????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????? 
ಜಿಲ್ಲೆ

ಏಕಲವ್ಯ ಶಾಲೆಗೆ ಡಿಸಿ, ಸಿಇಒ ಭೇಟಿ

ಹನೂರು: ತಾಲೂಕಿನ ಮಂಗಲ ಗ್ರಾಮದ ಏಕಲವ್ಯ ಮಾದರಿ ವಸತಿ ಶಾಲೆಗೆ ಸೋಮವಾರ ಜಿಲ್ಲಾಧಿಕಾರಿ ಸಿ.ಟಿ ಶಿಲ್ಪಾನಾಗ್ ಹಾಗೂ ಜಿಲ್ಲಾ ಪಂಚಾಯಿತಿ ಸಿಇಒ ಮೋನಾರೋತ್ ಭೇಟಿ ನೀಡಿ ಶಿಕ್ಷಕರ ಬೋಧನೆ, ಮಕ್ಕಳ ಕಲಿಕಾ ಮಟ್ಟವನ್ನು ಪರೀಕ್ಷಿಸಿದರು.

ಶಾಲೆಗೆ ಭೇಟಿ ನೀಡಿದ ಇಬ್ಬರು ಅಧಿಕಾರಿಗಳು ತರಗತಿ ಕೋಣೆಗೆ ತೆರಳಿ ಮಕ್ಕಳೊಂದಿಗೆ ಕುಳಿತು ಶಿಕ್ಷಕರು ಬೋಧಿಸುತ್ತಿದ್ದ ವಿಜ್ಞಾನ ವಿಷಯವನ್ನು ಕೆಲಕಾಲ ಆಲಿಸಿದರು. ಚೆನ್ನಾಗಿ ಓದುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಗ್ರಂಥಾಲಯಕ್ಕೆ ತೆರಳಿ ಸಂಗ್ರಹವಾಗಿದ್ದ ಪುಸ್ತಕಗಳನ್ನು ಪರಿಶೀಲಿಸಿದರು. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅನುಕೂಲವಾಗುವಂತೆ ಮಕ್ಕಳಿಗೆ ಈಗಿನಿಂದಲೇ ತರಬೇತಿ ನೀಡಬೇಕು ಎಂದು ಪ್ರಾಂಶುಪಾಲ ಶ್ಯಾಮ್‌ಲಾಲ್ ಅವರಿಗೆ ಸೂಚಿಸಿದರು. ಬಳಿಕ 6ನೇ ತರಗತಿ ಕೊಠಡಿಗೆ ತೆರಳಿ ಡಿಕ್ಟೇಷನ್ ನೀಡುವುದರ ಮೂಲಕ ಮಕ್ಕಳ ಕಲಿಕಾ ಮಟ್ಟವನ್ನು ಪರೀಕ್ಷಿಸಿದರು. ಪ್ರಯೋಗಾಲಯಕ್ಕೆ ತೆರಳಿ ವಿದ್ಯಾರ್ಥಿಗಳ ಅಭ್ಯಾಸ ವೀಕ್ಷಿಸಿ ಅಗತ್ಯ ಸಲಹೆ ನೀಡಿದರು.

ಶಾಲೆಯಲ್ಲಿ ನೀಡುತ್ತಿರುವ ಶಿಕ್ಷಣ, ಊಟ ಹಾಗೂ ಸೌಕರ್ಯದ ಬಗ್ಗೆ ಮಕ್ಕಳಿಂದ ಮಾಹಿತಿ ಪಡೆದರು. ಬಳಿಕ ಶಿಕ್ಷಕರ ಜತೆ ಕೆಲಕಾಲ ಚರ್ಚಿಸಿ ಉತ್ತಮ ಫಲಿತಾಂಶಕ್ಕೆ ಹೆಚ್ಚಿನ ಒತ್ತು ನೀಡುವಂತೆ ಸಲಹೆ ನೀಡಿದರು. ಬಾಲಕಿಯರ ವಿದ್ಯಾರ್ಥಿನಿಯಲದ ಕೊಠಡಿಗೆ ತೆರಳಿದ ಅಧಿಕಾರಿಗಳು ವ್ಯವಸ್ಥೆ ಪರಿಶೀಲಿಸಿದರು. ಸ್ವಚ್ಛತೆ ಕಾಪಾಡುವಂತೆ ಸಲಹೆ ನೀಡಿದರು. ಶೌಚಗೃಹದ ದುರ್ವಾಸನೆಯನ್ನು ಮನಗಂಡು ಶುಚಿತ್ವ ಕಾಪಾಡುವಂತೆ ಪ್ರಾಶುಂಪಾಲರಿಗೆ ಸೂಚಿಸಿದರು. ಭೋಜನಾಲಯಕ್ಕೆ ತೆರಳಿ ಮಕ್ಕಳೊಂದಿಗೆ ಊಟ ಸವಿಯುವುದರ ಮೂಲಕ ಆಹಾರದ ಗುಣಮಟ್ಟ ಪರಿಶೀಲಿಸಿದರು. ಇದೇ ವೇಳೆ ವಿದ್ಯಾರ್ಥಿನಿಯರು ಡಿಸಿ ಶಿಲ್ಪಾನಾಗ್ ಅವರ ಬಳಿ ಆಗಮಿಸಿ ಭಾಷಾ ಸಮಸ್ಯೆಯಿಂದ ಗಣಿತ ಹಾಗೂ ಭೌತಶಾಸ್ತ್ರ ಸರಿಯಾಗಿ ಅರ್ಥವಾಗುತ್ತಿಲ್ಲ. ಇದರಿಂದ ಪರೀಕ್ಷೆ ಎದುರಿಸಲು ಕಷ್ಟವಾಗುತ್ತಿದೆ. ಆದ್ದರಿಂದ ಆಫ್‌ಲೈನ್ ತರಗತಿ ಆರಂಭಿಸುವಂತೆ ಮನವಿ ಮಾಡಿದರು. ಇದಕ್ಕೆ ಡಿಸಿ ಅವರು ಸ್ಪಂದಿಸಿ ಈ ಬಗ್ಗೆ ಅಗತ್ಯ ಕ್ರಮವಹಿಸಿ ಅನುಕೂಲ ಕಲ್ಪಿಸಲಾಗುವುದು. ಒಟ್ಟಿನಲ್ಲಿ ಎಲ್ಲರು ಓದಿನ ಕಡೆ ಹೆಚ್ಚು ಒತ್ತು ನೀಡಬೇಕು ಎಂದು ತಿಳಿಸಿದರು.

ವೇತನ ಹೆಚ್ಚಿಸಿ: ಹೊರಗುತ್ತಿಗೆ ಅಡುಗೆ ಸಹಾಯಕ ಸಿಬ್ಬಂದಿ ಮಾತನಾಡಿ, ಶಾಲೆಯಲ್ಲಿ ಹೆಚ್ಚಿನ ವಿದ್ಯಾರ್ಥಿಗಳಿದ್ದು ಕಾರ್ಯಭಾರ ಹೆಚ್ಚಿದೆ. ನೀಡುತ್ತಿರುವ ಸಂಬಳ ಕಡಿಮೆ ಇದೆ. ಇದರಿಂದ ಕುಟುಂಬ ನಿರ್ವಹಣೆ ಕಷ್ಟವಾಗಿದೆ. ಹಾಗಾಗಿ ವೇತನ ಹೆಚ್ಚಿಸುವಂತೆ ಮನವಿ ಮಾಡಿದರು. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು ಅನುಕೂಲ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.

ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ:

ಬಳಿಕ ಮಾಧ್ಯಮದವರೊಂದಿಗೆ ಡಿಸಿ ಸಿ.ಟಿ.ಶಿಲ್ಪಾನಾಗ್ ಮಾತನಾಡಿ, ಕಳೆದ ಬಾರಿ ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ಫಲಿತಾಂಶ ಕುಂಠಿತವಾಗಿದೆ. ಹಾಗಾಗಿ ಶಾಲೆಗಳಿಗೆ ಭೇಟಿ ನೀಡಿ ಪರಿಶೀಲಿಸಲಾಗುತ್ತಿದೆ. ಏಕಲವ್ಯ ಶಾಲೆಯಲ್ಲಿ ಇಂಗ್ಲಿಷ್ ಮಾಧ್ಯಮದ ಮೂಲಕ ಶಿಕ್ಷಣ ನೀಡಲಾಗುತ್ತಿದ್ದು, ಗಿರಿಜನ ಮಕ್ಕಳಿಗೆ ಹೆಚ್ಚಿನ ಒತ್ತು ನೀಡಲಾಗಿದೆ. 400 ಮಕ್ಕಳು ದಾಖಲಾಗಿದ್ದಾರೆ. ಕಳೆದ ಬಾರಿ ಎಸ್ಸೆಸ್ಸೆಲ್ಸಿಯಲ್ಲಿ ಶೇ.70 ಮಾತ್ರ ಫಲಿತಾಂಶ ಗಳಿಸಿದ್ದು, ಬೇಸರವನ್ನು ಉಂಟು ಮಾಡಿದೆ. ಹಾಗಾಗಿ ಶಾಲೆಗೆ ಭೇಟಿ ನೀಡಿದ್ದು, ಸುಧಾರಣೆಗೆ ಅಗತ್ಯ ಸೂಚನೆ ನೀಡಲಾಗಿದೆ. ಇತ್ತ ಸರ್ಕಾರಿ ಶಾಲೆಯಿಂದ ದಾಖಲಾತಿ ಪಡೆದ ಮಕ್ಕಳು ಇಂಗ್ಲಿಷ್ ಮಾಧ್ಯಮಕ್ಕೆ ಹೊಂದಿಕೊಳ್ಳಲು ಕಷ್ಟವಾಗುತ್ತಿದೆ ಎಂದು ತಿಳಿದು ಬಂದಿದೆ. ಹಾಗಾಗಿ ಕನ್ನಡ ಭಾಷೆಯನ್ನು ಬಲ್ಲ ಇಂಗ್ಲಿಷ್ ಶಿಕ್ಷಕರನ್ನು 6ನೇ ತರಗತಿಗೆ 3 ತಿಂಗಳ ಕಾಲ ನಿಯೋಜಿಸಲಾಗುವುದು. ಇನ್ನು ಪ್ರೌಢಾವಸ್ಥೆಗೆ ಬಂದ ಹೆಣ್ಣು ಮಕ್ಕಳನ್ನು ಕೆಲ ಪಾಲಕರು ಶಾಲೆಗೆ ಮರುಳಿಸುತ್ತಿಲ್ಲ ಎಂಬುದು ಹಾಜರಾತಿ ಪುಸ್ತಕದ ಪರಿಶೀಲನೆಯಿಂದಾಗಿ ತಿಳಿದು ಬಂದಿದೆ. ಆ ಮಕ್ಕಳನ್ನು ಮರಳಿ ಶಾಲೆಗೆ ಕರೆ ತರುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಗುಣಮಟ್ಟದ ಶಿಕ್ಷಣ ದೊರಕಬೇಕು ಎನ್ನುವುದೇ ನಮ್ಮ ಉದ್ದೇಶ ಎಂದು ತಿಳಿಸಿದರು.

ತಹಸೀಲ್ದಾರ್ ವೈ.ಕೆ.ಗುರುಪ್ರಸಾದ್, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಬಿಂದ್ಯಾ, ಆರ್‌ಐ ಶೇಷಣ್ಣ, ಶಿಕ್ಷಕರು ಇದ್ದರು.