷ ವ್ಯಕ್ತಪಡಿಸಿದರು.
ಮಾಜಿ ಸಚಿವ ಎ.ಬಿ.ಪಾಟೀಲ ಮಾತನಾಡಿ ತಾಲೂಕಿನ ಸಹಕಾರ ರಂಗ ಬೆಳವಣಿಗೆ ಹಿತದೃಷ್ಟಿಯಿಂದ ಎರಡು ಕುಟುಂಬಗಳು ಒಂದಾಗಿದ್ದು, ಇದು ತಾಲೂಕಿನ ಬಹು ಜನರ ಅಪೇಕ್ಷೆಯಾಗಿದೆ ಎಂದರು.
ಮಾಜಿ ಸಂಸದ ರಮೇಶ ಕತ್ತಿ ಮಾತನಾಡಿ, ತಾಲೂಕಿನ ಸಹಕಾರ ರಂಗಗಳ ಪ್ರಗತಿಯ ಹಿತದೃಷ್ಟಿಯಿಂದ ಹಿರಿಯರ ಮಾರ್ಗದರ್ಶನದಲ್ಲಿ ಎಲ್ಲರೂ ಒಂದಾಗುವ ಮೂಲಕ ಸಹಕಾರ ರಂಗ ಉಳಿಸಿ, ಬೆಳೆಸುವ ಕಾರ್ಯ ಮಾಡುತ್ತೇವೆ ಎಂದರು.
ಶಾಸಕ ನಿಖಿಲ್ ಕತ್ತಿ, ಯುವ ಧುರೀಣರಾದ ಪವನ ಕತ್ತಿ, ಪೃಥ್ವಿ ಕತ್ತಿ, ವಿನಯ ಪಾಟೀಲ, ಗಜಾನನ ಕ್ವಳ್ಳಿ, ಶಿವಾನಂದ ಮುಡಸಿ, ಅಶೋಕ ತೋಡಕರ, ಕೆ.ಸಿ.ಶಿರಕೋಳಿ ಸೇರಿದಂತೆ ಇತರರಿದ್ದರು.