ಜಿಲ್ಲೆ

ಐಎನ್ಎನಿಂದ ಶಂಕಿತ ಯುವಕನ ವಿಚಾರಣೆ

ಯಾದಗಿರಿ: ಜಾರ್ಖಂಡ್ ರಾಜ್ಯದ ರಾಜಧಾನಿ ರಾಂಚಿಯಲ್ಲಿ ಬಂಧನಕ್ಕೆ ಒಳಗಾದ ಆರೋಪಿ ಫಯಾಜ್ ಜತೆ ಸಂಪರ್ಕದಲ್ಲಿದ್ದ ಶಹಾಪುರದ ಶಂಕಿತ ಯುವನನ್ನು ರಾಷ್ಟ್ರೀಯ ತನಿಖಾ ದಳ ಗುರುವಾರ ವಶಕ್ಕೆ ಪಡೆದು ಕೆಲಕಾಲ ವಿಚಾರಣೆಗೆ ಒಳಪಡಿಸಿದೆ.

ಶಹಾಪುರ ಗುತ್ತಿಪೇಟ ಬಡಾವಣೆಯ ಖಾಲಿದ್ ಅಹ್ಮದ್ (22) ಮನೆ ಮೇಲೆ ಗುರುವಾರ ಬೆಳಗ್ಗೆ 4 ಗಂಟೆಗೆ ದಾಳಿ ನಡೆಸಿದ ತಂಡ 10 ಗಂಟೆವರೆಗೂ ವಿಚಾರಣೆಗೊಳಪಡಿಸಿದೆ.

ರಾಂಚಿಯ ಪೊಲೀಸ್ ಠಾಣೆಯ ಆರೋಪಿ ಫಯಾಜ್ ಜೊತೆ ಇನ್ಸಟಾಗ್ರಾಂ ಮತ್ತು ಫೇಸ್ ಬುಕ್ ನಲ್ಲಿ ಚಾಟ್ ಮಾಡುತ್ತಿದ್ದರಿಂದ ಶಂಕಿತ ಯುವಕನನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎನ್ನಲಾಗಿದೆ.

ಶಂಕಿತ ಅಹ್ಮದ್ 2 ಮೊಬೈಲ್ ಗಳನ್ನು ವಶಕ್ಕೆ ಪಡೆಯಲಾಗಿದೆ.

ಕಾಲಿದ್ ಅಹ್ಮದ್ ತೀವ್ರ ವಿಚಾರಣೆ ನಡೆಸಿದ ತಂಡ ಸೆ. 20ರಂದು ಮತ್ತೆ ರಾಂಚಿಯಲ್ಲಿ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಲಾಗಿದೆ.

ಮೊಬೈಲ್ ಜೊತೆಗೆ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ರೇಷನ್ ಕಾರ್ಡ್, ಜೆರಾಕ್ಸ್ ಪ್ರತಿಗಳನ್ನು ತೆಗೆದುಕೊಂಡು ಹೋಗಿದೆ.

ಎನ್ಐಎ ತಂಡದಿಂದ ಕಾಲಿದ್ ಸದ್ಯ ವಿಚಾರಣೆ ಮುಕ್ತವಾಗಿದೆ‌. ಶಂಕಿತ ಯುವಕ 22 ವರ್ಷದವನಾಗಿದ್ದು, ಶಾಹಾಪುರದ ಗುತ್ತಿಪೇಟೆಯಲ್ಲಿ ವಾಸವಾಗಿದ್ದಾನೆ. ಹಣ್ಣು ಮತ್ತು ಚಿಲ್ಲರೆ ವ್ಯಾಪಾರ ಜೊತೆಗೆ ಗ್ಯಾರೇಜ್ ನಲ್ಲಿ ಕೆಲಸ ಮಾಡುತ್ತಿದ್ದಾನೆ.