ಬೆಂಗಳೂರಿನ ವಿಧಾನಸೌಧದಲ್ಲಿ ಏಮ್ಸ್ ಹೋರಾಟ ಸಮಿತಿ ನಿಯೋಗ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಗುರುವಾರ ಭೇಟಿಯಾಗಿ ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆಗೆ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದರು. ಶಾಸಕರಾದ ಹಂಪನಗೌಡ ಬಾದರ್ಲಿ, ಬಸನಗೌಡ ದದ್ದಲ್, ಹೋರಾಟ ಸಮಿತಿ ಸಂಚಾಲಕ ಡಾ.ಬಸವರಾಜ ಕಳಸ, ಪದಾಕಾರಿಗಳಾದ ಅಶೋಕಕುಮಾರ ಜೈನ್, ಜಾನ್‌ವೆಸ್ಲಿ ಇದ್ದರು. 
ಜಿಲ್ಲೆ

ಏಮ್ಸ್ ಸ್ಥಾಪನೆಗಾಗಿ ಪ್ರಧಾನಿ ಭೇಟಿ: ಸಿಎಂ ಭರವಸೆ

ರಾಯಚೂರು: ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆಗಾಗಿ ಸಚಿವರ ನಿಯೋಗವನ್ನು ದೆಹಲಿಗೆ ಕಳುಹಿಸುವುದರ ಜತೆಗೆ ಖುದ್ದಾಗಿ ಪ್ರಧಾನಿಗಳನ್ನು ಭೇಟಿಯಾಗಿ ಮನವಿ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಏಮ್ಸ್ ಹೋರಾಟ ಸಮಿತಿಗೆ ಭರವಸೆ ನೀಡಿದರು.
ಬೆಂಗಳೂರಿನ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಏಮ್ಸ್ ಹೋರಾಟ ಸಮಿತಿ ನಿಯೋಗ ಗುರುವಾರ ಭೇಟಿಯಾಗಿ ರಾಯಚೂರಿನಲ್ಲಿ ಏಮ್ಸ್ ಸ್ಥಾಪಿಸುವಂತೆ ಕೇಂದ್ರ ಸಚಿವರಿಗೆ ಪತ್ರ ಬರೆದಿರುವುದಕ್ಕೆ ಅಭಿನಂದನೆಗಳನ್ನು ತಿಳಿಸಿ, ಈ ಬಗ್ಗೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವಂತೆ ಮನವಿ ಮಾಡಿತು.
ಕೇಂದ್ರ ಆರೋಗ್ಯ ಸಚಿವರಿಗೆ ಪತ್ರ ಕಳಹಿಸಿ ತಿಂಗಳಾದರೂ ಉತ್ತರ ಬರದಿರುವ ಕಾರಣಕ್ಕೆ ರಾಜ್ಯದ ಸಚಿವರು ಹಾಗೂ ಹೋರಾಟ ಸಮಿತಿ ನಿಯೋಗವನ್ನು ದೆಹಲಿಗೆ ಕರೆದುಕೊಂಡು ಹೋಗಿ ಮನವಿ ಮಾಡಲು ಅಗತ್ಯ ಕ್ರಮಕೈಗೊಳ್ಳಬೇಕು ಎಂದು ನಿಯೋಗ ಒತ್ತಾಯಿಸಿತು.
ಮನವಿ ಸ್ವೀಕರಿಸಿ ಮಾತನಾಡಿದ ಸಿದ್ದರಾಮಯ್ಯ, ಸಚಿವರ ನೇತೃತ್ವದ ನಿಯೋಗವನ್ನು ಕೇಂದ್ರಕ್ಕೆ ಕಳುಹಿಸುವುದರ ಜತೆಗೆ ಖುದ್ದಾಗಿ ಪ್ರಧಾನಿಗಳನ್ನು ಶೀಘ್ರದಲ್ಲಿ ಭೇಟಿಯಾಗಿ ರಾಯಚೂರಿನಲ್ಲಿ ಏಮ್ಸ್ ಸ್ಥಾಪಿಸುವಂತೆ ಮನವಿ ಮಾಡಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಶಾಸಕರಾದ ಹಂಪನಗೌಡ ಬಾದರ್ಲಿ, ಬಸನಗೌಡ ದದ್ದಲ್, ಬಸನಗೌಡ ತುರ್ವಿಹಾಳ, ಬಸವರಾಜ ರಾಯರೆಡ್ಡಿ, ಎಂಎಲ್ಸಿ ಶರಣಗೌಡ ಬಯ್ಯಪುರ, ಹೋರಾಟ ಸಮಿತಿ ಸಂಚಾಲಕ ಡಾ.ಬಸವರಾಜ ಕಳಸ, ಪದಾಕಾರಿಗಳಾದ ಅಶೋಕಕುಮಾರ ಜೈನ್, ಜಾನ್‌ವೆಸ್ಲಿ, ಜಸವಂತರಾವ್ ಕಲ್ಯಾಣಕಾರಿ, ಡಾ.ಎಸ್.ಎಸ್.ಪಾಟೀಲ್, ಡಿ.ಎಚ್.ಕಂಬಳಿ, ಬಾಬುರಾವ್ ಶೇಗುಣಸಿ ಇದ್ದರು.