Oplus_16908288 
ಜಿಲ್ಲೆ

ಏಳುಬೀಳು ಮೆಟ್ಟಿ ನಿಲ್ಲುವುದು ರಕ್ತಗತವಾಗಲಿ

ರಾಜಣ್ಣ

ವಿರಾಜಪೇಟೆ: ಜೀವನದಲ್ಲಿ ಹಲವಾರು ಏಳುಬೀಳುಗಳು ಇರುವುದು ಸಹಜ. ಆದರೆ ಅವುಗಳ ಮಧ್ಯೆ ಜಯಿಸಿ ಸಮಾಜದಲ್ಲಿ ನೆಲೆ ನಿಲ್ಲುವ ತವಕ ಎಲ್ಲ ಯುವಜನರಿಗೆ ರಕ್ತಗತವಾಗಬೇಕು ಎಂದು ಕೊಡಗು-ಮೈಸೂರು ಲೋಕಸಭಾ ಕ್ಷೇತ್ರದ

ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಸಲಹೆ ನೀಡಿದರು.

ಕೊಡಗು ದಂತ ವೈದ್ಯಕೀಯ ಮಹಾವಿದ್ಯಾಲಯ ವಿರಾಜಪೇಟೆ ಆಶ್ರಯದಲ್ಲಿ ಕಾಲೇಜು ಸಭಾಂಗಣದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಕಾಲೇಜಿನ ರಜತ ಮಹೋತ್ಸವದ ಸಮಾರೋಪ ಸಮಾರಂಭ ಹಾಗೂ ಪದವಿ ಪ್ರದಾನ

ಕಾರ್ಯಕ್ರಮದಲ್ಲಿ ಮಾತನಾಡಿದರು. ಸಮಾಜ ಮೌಲ್ಯವರ್ಧಿತ ಕಾರ್ಯಗಳಿಗೆ ಮನ್ನಣೆ ನೀಡುತ್ತದೆ. ವೈದ್ಯಕೀಯ ಕ್ಷೇತ್ರದಲ್ಲಿ ಗಮನಾರ್ಹ ಬದಲಾವಣೆಯೊಂದಿಗೆ ನೂತನ ಆವಿಷ್ಕಾರಗಳನ್ನು ಮಾಡಲು ಯುವ ವೈದ್ಯರು

ಮುಂದಾಗಬೇಕು. ಕಲಿಕೆ ಪದವಿಗಾಗಿ ಮಾತ್ರ ಸೀಮಿತವಾಗದೆ ಸಮಾಜದ ಒಳಿತಿಗಾಗಿ ಮೀಸಲಾಗಬೇಕು. ಸಮಾಜ ಬಯಸುವುದನ್ನು ಅರಿತು ಸೇವೆಗೆ ನಿರತರಾಗಬೇಕು, ಕಳೆದ 25 ವರ್ಷದಲ್ಲಿ ಸಾವಿರಾರು ನುರಿತ

ವೈದ್ಯರನ್ನು ಸಮಾಜಕ್ಕೆ ಕೊಡಗೆಯಾಗಿ ನೀಡಿರುವ ಕೊಡಗು ದಂತ ವೈದ್ಯಕೀಯ ಕಾಲೇಜಿ ಕೀರ್ತಿ ವಿಶ್ವದೆಲ್ಲೆಡೆ ಪಸರಿಸಲಿ ಎಂದು ಶುಭ ಹಾರೈಸಿದರು.

ಕೊಡಗು ದಂತ ವೈದ್ಯಕೀಯ ಕಾಲೇಜಿನ ಡೀನ್ ಡಾ.ಸುನೀಲ್ ಮುದ್ದಯ್ಯ ಮಾತನಾಡಿ, ಸಂಸ್ಥೆಯು ದಂತ ವೈದ್ಯಕೀಯ ಕ್ಷೇತ್ರದಲ್ಲಿ 25 ವರ್ಷಗಳ ಸುದೀರ್ಘ ಇತಿಹಾಸವನ್ನು ಸೃಷ್ಟಿ ಮಾಡಿದೆ. ವಿದ್ಯಾರ್ಥಿಗಳಿಗೆ ಉತ್ತಮ

ಬೋಧನಾ ವ್ಯವಸ್ಥೆ, ವಾತಾವರಣ, ಹೊಸ ಹೊಸ ಆವಿಷ್ಕಾರಗಳಿಗೆ ಆಯಾಮ ನೀಡುವ ಸಲುವಾಗಿ ನೂತನ ತಂತ್ರಜ್ಞಾನ ಬಳಕೆಯೊಂದಿಗೆ ವಿದ್ಯಾರ್ಥಿಗಳಿಗೆ ಹೊಸ ದಿಕ್ಕು ತೋರಿಸಿದೆ. ನುರಿತ ಉಪನ್ಯಾಸಕರಿಂದ

ಬೋಧನೆಯಿಂದಾಗಿ ಸಾವಿರಾರು ಯುವ ವೈದ್ಯರನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಿದೆ. ಸಂಸ್ಥೆಯು ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯಿಂದ ಮಾನ್ಯತೆ ಮತ್ತು ರಾಷ್ಟೀಯ ಮತ್ತು

ಅಂತಾರಾಷ್ಟ್ರೀಯ ಅನುದಾನಗಳ ಬೆಂಬಲದೊಂದಿಗೆ ವಿದ್ಯಾರ್ಥಿಗಳ ಸಂಶೋಧನೆಗೆ ಪೂರಕವಾದ ವಾತಾವರಣವನ್ನು ಕಲ್ಪಿಸಿಕೊಟ್ಟಿದೆ. ತರಬೇತಿ ಮತ್ತು ರೋಗಿಗಳ ಆರೈಕೆಯಲ್ಲಿ ಕೃತಕ ಬುದ್ಧಿಮತ್ತೆ ವರ್ಧಿತ ರಿಯಾಲಿಟಿ

ತಂತ್ರಜ್ಞಾನವನ್ನು ಅಳವಡಿಸಲಾಗುತಿದ್ದು, ಎಲ್ಲ ಪದವೀಧರರಿಗೆ ಸೀಡ್ಸ್ ಮತ್ತು ಯುಎನ್‌ಇಡಿಎಸ್‌ನೊಂದಿಗೆ ಕೃತಕ ಬುದ್ಧಿಮತ್ತೆ ಯೋಜನೆಯನ್ನು ಜಂಟಿಯಾಗಿ ಪ್ರಾಯೋಜಿಸಿ ಆರು ತಿಂಗಳ ಆರೋಗ್ಯದ ಮಾಹಿತಿ ವ್ಯವಸ್ಥೆ

ಉಚಿತವಾಗಿ ನೀಡಲು ಸಂಸ್ಥೆ ಮುಂದಾಗಿದೆ. 25 ವರ್ಷಗಳಲ್ಲಿ ಉಪನ್ಯಾಸಕರ ಸಹಕಾರ, ಅಡಳಿತ ಮಂಡಳಿ ಟ್ರಸ್ಟಿಗಳ ಮತ್ತು ಇತರ ಬೋಧಕೇತರ ಸಿಬ್ಬಂದಿ ಸಹಕಾರ ಸ್ಮರಿಸುವಂತದ್ದು ಎಂದು ಹೇಳಿದರು.

ಕೊಡಗು ದಂತ ವೈದ್ಯಕೀಯ ಮಾಹಾವಿದ್ಯಾಲಯದ ಪ್ರಾಂಶುಪಾಲ ಕೆ.ಸಿ.ಪೊನ್ನಪ್ಪ ಅವರು ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಬೋಧಿಸಿದರು. ಕಂಜಿತಂಡ ಪೊನ್ನಮ್ಮ ಕುಶಾಲಪ್ಪ ಗ್ರಾಜುಯೆಟು

ಗೋಲ್ಡ್ ಮೆಡಲ್ ಫಾರ್ ಆಕಾಡೆಮಿಕ್ ಪ್ರಶಸ್ತಿಯನ್ನು ಡಾ.ರಜನಿ ಅವರು ಪಡೆದುಕೊಂಡರು, ಕಂಜಿತಂಡ ಎಂ. ಕುಶಾಲಪ್ಪ ಗ್ರಾಜುಯೆಟ್ ಗೋಲ್ಡ್ ಮೆಡಲ್ ಫಾರ್ ಓವರ್ ಆಲ್ ಎಕ್ಸಲೆನ್ಸಿ ಡಾ.ಗಾಯತ್ರಿ ಎಸ್.ಚಂದನ್ ಅವರು

ಅತಿಥಿಗಳಿಂದ ಪಡೆದುಕೊಂಡರು. ಒಟ್ಟು 40 ಮಂದಿ ಪದವೀಧರರಿಗೆ ಮತ್ತು 30 ಮಂದಿ ಸ್ನಾತಕೋತ್ತರ ಪದವೀಧರರಿಗೆ ಸಂಸದರು ಪ್ರಶಸ್ತಿ ಪ್ರಮಾಣಪತ್ರ ವಿತರಿಸಿದರು.

ವೇದಿಕೆಯಲ್ಲಿ ಭಾರತದ ಭವ್ಯ ಪರಂಪರೆಯನ್ನು ಬಿಂಬಿಸುವ ಸಾಂಸ್ಕೃತಿಕ ಕಲಾ ಪ್ರಕಾರಗಳು ನಡೆದವು.

ಕೊಡಗು ದಂತ ವೈದ್ಯಕೀಯ ಮಹಾವಿದ್ಯಾಲಯದ ವಿವಿಧ ವಿಭಾಗಗಳ ಉಪನ್ಯಾಸಕರು, ಪದವಿ ಮತ್ತು ಸ್ನಾತಕೊತ್ತರ ಪದವಿ ವಿದ್ಯಾರ್ಥಿಗಳು ಪಾಲಕರು, ಕಾಲೇಜು ಆಡಳಿತ ಮಂಡಳಿಯ ಸದಸ್ಯರು ಹಾಜರಿದ್ದರು.