ಜಿಲ್ಲೆ

ಐಷಾರಾಮಿ ಜೀವನಕ್ಕೆ ಹಫ್ತಾ ವಸೂಲಿ, ಶಿಡ್ಲಘಟ್ಟದಲ್ಲಿ ಯುವಕರಿಬ್ಬರು ಖಾಕಿ ಅತಿಥಿ, ಹಣ ಕೊಡುವ ನಾಟಕವಾಡಿ ಬಂಧನ

ಚಿಕ್ಕಬಳ್ಳಾಪುರ: ಐಷಾರಾಮಿ ಜೀವನ ನಡೆಸಬೇಕೆಂಬ ಹಪಾಹಪಿಗೆ ಬಿದ್ದ ಯುವಕರಿಬ್ಬರು ಸಿನಿವಾ ಶೈಲಿಯಲ್ಲಿ ವ್ಯಾಪಾರಿಯೊಬ್ಬರ ಬಳಿ ಹಫ್ತಾ ವಸೂಲಿಗೆ ಮುಂದಾಗಿ ಪೊಲೀಸರ ಅತಿಥಿಯಾಗಿದ್ದಾರೆ.

ಚಿಂತಾಮಣಿ ತಾಲೂಕಿನ ಕದಿರೀಪುರದ ಚಂದ್ರು(25) ಮತ್ತು ಬಾಬು(23) ಬಂಧಿತರು. ಮದುವೆ ಮತ್ತಿತರ ಶುಭ ಸವಾರಂಭಗಳಲ್ಲಿ ಅಡುಗೆ ಕೆಲಸ ವಾಡಿ ಜೀವನ ನಡೆಸುತ್ತಿದ್ದ ಇವರು, ಸ್ಥಿತಿವಂತರನ್ನೇ ಗುರಿಯಾಗಿಸಿಕೊಂಡು ವಸೂಲಿಗೆ ಇಳಿಯುತ್ತಿದ್ದರು. ಕಳವು ವಾಡಿದ ಮೊಬೈಲ್‌ಗಳನ್ನೇ ಕೃತ್ಯಕ್ಕೆ ಬಳಸುತ್ತಿದ್ದರು ಎನ್ನಲಾಗಿದೆ.

ಹಿನ್ನಲೆ: ಎಚ್.ಕ್ರಾಸ್‌ನಲ್ಲಿ ಹಾರ್ಡ್‌ವೇರ್ ವ್ಯಾಪಾರಿಯಾಗಿರುವ ಯಣ್ಣೂರು ಗ್ರಾಮದ ದಿಲೀಪ್ ಡಿ.3ರಂದು ರಾತ್ರಿ ಕಾರಿನಲ್ಲಿ ಊರಿಗೆ ವಾಪಸ್ ಬರುತ್ತಿದ್ದಾಗ ಅಪರಿಚಿತ ವ್ಯಕ್ತಿ ಲಾಂಗ್‌ನಿಂದ ದಾಳಿ ನಡೆಸಿದ್ದಾನೆ. ಕಾರು ನಿಲ್ಲಿಸದೆ ಗ್ರಾಮಕ್ಕೆ ಹೋಗಿ ಸ್ನೇಹಿತರನ್ನು ಕರೆದುಕೊಂಡು ವಾಪಸ್ ಬಂದು ಹುಡುಕಾಟ ನಡೆಸಿದಾಗ ಯಾರೂ ಪತ್ತೆಯಾಗಿರಲಿಲ್ಲ. ಇದಾದ ಮೂರು ದಿನಗಳ ನಂತರ ಆರೋಪಿಗಳು ದಿಲೀಪ್‌ಗೆ ಕರೆ ವಾಡಿ ನಾವೇ ಮೊನ್ನೆ ನಿನ್ನ ಮೇಲೆ ಅಟ್ಯಾಕ್ ವಾಡಿದ್ದು, 5 ಲಕ್ಷ ರೂಪಾಯಿ ಕೊಡುವಂತೆ ಧಮ್ಕಿ ಹಾಕಿದ್ದಾರೆ.

ಎಚ್.ಕ್ರಾಸ್‌ನಲ್ಲಿನ ಸುವಾರು 40 ಅಂಗಡಿಯವರು ನಮಗೆ ಹಫ್ತಾ ಕೊಡುತ್ತಿದ್ದಾರೆ. ನಮಗೆ ದುಬೈ, ಮುಂಬೈ ವಾಫಿಯಾದೊಂದಿಗೆ ನಂಟಿದೆ ಎಂದೆಲ್ಲಾ ಹೇಳಿ ಬೆದರಿಸಿದ್ದಾರೆ. ಬೆದರಿಕೆ ಕುರಿತು ದಿಲೀಪ್ ಶಿಡ್ಲಘಟ್ಟ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರತಿ ಎರಡು ಮೂರು ದಿನಕ್ಕೊಮ್ಮೆ ಮೊಬೈಲ್, ನಂಬರ್ ಬದಲಿಸಿ ಕರೆ ಮಾಡುತ್ತಿದ್ದ ಆರೋಪಿಗಳಿಗೆ ಹಣ ನೀಡುವ ನಾಟಕವಾಡಿದ ಪೊಲೀಸರು, ಎಲ್ಲಿಗೆ ತಲುಪಿಸಬೇಕೆಂಬ ಮಾಹಿತಿ ಕೇಳಿದ್ದಾರೆ. ಖೆಡ್ಡಾಗೆ ಬಿದ್ದ ದುಷ್ಕರ್ಮಿಗಳು ಶಿಡ್ಲಟ್ಟ-ಚಿಂತಾಮಣಿ ಗಡಿ ಅಟ್ಟೂರು ಬಳಿ ಹಣ ಪಡೆಯಲು ಬಂದಿದ್ದು, ಈ ವೇಳೆ ಬಂಧಿಸಿದ್ದಾರೆ. ಮೂರು ಮೊಬೈಲ್‌ಗಳು, ಲಾಂಗ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎನ್ನಲಾಗಿದೆ.