ಜಿಲ್ಲೆ

ಏಕನಾಥಿ, ಬರಗೇರಿಗೆ ಬಳೆ ಅಲಂಕಾರ 6ಕ್ಕೆ

ಚಿತ್ರದುರ್ಗ: ಗೌರಿ ಹಬ್ಬದ ಅಂಗವಾಗಿ ಸೆ. 6ರಂದು ಕೋಟೆನಗರಿಯ ಹೊಳಲ್ಕೆರೆ ರಸ್ತೆಯಲ್ಲಿರುವ ನಗರದೇವತೆ ಬರಗೇರಮ್ಮ ದೇವಿಗೆ ಸತತ 10ನೇ ವರ್ಷವೂ ಲಕ್ಷಾಂತರ ಬಳೆಗಳಿಂದ ಶುಕ್ರವಾರ ವಿಶೇಷಾಲಂಕಾರ ಸೇವೆ ಜರುಗಲಿದೆ.

ಅದೇ ರೀತಿ ಮೇಲುದುರ್ಗದಲ್ಲಿನ ಏಕನಾಥೇಶ್ವರಿ ದೇವಿಗೂ ಅಸಂಖ್ಯಾತ ಬಳೆಗಳಿಂದ ಅಲಂಕಾರ ನೆರವೇರಲಿದೆ. ಉಚ್ಚಂಗಿಯಲ್ಲಮ್ಮ, ಕಣಿವೆ ಮಾರಮ್ಮ, ತ್ರಿಪುರಸುಂದರಿ ತಿಪ್ಪಿನಘಟ್ಟಮ್ಮ, ಗೌರಸಂದ್ರ ಮಾರಮ್ಮ, ಬನ್ನಿ ಮಹಾಕಾಳಿ, ಚೌಡೇಶ್ವರಿ, ಕುಕ್ಕವಾಡೇಶ್ವರಿ ಸೇರಿ ಶಕ್ತಿದೇವತೆಗಳ ದೇಗುಲಗಳಲ್ಲೂ ವಿಶೇಷ ಪೂಜೆ, ಪ್ರಾರ್ಥನೆ ಜರುಗಲಿದೆ.