ಜಿಲ್ಲೆ

ಐದು ಪ್ಲಾಸ್ಟಿಕ್ ಮುಕ್ತ ನಗರಕ್ಕೆ ಯೋಚನೆ: ಸಚಿವ ಈಶ್ವರ ಬಿ.ಖಂಡ್ರೆ ಹೇಳಿಕೆ

ಮೈಸೂರು: ಚಾಮುಂಡಿ ಬೆಟ್ಟದಂತಹ ಧಾರ್ಮಿಕ ಸ್ಥಳಗಳಲ್ಲಿ ಪ್ಲಾಸ್ಟಿಕ್ ಬಳಕೆ ಹೆಚ್ಚಾಗಿರುವುದರ ಬಗ್ಗೆ ಪ್ರಸ್ತಾಪಿಸಿದ ಸಚಿವರು, ಪ್ಲಾಸ್ಟಿಕ್ ಹೇಗೆ ಉಪಯೋಗಿಸಬೇಕು ಎನ್ನುವ ಬಗ್ಗೆ ಈಗಾಗಲೇ ಕಾಯ್ದೆ ಜಾರಿಯಲ್ಲಿದೆ. 2016 ರಲ್ಲಿ ಇದರ ಬಗ್ಗೆ ನಿರ್ಧಾರ ಕೈಗೊಂಡಿದ್ದೇವೆ. ಆದರೆ ಇನ್ನೂ ಅನುಷ್ಠಾನಕ್ಕೆ ಬಂದಿಲ್ಲ ಎಂದರು.
ಪ್ಲಾಸ್ಟಿಕ್ ನೀರು, ಮಣ್ಣಿನಲ್ಲಿ ಕರಗುವುದಿಲ್ಲ. ಬೆಂಕಿ ಬಿದ್ದರೆ ಹೊರಸೂಸುವ ವಿಷದಿಂದ ಆಗುವಂತ ಮಾಲಿನ್ಯವನ್ನು ತಡೆಗಟ್ಟುವುದೇ ಇಂದಿನ ಸವಾಲಾಗಿದೆ. ಈಗಾಗಲೇ ಪರಿಸರ ದಿನದಂದು ನಾನು ಘೋಷಣೆ ಮಾಡಿದ್ದೇನೆ. ಬೀದರ್, ಕಲಬುರಗಿ, ಮೈಸೂರು, ಧರ್ಮಸ್ಥಳ ಸೇರಿದಂತೆ ಐದು ಪ್ರಮುಖ ನಗರವನ್ನು ಆಯ್ಕೆ ಮಾಡಿಕೊಂಡು ಪ್ಲಾಸ್ಟಿಕ್ ಮುಕ್ತ ಮಾಡುವ ಯೋಚನೆ ಇದೆ ಎಂದು ಹೇಳಿದರು.
ಪ್ರತಿಯೊಂದು ಸಮಸ್ಯೆಗೂ ಪರಿಹಾರ ಇದ್ದೇ ಇರುತ್ತದೆ. ಪ್ಲಾಸ್ಟಿಕ್ ಅನ್ನು ಹೆಚ್ಚು ಬಳಕೆ ಮಾಡುವುದರ ಬದಲು ಪ್ಲಾಸ್ಟಿಕ್ ಚೀಲದ ಬದಲಾಗಿ ಬಟ್ಟೆ ಚೀಲವನ್ನು ಉಪಯೋಗಿಸುವುದು ಉತ್ತಮ. ಬಟ್ಟೆ ಚೀಲಗಳ ಬಳಕೆಗೆ ಮತ್ತು ಅದರ ಉತ್ಪಾದನೆಗೆ ಸರ್ಕಾರದ ವತಿಯಿಂದ ಅನುದಾನ ನೀಡಿದರೆ ಇದೆಲ್ಲದಕ್ಕೂ ಸಹ ಪರಿಹಾರ ಸಿಗುತ್ತದೆ ಎಂದು ತಿಳಿಸಿದರು.