ಬಹುಮಾನ ವಿಜೇತ ವಿದ್ಯಾರ್ಥಿಗಳೊಂದಿಗೆ ಜಿಐಟಿ ಆಡಳಿತ ಮಂಡಳಿ ಅಧ್ಯಕ್ಷ ರಾಜೇಂದ್ರ ಬೆಳಗಾವಕರ್, ಪ್ರಾಚಾರ್ಯ ಡಾ.ಜಯಂತ ಕಿತ್ತೂರ, ಡಾ.ಹರ್ಷಿತ ಕುಲಕರ್ಣಿ ಮತ್ತಿತರರು ಇದ್ದರು. 
ಜಿಲ್ಲೆ

ಐಎಂಟೆಕ್ಸ್ ಫಾರ್ಮಿಂಗ್‌ನಲ್ಲಿ ಸಾಧನೆ

Belagavi

ಬೆಳಗಾವಿ: ಬೆಂಗಳೂರು ಇಂಟರ್‌ನ್ಯಾಷನಲ್ ಎಕ್ಸಿಬಿಷನ್ ಸೆಂಟರ್‌ನಲ್ಲಿ ಇತ್ತೀಚೆಗೆ ಆಯೋಜಿಸಿದ್ದ ‘ಇಂಡಿಯನ್ ಮೆಷಿನ್ ಟೂಲ್ ಮ್ಯಾನುಫ್ಯಾಕ್ಚರರ್ಸ್ ಅಸೋಸಿಯೇಷನ್‌ನ ಏಳನೇ ಆವೃತ್ತಿ, ಐಎಂಟೆಕ್ಸ್ ಫಾರ್ಮಿಂಗ್-2022’ರಲ್ಲಿ ಕೆಎಲ್‌ಎಸ್ ಸಂಸ್ಥೆಯ ಜಿಐಟಿ ಕಾಲೇಜ್ ವಿದ್ಯಾರ್ಥಿಗಳ ತಂಡ ಉತ್ತಮ ಪ್ರದರ್ಶನ ನೀಡಿ, ತೃತೀಯ ಸ್ಥಾನ ಪಡೆದಿದೆ. 16 ದೇಶಗಳಿಂದ 350ಕ್ಕೂ ಹೆಚ್ಚು ಪ್ರದರ್ಶಕರು ಭಾಗವಹಿಸಿದ್ದ ಈ ಪ್ರದರ್ಶನದಲ್ಲಿ ‘ಚಿಕ್ಕ 3ಡಿ ಪ್ರಿಂಟರ್‌ಗಳ ಬೆಡ್ ಗಾತ್ರದ ಮಿತಿಯನ್ನು ನಿವಾರಿಸಲು 3ಡಿ ಮುದ್ರಿತ ಭಾಗಗಳ ಸೇರ್ಪಡೆ’ ಎಂಬ ಶೀರ್ಷಿಕೆಯಡಿ ವಿದ್ಯಾರ್ಥಿಗಳು ತಮ್ಮ ಪ್ರಾಜೆಕ್ಟ್ ಪ್ರದರ್ಶಿಸಿ ನಗದು ಸಹಿತ ತೃತೀಯ ಬಹುಮಾನ ಪಡೆದರು. ಡಾ.ಅರುಣಕುಮಾರ ಪಿ., ಪ್ರೊ.ವೀಣಾ ಬಡಿಗೇರ, ಪ್ರೊ.ಪ್ರಜ್ಞಾ ಕುಲಕರ್ಣಿ, ಪ್ರೊ.ಎಂ.ಸತ್ತಿಗೇರಿ. ವಿದ್ಯಾರ್ಥಿಗಳಾದ ಅಭಿಷೇಕ ಸಾಳೂಂಕೆ, ಮಧುರಂ ಮಂತ್ರಿ, ಆರತಿ ಕಾಲಭೈರವ, ಪ್ರಾಚಿ ಮಂಗಳೆ, ಓಂಕಾರ ದೇಸಾಯಿ, ಶಿವರಾಜ ಚವ್ಹಾಣ ಇದ್ದರು.