ಜಿಲ್ಲೆ

ಐವರು ಹೆದ್ದಾರಿ ದರೋಡೆಕೋರರು ಅಂದರ್​

ಬೆಳಗಾವಿ: ಬೆಂಗಳೂರು&ಪುಣೆ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿವೃತ್ತ ಆರ್​ಎಫ್​ಒ ಕಾರು ಅಡ್ಡಗಟ್ಟಿ ಮಾರಕಾಸ ತೋರಿಸಿ ಹಣ ದರೋಡೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರೇಬಾಗೇವಾಡಿ ಠಾಣೆ ಪೊಲೀಸರು ಸೋಮವಾರ ಐವರನ್ನು ಬಂಧಿಸಿದ್ದಾರೆ.

ಮೂಲತ@ ಹುಕ್ಕೇರಿ ತಾಲೂಕಿನ ಗುಟಗುದ್ದಿ ಗ್ರಾಮದ, ಹಾಲಿ ಶಿವಾಜಿ ನಗರದ ಲಗಮಪ್ಪ ಮಲ್ಲಪ್ಪ ಕೊಳ್ಯಾನಾಯಿಕ (30) ಬೆಳಗಾವಿ ತಾಲೂಕಿನ ಮುತ್ಯಾನಟ್ಟಿ ಗ್ರಾಮದ ದುರ್ಗಮ್ಮ ಗಲ್ಲಿಯ ಪ್ರಕಾಶ (ಪಿಕೆ)ಗುಜ್ಜಪ್ಪ ಗೋರವ (26), ಮಾರುತಿ ಗಲ್ಲಿಯ ಕಲ್ಲಪ್ಪ ಸಿದ್ರಾಯಿ ಹೊನ್ನಂಗಿ (29), ದುರ್ಗಮ್ಮ ಗಲ್ಲಿಯ ವಿಶಾಲ ಸಿದ್ರಾಯಿ ತಳವಾರ (23), ಮಾಸ್ತಮರಡಿ ಗ್ರಾಮದ ವಿಠ್ಠಲ ಗಲ್ಲಿ ಮಾರುತಿ ಹನುಮಂತ ನಾಗಪ್ಪ ಬುರ್ರಾಣಿ (20) ಬಂಧಿತರು.

ಜುಲೈ 31ರಂದು ಅರಣ್ಯ ಇಲಾಖೆಯ ನಿವೃತ್ತ ಅಧಿಕಾರಿ ಕಾರಿನ ಮೂಲಕ ಬೆಳಗಾವಿಯಿಂದ ಧಾರವಾಡಕ್ಕೆ ಹೋಗುತ್ತಿದ್ದರು. ಈ ವೇಳೆ ಮುತ್ನಾಳ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಿನಿಮೀಯ ರೀತಿಯಲ್ಲಿ ಸ್ಕಾರ್ಪಿಯೋ ವಾಹನದಿಂದ ಬೆನ್ನತ್ತಿ ಅಡ್ಡಗಟ್ಟಿದ ದರೋಡೆಕೋರರು ಪ್ಲಾಸ್ಟಿಕ್​ ಪಿಸ್ತೂಲ್​ ಲೈಟರ್​, ತಲ್ವಾರ್​, ಲಾಂಗ್​ಗಳನ್ನು ತೋರಿಸಿ ಬೆದರಿಕೆ ಹಾಕಿದ್ದಾರೆ. ಬಳಿಕ ಅಧಿಕಾರಿ ಬಳಿ ಇದ್ದ 4.ಲಕ್ಷ ರೂ. ದೋಚಿಕೊಂಡಿದ್ದಾರೆ. ಅಷ್ಟಕ್ಕೆ ಸುಮ್ಮನಾಗದ ದರೋಡೆಕೋರರು ್ತ ಅಧಿಕಾರಿಯನ್ನು ಅಪಹರಿಸಿ ಇನ್ನೂ 20 ಲ ರೂ.ನೀಡುವಂತೆ ಬೇಡಿಕೆ ಇಟ್ಟಿದ್ದಾರೆ. ಈ ಕುರಿತು ಆ.21ರಂದು ಹಿರೇಬಾಗೇವಾಡಿ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಪ್ರಕರಣ ದಾಖಲಿಸಿಕೊಂಡ ಪೊಲೀಸ್​ ಇನ್ಸ್​ಪೆಕ್ಟರ್​ ವಿಜಯಕುಮಾರ ಸಿನ್ನೂರ ನೇತೃತ್ವದ ತಂಡವು ದರೋಡೆಕೋರರನ್ನು ವಶಕ್ಕೆ ಪಡೆದು ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾರೆ. ಬಳಿಕ ಬಂಧಿತರಿಂದ 3.80 ಲ ರೂ. ನಗದು ಹಾಗೂ ಕೃತ್ಯಕ್ಕೆ ಬಳಿಸಿದ ಸ್ಕಾರ್ಪಿಯೋ ವಾಹನ ಹಾಗೂ ಮಾರಕಾಸ ವಶಪಡಿಸಿಕೊಂಡಿದ್ದಾರೆ.

ಪಿಐ ವಿಜಯಕುಮಾರ ಎನ್​.ಸಿನ್ನೂರ, ಪಿಎಸ್​ಐ ಪ್ರವಿಣ ಬಿರಾದಾರ, ಪಿಎಸ್​ಐ ಅಭಿಷೇಕ ನಾಡಗೌಡರ, ಸಿಬ್ಬಂದಿ ಎ.ಕೆ.ಕಾಂಬಳೆ, ಎಂ.ಎ.ಮಂಟೂರ, ಆರ್​.ಎಸ್​. ಕೆಳಗಿನಮನಿ, ಎಸ್​.ಜಿ.ಉಪ್ಪಾರಟ್ಟಿ, ಎಸ್​.ಸಿ.ಚಿನ್ನನ್ನವರ, ಸಂತೋಷ ಜಗಜಂಪಿ ಹಾಗೂ ಟೆಕ್ನಿಕಲ್​ ಸೆಲ್​ದ ರಮೇಶ ಅಕ್ಕಿ ಅವರನ್ನು ಪೊಲೀಸ್​ ಆಯುಕ್ತ ಡಾ.ಎಂ.ಬಿ.ಬೋರಲಿಂಗಯ್ಯ, ಡಿಸಿಪಿಗಳಾದ ಪಿ.ವಿ.ಸ್ನೇಹಾ, ರವೀಂದ್ರ ಗಡಾದಿ ಅಭಿನಂದಿಸಿದ್ದಾರೆ.