ಜಿಲ್ಲೆ

ಏಳು ಜನ ಪಿಎಫಐ, ಎಸ್ ಡಿಪಿಐ ಕಾರ್ಯಕರ್ತರ ಬಂಧನ

ಬಾಗಲಕೋಟೆ: ಶಾಂತಿ ಸುವ್ಯವಸ್ಥೆ ಕಾಪಾಡುವ ಹಿನ್ನಲೆ ಪಿಎಫ್ಐ ಹಾಗೂ ಎಸ್ ಡಿಪಿಐ ಸಂಘಟನೆಯ ಏಳು ಜನರನ್ನು ವಶಕ್ಕೆ ಪಡೆದ್ದ ಪೊಲೀಸರು, ಎಲ್ಲರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ.
ಮಂಗಳವಾರ ಬೆಳಗ್ಗೆ 3 ಗಂಟೆಗೆ ಜಿಲ್ಲೆಯ ವಿವಿಧೆಡೆ ದಾಳಿ ನಡೆಸಿದ್ದ ಪೊಲೀಸರು, ಒಟ್ಟು ಏಳು ಜನರನ್ನು ವಶಕ್ಕೆ ಪಡೆದಿದ್ದರು. ಜಮಖಂಡಿ ನಾಲ್ವರು, ಬನಹಟ್ಟಿ, ಮಹಾಲಿಂಗಪುರ ಹಾಗೂ ಇಳಕಲ್ಲ ತಲಾ ಒಬ್ಬರನ್ನು ವಿಚಾರಣೆಗೆ ಒಳಪಡಿಸಿದ್ದರು.
ನಂತರ ಎಲ್ಲ ಆರೋಪಿಗಳನ್ನು ಆಯಾ ತಾಲೂಕು ತಹಸೀಲ್ದಾರ್ ಎದುರು ಹಾಜರು ಪಡಿಸಿದ್ದರು. ಬಳಿಕ ಎಲ್ಲರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಎಸ್ಪಿ ಜಯಪ್ರಕಾಶ್ ತಿಳಿಸಿದ್ದಾರೆ.
ಜಮಖಂಡಿಯ ನಾಲ್ವರು, ಮಹಾಲಿಂಗಪುರದ ಓರ್ವ ಹಾಗೂ ಬನಹಟ್ಟಿ ಓರ್ವ ಆರೋಪಿಯನ್ನು ಅಕ್ಟೋಬರ್ 11 ರ ವರೆಗೆ ಹಾಗೂ ಇಳಕಲ್ಲ ನಗರದ ಓರ್ವ ಆರೋಪಿಯನ್ನು ಅಕ್ಟೋಬರ್ 3 ರ ವರೆಗೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಆರೋಪಿತರ ವಿರುದ್ದ ಸಿಆರ್ ಪಿಸಿ 107, 151 ಅಡಿ ಕೇಸ್ ದಾಖಲು ಮಾಡಲಾಗಿದೆ.
ಬಂತರನ್ನು ಅಸ್ಗರ್ ಅಲಿ (ಪಿಎಫ್ಐ ಜಿಲ್ಲಾ ಅಧ್ಯಕ್ಷ ಜಮಖಂಡಿ), ಇಮ್ರಾನ್ ಮಳಲಿ (ಪಿಎಫ್ಐ ಸದಸ್ಯ-ಜಮಖಂಡಿ), ಮಹ್ಮದ್ ಗೌಸ್ (ಪಿಎಫ್ ಸದಸ್ಯ ಜಮಖಂಡಿ), ರಾಜೇಸಾಬ ತಾಳಿಕೋಟಿ (ಎಸ್ ಡಿಪಿಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಮಖಂಡಿ) ಮುರ್ತುಜಾ ಮದಲಿ (ಪಿಎಫಐ ಸದಸ್ಯ ಇಳಕಲ್ಲ), ಫಾರುಕ್ ನದಾಫ (ಪಿಎಫ ಐ ತಾಲೂಕು ಕಾರ್ಯದರ್ಶಿ ರಬಕವಿ-ಬನಹಟ್ಟಿ), ಮುಸಾ ಬೂದಿಹಾಳ (ಪಿಎಫ್ಐ ಸದಸ್ಯ ಮಹಾಲಿಂಗಪುರ) ಎಂದು ಗುರುತಿಸಲಾಗಿದೆ.