ಜಿಲ್ಲೆ

ಏರ್ ಗನ್ ನಲ್ಲಿ ನಾಯಿಗೆ ಶೂಟ್, ಆರೋಪಿ ಅರೆಸ್ಟ್

ಉಡುಪಿ: ಕೆಮ್ಮಣ್ಣಿನಲ್ಲಿ ಸಾಕು ನಾಯಿಯೊಂದನ್ನು ಹತ್ಯೆ ಮಾಡಿದ ಆರೋಪದ ಮೇರೆಗೆ ಮಲ್ಪೆ ಪೊಲೀಸರು ಆರೋಪಿಯನ್ನು ಶುಕ್ರವಾರ ಬಂಧಿಸಿದ್ದಾರೆ. ಕೆಮ್ಮಣ್ಣು ನಿವಾಸಿ ಬ್ರಾನ್ ಡಿಸೋಜ ಬಂಧಿತ ಆರೋಪಿ. ಶುಕ್ರವಾರ ಬೆಳಗ್ಗೆ ಏರ್ ಗನ್ ಮೂಲಕ ಗುಂಡಪ್ಪ ಪೂಜಾರಿ ಅವರ ಸಾಕು ನಾಯಿಯನ್ನು ಏರ್ ಗನ್ ಮೂಲ ಶೂಟ್ ಮಾಡಿ ಸಾಯಿಸಲಾಗಿದೆ ಎಂದು ದೂರಲಾಗಿದೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ದೂರದಾಖಲಾಗಿದೆ. 1960 ಪ್ರಾಣಿ ಸಂರಕ್ಷಣಾ ಕಾಯ್ದೆ, ಪ್ರಾಣಿಗಳ ಮೇಲಿನ ಕ್ರೌರ್ಯ ಸೆಕ್ಷನ್ 429 ಅಡಿಯಲ್ಲಿ ಎಫ್ ಐ ಆರ್ ದಾಖಲಿಸಿ ಆರೋಪಿಯನ್ನು ಬಂಧಿಸಲಾಯಿತು.‌ ಸಾಯಂಕಾಲ ಜಮೀನಿನ ಮೇಲೆ ಬಿಡುಗಡೆಗೊಳಿಸಲಾಗಿದೆ. ಆರೋಪಿ ಬಳಿಯಿದ್ದ ಏರ್ ಗನ್ ನ್ನು ಪೊಲೀಸರು ವಶಪಡಿಸಿಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ. ಮಲ್ಪೆ ಮಧ್ವ ರಾಜ್ ಅನಿಮಲ್ ಕೇರ್ ಟ್ರಸ್ಟ್ ನ ಬಬಿತ ಮಧ್ವರಾಜ್ ಮತ್ತು ಪ್ರಾಣಿಗಳ ಸಂರಕ್ಷಣೆ ಕಾರ್ಯಕರ್ತರಾದ ಡಾ.ಸುಹಾಸ್, ರೋಶ್ನಿ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದು, ಕಾನೂನು ಹೋರಾಟ ಮುಂದುವರಿಸಿ ಮೃತಪಟ್ಟ ನಾಯಿಗೆ ನ್ಯಾಯ ಒದಗಿಸುತ್ತೇವೆ ಎಂದು ಹೇಳಿದ್ದಾರೆ.