ಜಿಲ್ಲೆ

ಐಎಸ್​ಐ ಚಿಹ್ನೆಯ ಆಟಿಕೆಗಳನ್ನೇ ಖರೀದಿಸಿ, ಗ್ರಾಹಕರಿಗೆ ಬಿಐಎಸ್ ಮನವಿ

ಹುಬ್ಬಳ್ಳಿ: ಮಕ್ಕಳಿಗೆ ಆಟಿಕೆ ವಸ್ತುಗಳನ್ನು ಖರೀದಿ ಮಾಡುವ ಸಂದರ್ಭದಲ್ಲಿ ಕಡ್ಡಾಯವಾಗಿ ಐಎಸ್​ಐ ಚಿಹ್ನೆಯನ್ನು ಗಮನಿಸಬೇಕು. ಇಂತಹ ಗುರುತು ಇಲ್ಲದ ವಸ್ತುಗಳು ಅಪಾಯಕಾರಿಯಾಗಿವೆ ಎಂದು ಭಾರತೀಯ ಮಾನಕ ಬ್ಯೂರೋ (ಬಿಐಎಸ್) ತಿಳಿಸಿದೆ.

ಐಎಸ್​ಐ ಮಾರ್ಕಿಲ್ಲದಿದ್ದರೆ ಅವು ಗುಣಮಟ್ಟದ ಆಟಿಕೆಗಳಲ್ಲ. 14 ವರ್ಷದ ಒಳಗಿನ ಮಕ್ಕಳಿಗಾಗಿ ತಯಾರಿಸಿದ ಆಟಿಕೆಗಳ ಮೇಲೆ ಐಎಸ್​ಐ ಚಿಹ್ನೆ ಹಾಕುವುದನ್ನು ಕಡ್ಡಾಯಗೊಳಿಸಲಾಗಿದೆ. ಹಾಗಾಗಿ, ಉತ್ಪಾದಕರು ಅಥವಾ ವ್ಯಾಪಾರಿಗಳು ಐಎಸ್​ಐ ಚಿಹ್ನೆ ಇಲ್ಲದಿರುವ ಆಟಿಕೆಗಳನ್ನು ಉತ್ಪಾದನೆ, ಸಂಗ್ರಹ, ಮಾರಾಟ ಮಾಡುವಂತಿಲ್ಲ.

ಐಎಸ್​ಐ ಇಲ್ಲದ ಆಟಿಕೆ ಮಾರಾಟ ಮಾಡಿದರೆ ಭಾರತೀಯ ಮಾನಕ ಬ್ಯೂರೋ ಅಧಿನಿಯಮ ಉಲ್ಲಂಘನೆಯಾಗುತ್ತದೆ. ಅಪರಾಧಿಗಳಿಗೆ ಎರಡು ವರ್ಷ ಕಾರಾಗೃಹ ಶಿಕ್ಷೆ ಅಥವಾ 2 ಲಕ್ಷ ರೂ. ದಂಡ ಅಥವಾ ಎರಡನ್ನೂ ವಿಧಿಸಬಹುದಾಗಿದೆ.

www.bis.gov.in

ಮೂಲಕ ಭಾರತೀಯ ಮಾನಕ ಬ್ಯೂರೋ ಕಾರ್ಯಾಲಯಗಳ ಮಾಹಿತಿ ತಿಳಿದುಕೊಳ್ಳಬೇಕು. ಆಟಿಕೆ ಮೇಲಿನ ಐಎಸ್​ಐ ಚಿಹ್ನೆಯ ಅಸಲಿಯತ್ತು ತಿಳಿದುಕೊಳ್ಳಲು ಬಿಐಎಸ್ ಕೇರ್ ಆಪ್ ಬಳಸಬಹುದು. ಒಂದು ವೇಳೆ ನಕಲಿಯಾಗಿದ್ದಲ್ಲಿ ಆಪ್​ನಲ್ಲೇ ದೂರು ನೀಡಬಹುದು. ಕಚೇರಿ ವಿಳಾಸ. ಭಾರತೀಯ ಮಾನಕ ಬ್ಯೂರೋ, ಹುಬ್ಬಳ್ಳಿ ಶಾಖೆ, ಒಂದನೇ ಮಹಡಿ, ಕೆಎಸ್​ಎಫ್​ಸಿ ಕಟ್ಟಡ, ರಾಯಾಪುರ, ಧಾರವಾಡ, ಕರ್ನಾಟಕ- 80009.