ಹುಬ್ಬಳ್ಳಿ: ಐಪಿಎಲ್ ಬೆಟ್ಟಿಂಗ್ನಲ್ಲಿ ತೊಡಗಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಹಳೇಹುಬ್ಬಳ್ಳಿ ಬಾಣತಿಕಟ್ಟಾ ಸರ್ಕಲ್ ಹತ್ತಿರದ ಸಾರ್ವಜನಿಕ ಖುಲ್ಲಾ ಜಾಗದಲ್ಲಿ ಮೊಬೈಲ್ ಫೋನ್ ಮೂಲಕ ಕ್ರಿಕೆಟ್ ಬೆಟ್ಟಿಂಗ್ ಆಡುತ್ತಿದ್ದ ಆರೋಪಿತರಾದ ಗಾರ್ಡನ್ಪೇಟೆಯ ಮೊಹಮ್ಮದವಾಸೀಂ ಅಬ್ದುಲಗಫಾರ ಹೊಂಗಲ್ (28) ಹಾಗೂ ಬಂಡಿವಾಡಬೇಸ್ನ ನವೀದ ಭಾಷಾಸಾಬ ಮಾಲ್ದಾರ (27) ಎಂಬುವವರನ್ನು ಬಂಧಿಸಲಾಗಿದೆ. ಅವರಿಂದ ಮೊಬೈಲ್ಫೋನ್ ಹಾಗೂ 18600 ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಇದರಲ್ಲಿ ಭಾಗಿಯಾದ ಇನ್ನೊಬ್ಬ ಪ್ರಮುಖ ಆರೋಪಿ ಬುಕ್ಕಿ ಪರಾರಿಯಾಗಿದ್ದು, ಪತ್ತೆಗೆ ಜಾಲ ಬೀಸಲಾಗಿದೆ. ಸಿಸಿಬಿ ಹಾಗೂ ಸಿಸಿಐಬಿ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಅಲ್ತಾಫ ಮುಲ್ಲಾ, ಹಳೇಹುಬ್ಬಳ್ಳಿ ಇನ್ಸ್ಪೆಕ್ಟರ್ ಎಸ್.ಬಿ. ಮಾಳಗೊಂಡ, ಎಸ್.ಎಸ್. ಕಮತಗಿ ಅವರ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿದ್ದು, ಎಎಸ್ಐ ಶಿವರಾಜ ಎಂ, ಎಚ್.ಸಿ. ಗಳಾದ ಪ್ರಕಾಶ ಸೋಗಿ, ಎಚ್.ವಿ. ಗಾಣದಾಳ, ಸಿಪಿಸಿಗಳಾದ ಬಸವರಾಜ ಸಣ್ಣಪ್ಪನವರ, ಅನಿಲ್ ಹುಗ್ಗಿ, ಸಂತೋಷ ಇಚ್ಚಂಗಿ, ಐ.ಕೆ. ಅತ್ತಾರ, ಆರ್.ಎಸ್. ಗುಂಜಾಳ, ಡಿ.ಎನ್. ಗುಂಡಗೈ, ಎಸ್.ಎಚ್. ಕೆಂಪೋಡಿ, ವಿ.ಆರ್. ಮರೆಪ್ಪನವರ ಹಾಗೂ ಹಳೇಹುಬ್ಬಳ್ಳಿಯ ಎಂ.ಜಿ. ಡಲಾಯತ್ ಹಾಗೂ ಎಸ್.ಬಿ. ಮಡಿವಾಳರ ಕಾರ್ಯಾಚರಣೆಯಲ್ಲಿದ್ದರು. ಪೊಲೀಸ್ ಆಯುಕ್ತರು ತಂಡದ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.
ಶಹರ ಠಾಣೆ ಪೊಲೀಸರಿಂದ ಗಾಂಜಾ ಮಾರಾಟಗಾರನ ಅರೆಸ್ಟ್
ಹುಬ್ಬಳ್ಳಿ ನಗರದ ಮೌಲಾಲಿ ಜೋಪಡಿ ಹತ್ತಿರ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದಡಿ ಒಬ್ಬನನ್ನು ಶಹರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕೇಶ್ವಾಪುರ ಹೂಗಾರ ಪ್ಲಾಟ್ ನಿವಾಸಿ ಅಫ್ಜಲ್ ಮುಸ್ತಾಕಅಹಮ್ಮದ ಶೇಖ (22) ಬಂಧಿತ ಆರೋಪಿ. ಆತನಲ್ಲಿದ್ದ 2,800 ರೂ. ಕಿಮ್ಮತ್ತಿನ 150 ಗ್ರಾಂ ಗಾಂಜಾ ಹಾಗೂ ನಗದು 460 ರೂ. ಜಪ್ತ ಮಾಡಲಾಗಿದೆ. ಇನ್ಸ್ ಪೆಕ್ಟರ್ ಎಂ.ಎಸ್. ಪಾಟೀಲ, ಪಿಎಸ್ಐ ಬಿ.ಎನ್. ಸಾತನ್ನವರ ಹಾಗೂ ಸಿಬ್ಬಂದಿ ದಾಳಿ ಮಾಡಿದ್ದರು.
21 ವರ್ಷದಿಂದ ತಲೆಮರೆಸಿಕೊಂಡಿದ್ದ ಬಟ್ಟೆ ಕಳ್ಳತನದ ಆರೋಪಿ ಸೆರೆ
21 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಬಟ್ಟೆ ಕಳ್ಳತನದ ಆರೋಪಿಯನ್ನು ಪತ್ತೆ ಹಚ್ಚಿ ನ್ಯಾಯಾಲಯಕ್ಕೆ ಹಾಜರುಪಡಿಸುವಲ್ಲಿ ಹುಬ್ಬಳ್ಳಿ ಶಹರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಅಮರಗೋಳ ಚಿಕ್ಕೇರಿ ಪ್ಲಾಟ್ ನಿವಾಸಿ ಶಿದ್ಲಿಂಗಪ್ಪ ಉರ್ಫ್ ಸಿದ್ದಪ್ಪ ಚಂದ್ರಾಮಪ್ಪ ಬಾಗಲಕೋಟ (39) ಬಂಧಿತ.
ರಾಧಾಕೃಷ್ಣ ಗಲ್ಲಿಯ ಮಹೇಶ ಟೇಲರ್ ಅಂಗಡಿಯಲ್ಲಿ 1999ರಲ್ಲಿ ಬಾಗಿಲ ಕೀಲಿ ಮುರಿದು ಬಟ್ಟೆ ಕಳವು ಆರೋಪದಡಿ ಬಂಧಿತನಾಗಿದ್ದಾಗ ನ್ಯಾಯಾಲಯದಿಂದ ಜಾಮೀನು ಪಡೆದು ಹೋಗಿದ್ದ. ದೀರ್ಘಾವಧಿ ಬಾಕಿ ಪ್ರಕರಣ ‘ಎಲ್.ಪಿ.ಸಿ’ ಎಂದು ಪರಿಗಣಿಸಲಾಗಿದ್ದರಿಂದ ಆರೋಪಿ ಬಂಧನಕ್ಕೆ ಮೇಲಧಿಕಾರಿಗಳು ಸೂಚಿಸಿದ್ದರು. ಶಹರ ಠಾಣೆ ಇನ್ಸ್ಪೆಕ್ಟರ್ ಎಂ.ಎಸ್. ಪಾಟೀಲ ನೇತೃತ್ವದಲ್ಲಿ ಆರೋಪಿಯನ್ನು ಪತ್ತೆ ಹಚ್ಚಲಾಗಿದೆ. ಆರೋಪಿ ನ್ಯಾಯಾಂಗ ಬಂಧನದಲ್ಲಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ, ತಪ್ಪಿದ ಅನಾಹುತ
ಧಾರವಾಡ: ವೇಗವಾಗಿ ಚಲಿಸುತ್ತಿದ್ದ ಕಾರಿನಲ್ಲಿ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಕಾಣಿಸಿಕೊಂಡ ಘಟನೆ ನಗರದ ಸುವರ್ಣ ಪೆಟ್ರೋಲ್ ಬಂಕ್ ಬಳಿ ಶನಿವಾರ
ರಾತ್ರಿ ಸಂಭವಿಸಿದೆ. ಕೊಪ್ಪದಕೇರಿಯ ವಾಸೀಂಷಾ ಕಿತ್ತೂರ ಎಂಬುವವರಿಗೆ ಸೇರಿದ ಕಾರು ಸುಟ್ಟು ಕರಕಲಾಗಿದೆ.
ಧಾರವಾಡ ಕಡೆಗೆ ಆಗಮಿಸುವ ಸಂದರ್ಭದಲ್ಲಿ ಈ ಘಟನೆ ನಡೆದಿದ್ದು, ಕೂಡಲೆ ಸ್ಥಳದಲ್ಲಿದ್ದ ಜನರು ಬೆಂಕಿ ನಂದಿಸಿ ಸಂಭವನೀಯ ಅನಾಹುತ ತಪ್ಪಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ವಿದ್ಯಾಗಿರಿ ಠಾಣೆ ಪೊಲೀಸರು ಘಟನೆ ಮಾಹಿತಿ ಪಡೆದಿದ್ದಾರೆ.
ಮಹಡಿಯಿಂದ ಬಿದ್ದು ಪೇಂಟರ್ ಸಾವು
ಹುಬ್ಬಳ್ಳಿ: ಬಹುಮಹಡಿ ಕಟ್ಟಡದಲ್ಲಿ ಪೇಂಟಿಂಗ್ ಮಾಡುತ್ತಿದ್ದ ಕಾರ್ವಿುಕನೊಬ್ಬ ಬಿದ್ದು ಮೃತಪಟ್ಟ ಘಟನೆ ಕೇಶ್ವಾಪುರ ಶಾಂತಿನಗರ ಪರ್ಲ್ ಲೇಔಟ್ನಲ್ಲಿ ನಡೆದಿದೆ. ಮಂಟೂರ ರಸ್ತೆಯ ನಿವಾಸಿ ಕೋಟಯ್ಯ ವೆಂಕಟೇಶ ರೊಡ್ಡ (34) ಮೃತಪಟ್ಟ ವ್ಯಕ್ತಿ.
ಇವರು ಅಪಾರ್ಟ್ವೆುಂಟ್ನಲ್ಲಿ ಪೇಂಟಿಂಗ್ ಮಾಡುತ್ತಿದ್ದರು. ನಾಲ್ಕನೇ ಮಹಡಿಯಲ್ಲಿದ್ದಾಗ ಆಯತಪ್ಪಿ ಬಿದ್ದು ಸಾವಿಗೀಡಾಗಿದ್ದಾರೆ ಎನ್ನಲಾಗಿದೆ. ಕೇಶ್ವಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.