ಜಿಲ್ಲೆ

ಏತನೀರಾವರಿಗೆ ಸರ್ಕಾರದ ಅನುಮೋದನೆ

ಕಬ್ಬೂರ: ಮಡ್ಡಿಭಾಗದ ರೈತರ ಬಹುದಿನಗಳ ಕನಸು ನನಸಾಗುವ ಸಮಯ ಕೊಡಿಬಂದಿದೆ. ಕರಗಾಂವ ಏತನೀರಾವರಿ ಯೋಜನೆಗೆ ಸರ್ಕಾರದಿಂದ ಅನುಮೋದನೆ ದೊರೆತಿದೆ. ಶೀಘ್ರದಲ್ಲಿ ಕಾಮಗಾರಿಗೆ ಉಮರಾಣಿ ಹದ್ದಿನಲ್ಲಿ ಚಾಲನೆ ನೀಡಿ ರೈತರಿಗೆ ಅನುಕೂಲ ಮಾಡಲಾಗುವುದು ಎಂದು ಶಾಸಕ ದುರ್ಯೋಧನ ಐಹೊಳೆ ಹೇಳಿದರು.

ಸಮೀಪದ ಮಾಡಲಗಿ-ಕಬ್ಬೂರ ರಸ್ತೆ ಅಗಲೀಕರಣ ಹಾಗೂ ಡಾಂಬರೀಕರಣ ಕಾಮಗಾರಿಗೆ ಭಾನುವಾರ ಚಾಲನೆ ನೀಡಿ ಮಾತನಾಡಿ, ರಸ್ತೆ ಅಗಲೀಕರಣವಾಗುವುದರಿಂದ ಅನುಕೂಲವಾಗಲಿದೆ. ಕ್ಷೇತ್ರದ ಬಾಕಿಯಿರುವ ಕಾಮಗಾರಿಗಳನ್ನು ಹಂತ ಹಂತವಾಗಿ ಮಾಡಲಾಗುವುದು. ನಿಪ್ಪಾಣಿಯಲ್ಲಿ ಏ.೧೫ರಂದು ನಡೆಯುವ ಡಾ.ಬಿ.ಆರ್.ಅಂಬೇಡ್ಕರ್ ಭೀಮಹೆಜ್ಜೆ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಕ್ಷೇತ್ರದ ಜನರು ಆಗಮಿಸಬೇಕು ಎಂದರು.ರೈತ ಪಿಕೆಪಿಎಸ್ ಅಧ್ಯಕ್ಷ ಮಹಾಲಿಂಗ ಹಂಜಿ ಮಾತನಾಡಿ, ಸರ್ಕಾರದಲ್ಲಿ ಹಣವಿಲ್ಲದಿದ್ದರೂ ಹೆಚ್ಚಿನ ರೀತಿಯಲ್ಲಿ ರಾಯಬಾಗ ಮತಕ್ಷೇತ್ರಕ್ಕೆ ಅನುದಾನ ತಂದು ಈ ಭಾಗವನ್ನು ಅಭಿವೃದ್ಧಿಪಡಿಸುತ್ತಿದ್ದಾರೆ ಎಂದರು. ಹೀರಾ ಶುರ‍್ಸ್ ನಿರ್ದೇಶಕ ಸುರೇಶ ಬೆಲ್ಲದ ಮಾತನಾಡಿದರು.

ಜೆ.ಆರ್.ಪಾಟೀಲ, ಕಲ್ಲಪ್ಪ ಕರಗಾವ, ಶಂಕರ ಟರಕಿ, ಮಹಾದೇವ ಪ್ರಧಾನಿ, ಬಸಲಿಂಗ ಕಾಡೇಶಗೋಳ, ಬಾಳು ಕುಕನೂರ, ಶ್ರೀಶೈಲ ತೇರದಾಳೆ, ಎಇ ಐ.ಎ.ಕಾಕೋಳ, ಗುತ್ತಿಗೆದಾರ ಗೀರಿಶ ಬೀಸಾಲಾಪುರೆ, ಮುರುಗೇಶ ಬೆಲ್ಲದ, ರಮೇಶ ಕಾಮಗೌಡ, ಮಹಾದೇವ ಬಾನಿ, ರಾಜು ಕಾಮಗೌಡ, ಸುಕುಮಾರ ಕಾಮುಗೋಳ ಇತರರು ಇದ್ದರು.