ಜಿಲ್ಲೆ

ಐನಾಪುರದಲ್ಲಿ ಬೈಕ್ ರ‍್ಯಾಲಿಗೆ ಚಾಲನೆ

ಐನಾಪುರ: ಪಟ್ಟಣದಲ್ಲಿ ಜೂ.೮ ರಿಂದ ಮೂರು ದಿನಗಳ ಕಾಲ ನಡೆಯಲಿರುವ ಜೈನ ಸಮಾವೇಶ ಮತ್ತು ಭಟ್ಟಾರಕ ಸಮ್ಮೇಳನದ ಕುರಿತು ಜಾಗೃತಿ ಮೂಡಿಸಿ ಕಾರ್ಯಕ್ರಮ ಯಶಸ್ವಿಗೊಳಿಸಲು ಬೈಕ್ ರ‍್ಯಾಲಿ ಹಮ್ಮಿಕೊಳ್ಳಲಾಯಿತು.

ಪಟ್ಟಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಬೈಕ್ ರ‍್ಯಾಲಿಗೆ ರಾಷ್ಟçಸಂತ ಗುಣಧರನಂದಿ ಮುನಿಮಹಾರಾಜರು ಚಾಲನೆ ನೀಡಿದರು. ಬೈಕ್ ರ‍್ಯಾಲಿ ಪಟ್ಟಣದಿಂದ ಹೊರಟು ಬನಜವಾಡ, ಫರೀದಖಾನವಾಡಿ, ಉಗಾರ ಕೆ.ಎಚ್, ಉಗಾರ ಬಿಕೆ, ಕುಸನಾಳ, ಮೊಳವಾಡ, ಶಿರಗುಪ್ಪಿ, ಜುಗೂಳ, ಶಹಾಪುರ, ಕಾಗವಾಡ, ಶೇಡಬಾಳ, ಲೋಕೂರ, ಮಂಗಸೂಳಿ, ಕೆಂಪವಾಡ, ಸಿದ್ದೇವಾಡಿ, ಕವಲಗುಡ್ಡ, ಮೋಳೆ ಗ್ರಾಮಗಳಲ್ಲಿ ಸಂಚರಿಸಿ ಜೈನ ಧರ್ಮದ ಘೋಷಣೆ ಕೂಗಿ ಜಾಗೃತಿ ಮೂಡಿಸಿದರು. ರ‍್ಯಾಲಿಯಲ್ಲಿ ಸಾವಿರಾರು ಯುವಕರು ಭಾಗವಹಿಸಿದ್ದರು.

ಸುನೀಲ ಪಾಟೀಲ, ಮಹೇಂದ್ರ ಉಪಾಧ್ಯೆ, ಸುಭಾಷ ಪಾಟೀಲ, ದಾದಾ ಪಾಟೀಲ, ಸಂಜಯ ಕುಚನೂರೆ, ಚಮನರಾವ ಪಾಟೀಲ, ಶಾಂತಿನಾಥ ಉಗಾರೆ, ಸಂತೋಷ ಪಾಟೀಲ ಇತರರಿದ್ದರು.