oppo_2 
ಜಿಲ್ಲೆ

ಐದು ದಿನದ ಕನ್ನಡ ಉತ್ಸವ 14ರಿಂದ

ಕಲಬುರಗಿ: ಕನ್ನಡ ಸೈನ್ಯದಿಂದ ನಗರದ ಟ್ಯಾಂಕ್‌ಬAಡ್ ರಸ್ತೆಯಲ್ಲಿನ ಗೋವಾ ಹೊಟೇಲ್ ಬಳಿಯ ಸಿದ್ಧಾರ್ಥ ವೃತ್ತದಲ್ಲಿ ಡಿ.೧೪, ೧೫, ೧೬, ೧೭, ೧೮ರಂದು ನಿತ್ಯ ಸಂಜೆ ೭ಕ್ಕೆ ಕನ್ನಡ ಉತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಸೈನ್ಯದ ಅಧ್ಯಕ್ಷ ಸೋಮನಾಥ ಕಟ್ಟಿಮನಿ ಹೇಳಿದರು.

೧೪ರಂದು ಸಂಜೆ ೭ಕ್ಕೆ ಚಿ.ದೊಡ್ಡಪ್ಪ ಅಪ್ಪ ಉದ್ಘಾಟಿಸಲಿದ್ದು, ಮಾತೋಶ್ರೀ ಡಾ.ದಾಕ್ಷಾಯಿಣಿ ಅಪ್ಪ ಸಾನ್ನಿಧ್ಯ ವಹಿಸಲಿದ್ದಾರೆ. ಮೇಯರ್ ಯಲ್ಲಪ್ಪ ನಾಯ್ಕೋಡಿ ನೇತೃತ್ವ ವಹಿಸಲಿದ್ದಾರೆ. ಗಣ್ಯರು ಪಾಲ್ಗೊಳ್ಳಲಿದ್ದಾರೆ. ಸಂಗೀತ ಸುಧೆ, ತಬಲಾ ಜುಗಲ್‌ಬಂಧಿ, ಜಾನಪದ ನೃತ್ಯ, ಗಾಯನ ನಡೆಯಲಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

೧೫ರಂದು ಸಂಜೆ ೭ಕ್ಕೆ ಶಾಸಕ ಅಲ್ಲಮಪ್ರಭು ಪಾಟೀಲ್ ಉದ್ಘಾಟಿಸಲಿದ್ದು, ಡಾ.ರಾಜಶೇಖರ ಕಟ್ಟಿಮನಿ ಅಧ್ಯಕ್ಷತೆ ವಹಿಸಲಿದ್ದಾರೆ. ಸೋಮಶೇಖರ ಗೋನಾಯಕ, ದೊಡ್ಡಪ್ಪಗೌಡ ಪಾಟೀಲ್ ನರಿಬೋಳ, ಸತೀಶ ಗುತ್ತೇದಾರ್, ಬಾಲರಾಜ ಗುತ್ತೇದಾರ್ ಸೇರಿ ಗಣ್ಯರು ಭಾಗವಹಿಸಲಿದ್ದಾರೆ. ಸಂಗೀತ ಗಾಯನ, ಗೊಂಬೆ, ಮಿಮಿಕ್ರಿ, ರಸಮಂಜರಿ ನಡೆಯಲಿದೆ ಎಂದರು.

ಡಿ.೧೬ರAದು ಡಾ.ಸುರೇಶ ಶರ್ಮಾ ಉದ್ಘಾಟಿಸಲಿದ್ದು, ಮಹಿಪಾಲರೆಡ್ಡಿ ಅಧ್ಯಕ್ಷತೆ ವಹಿಸಲಿದ್ದಾರೆ. ಸುಮಧುರ ಮೆಲೋಡಿಸ್‌ನಿಂದ ರಸಮಂಜರಿ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿವೆ. ಡಿ.೧೭ರಂದು ಉದ್ಯಮಿ ಇಲಿಯಾಸ್ ಸೇಠ ಬಾಗವಾನ್ ಉದ್ಘಾಟಿಸಲಿದ್ದು, ನೀಲಕಂಠರಾವ ಮೂಲಗೆ ಅಧ್ಯಕ್ಷತೆ ವಹಿಸಲಿದ್ದಾರೆ. ನಗೆ ಹಬ್ಬ, ಸಂಗೀತ ಗಾಯನ, ಜ್ಯೂನಿಯರ್ ಕಲಾವಿದರಿಂದ ರಸಮಂಜರಿ, ಶಾಸ್ತಿçÃಯ ನೃತ್ಯ ನಡೆಯಲಿದೆ ಎಂದು ತಿಳಿಸಿದರು.

೧೮ರಂದು ನಿತೀನ್ ಗುತ್ತೇದಾರ್ ಉದ್ಘಾಟಿಸಲಿದ್ದು, ರಂಗಾಯನ ನಿರ್ದೇಶಕಿ ಸುಜಾತಾ ಜಂಗಮಶೆಟ್ಟಿ ನೇತೃತ್ವದಲ್ಲಿ ತ್ರಿವೇಣಿ ತಾಳಿಕೋಟೆ ಅಧ್ಯಕ್ಷತೆ ವಹಿಸಲಿದ್ದಾರೆ. ಜಾನಪದ ಉತ್ಸವ, ಹಳೆ ನೋಟು, ನಾಣ್ಯಗಳ ಪ್ರದರ್ಶನ, ಸಂಗೀತ ಸಂಜೆ, ಮೂಗಿನಿಂದ ಕೊಳಲವಾದನ, ಗೀಗೀ ಪದ ಸೇರಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿವೆ ಎಂದು ತಿಳಿಸಿದರು.

ಅಮೃತ ಡಿಗ್ಗಿ, ಶಂಕರ ತಾಳಿಕೋಟಿ, ಕವಿರಾಜ ಕೋರಿ, ಸೂರಜ ಪಾಂಡೆ, ರಾಜಶೇಖರ, ರಾಕೇಶ ಕಟ್ಟಿಮನಿ, ನಾಗರಾಜ ಕಟ್ಟಿಮನಿ ಇತರರಿದ್ದರು.