ಜಿಲ್ಲೆ

ಒಂಟಿ ಮನೆಗೆ ಕನ್ನ ಹಾಕುತ್ತಿದ್ದವನ ಬಂಧನ

ತಿಪಟೂರು: ಬೀಗ ಹಾಕಿರುವ ಒಂಟಿ ಮನೆ, ತೋಟದ ಮನೆಗಳನ್ನು ಗುರುತಿಸಿ ಕನ್ನ ಹಾಕಿ ಚಿನ್ನಾಭರಣ, ನಗದು ಕಳ್ಳತನ ಮಾಡುತ್ತಿದ್ದವನನ್ನು ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿ, 127 ಗ್ರಾಂ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ. ಹಾಸನ ಜಿಲ್ಲೆ ಆಲೂರು ತಾಲೂಕು ಮುದಿಗೆರೆಯ ಸಂತೋಷ್​ (38) ಬಂಧಿತ. ಈತನ ವಿರುದ್ಧ ದಾವಣಗೆರೆ, ಚಿಕ್ಕಮಗಳೂರು, ಕೋಲಾರ, ಹಾಸನ ಬೆಂಗಳೂರು ಗ್ರಾಮಾಂತರ ಠಾಣೆಗಳಲ್ಲಿ ಮನೆ ಕಳವು ಪ್ರಕರಣ ದಾಖಲಾಗಿವೆ. ಈತನ ಬಂಧನದಿಂದ ಗ್ರಾಮಾಂತರ ಠಾಣೆಯಲ್ಲಿ ದಾಖಲಾಗಿದ್ದ ಎರಡು ಕಳ್ಳತನ ಪ್ರಕರಣಗಳು ಪತ್ತೆಯಾಗಿವೆ. ಆರೋಪಿ ಬೈಕಿನಲ್ಲಿ ಸುತ್ತಾಡಿ ಒಂಟಿ ಹಾಗೂ ತೋಟದ ಮನೆಗಳನ್ನು ಗುರುತಿಸಿಕಳ್ಳತನ ಮಾಡುತ್ತಿದ್ದ ಎನ್ನಲಾಗಿದೆ. ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಕೆ.ವಿ.ಅಶೋಕ್​ ಮಾರ್ಗದರ್ಶನದಲ್ಲಿ ಡಿವೈಎಸ್​ಪಿ ವಿನಾಯಕ ಶಟಗೇರಿ ನೇತೃತ್ವದಲ್ಲಿ ಗ್ರಾಮಾಂತರ ಠಾಣೆಯ ಇನ್​ಸ್ಪೆಕ್ಟರ್​ ಕೆ.ರವಿ, ಎಸ್​ಐ ಐ.ಡಿ.ನಾಗರಾಜು, ಸಿಬ್ಬಂದಿ ಹನುಮಂತಕಮಕೇರಿ, ಎನ್​.ಜಿ.ಶರತ್​, ಜಿ.ಇ.ಚೇತನ್​ಕುಮಾರ್​, ಕೆ.ಆರ್​.ಇಮ್ರಾನ್​, ಚಾಲಕ ಜೀವನ್​ ಮತ್ತು ಮಲ್ಲಿಕಾರ್ಜುನ್​ ಕಾರ್ಯಾಚರಣೆಯಲ್ಲಿ ತೊಡಗಿದ್ದರು.